ಶ್ರೀ ಕ್ಷೇತ್ರ ಇರುವೈಲು : ೭೫ ನೇ ವರ್ಷದ ಭಜನಾ ಮಂಗಲೋತ್ಸವದ ನಗರ ಭಜನೆ ಆರಂಭ
ಮೂಡುಬಿದಿರೆ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶ್ರೀ ಕ್ಷೇತ್ರ ಇರುವೈಲು ಇದರ ೭೫ ನೇ ಭಜನಾ ಮಂಗಲೋತ್ಸವದ ನಗರ ಭಜನೆಯನ್ನು ದೇವಿಯ ಸನ್ನಿಧಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಆಸ್ರಣ್ಣ ಅವರು ಪೂಜಾ ವಿಧಿ ವಿಧಾನಗಳೊಂದಿಗೆ ಭಾನುವಾರ ಆರಂಭಿಸಲಾಯಿತು.
ಭಜನಾ ಪ್ರಿಯೇ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಧನು ಸಂಕ್ರಮಣದಿಂದ ಆರಂಭಗೊಂಡು ಮಕರ ಸಂಕ್ರಮಣದವರೆಗೆ ಊರ ಹಾಗೂ ಪರವೂರ ಗ್ರಾಮಗಳಿಗೆ ಹಿರಿಯರು ಭಜನಾ ಸಂಕೀರ್ತನೆದೊಂದಿಗೆ ಪ್ರಾರಂಭಿಸಿರುವ ಈ ನಗರ ಭಜನೆಗೆ ಸುವರ್ಣ ಮಹೋತ್ಸವದ ಸಂಭ್ರಮ. ಈ ಸಂಭ್ರಮದ ನೆನಪನ್ನು ಸ್ಮರಣೀಯಗೊಳಿಸುವ ಉದ್ದೇಶದಿಂದ ಕ್ಷೇತ್ರದಲ್ಲಿ ಬಾಕಿ ಇರುವ ಅಭಿವೃದ್ಧಿ ಕಾರ್ಯಗಳಾದ ದೇವಸ್ಥಾನದ ಹೊರಾಂಗಣಕ್ಕೆ ಶಾಶ್ವತ ಚಪ್ಪರ, ಹಾಸುಕಲ್ಲು ಹಾಗೂ ಆವರಣಗೋಡೆ ನಿರ್ಮಿಸಬೇಕೆಂಬುದು ಯೋಜನೆಯನ್ನಿಟ್ಟುಕೊಂಡಿದ್ದುಈ ಯೋಜನೆಗೆ ಊರ-ಪರವೂರ ಭಕ್ತಾದಿಗಳು ಸಹಕರಿಸುವಂತೆ ಭಜನಾ ಮಂಡಳಿಯವರು ವಿನಂತಿಸಿದರು.
ದಾನಿಗಳಾದ ಶಂಭು ಶೆಟ್ಟಿ ಕಾಳೂರು ಅವರು ೨ ಡಬ್ಬ ಎಣ್ಣೆ ,ಕೇಸರಿ ಶಾಲು, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಸೋಮಶೇಖರ್ ಕೋಟ್ಯಾನ್ ಅಣ್ಣುಕೋಡಿ ಹಾಗೂ ರುಕ್ಕಯ್ಯ ಪೂಜಾರಿ ಅಳಿಯೂರು ಅವರು ಭಜಕರಿಗೆ ಕೇಸರಿ ಶಾಲನ್ನು ನೀಡಿ ಗೌರವಿಸಿದರು.
೭೫ ನೇ ವರ್ಷದ ಭಜನಾ ಮಂಗಲೋತ್ಸವ ಸ್ಮರಣಾರ್ಥ ಅನ್ನದಾನಕ್ಕೆ ದಿವಾಕರ ಪ್ರಭು ಅವರು ೨೫ ಸಾವಿರ ನಗದು ನೀಡಿ ಸಹಕರಿಸಿದರು.
ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಐ ಕುಮಾರ್ ಶೆಟ್ಟಿ, ಭಜನಾ ಮಂಡಳಿಯ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಕಾರ್ಯದರ್ಶಿ ನಾರಾಯಣ ದೇವಾಡಿಗ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಪೂವಪ್ಪ ಸಾಲ್ಯಾನ್, ರಾಜೇಶ್ ಪೂಜಾರಿ ಕಾಳೂರು, ಶುಭಕರ ಕಾಜವ ಕುವೆಸ್ಥಳ, ದಿನೇಶ್ ಶೆಟ್ಟಿ ದೊಡ್ಡಗುತ್ತು, ಚೆನ್ನಕೇಶವ ಶೆಟ್ಟಿ, ಹಿರಿಯ ಭಜಕರಾದ ಹರಿಪ್ರಸಾದ್ ಶೆಟ್ಟಿ ಕೊಲೈಕೋಡಿ, ಏಕನಾಥ ದೇವಾಡಿಗ ಹಾಗೂ ,ಭಜಕರು ಈ ಸಂದರ್ಭದಲ್ಲಿದ್ದರು.
0 Comments