ಆಳ್ವಾಸ್‌ಗೆ ಅವಳಿ ಪ್ರಶಸ್ತಿ ರಾಜ್ಯಮಟ್ಟದ ಜ್ಯೂನಿಯರ ಬಾಲಕ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಫ್

ಜಾಹೀರಾತು/Advertisment
ಜಾಹೀರಾತು/Advertisment

 ಆಳ್ವಾಸ್‌ಗೆ ಅವಳಿ ಪ್ರಶಸ್ತಿ 

 ರಾಜ್ಯಮಟ್ಟದ ಜ್ಯೂನಿಯರ ಬಾಲಕ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಫ್

ಮೂಡುಬಿದಿರೆ: ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಅಸೋಸಿಯನ್ ಹಾಗೂ ತುಮಕೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಇವುಗಳ ಜಂಟಿ ಆಶ್ರಯದಲ್ಲಿ ಮಧುಗಿರಿ ಸ್ಪೋಟ್ಸ್ ಕ್ಲಬ್ ಮಧುಗಿರಿಯಲ್ಲಿ ನಡೆದ  ಕರ್ನಾಟಕ ರಾಜ್ಯಮಟ್ಟದ ಜ್ಯೂನಿಯರ ಬಾಲಕ ಹಾಗೂ ಬಾಲಕಿಯರ ಎರಡು  ವಿಭಾಗದ ಪ್ರಥಮ ಪ್ರಶಸ್ತಿ ಹಾಗೂ ಬಾಲಕಿಯರ ದ್ವಿತೀಯ ಪ್ರಶಸ್ತಿಯನ್ನು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡರು. ಬಾಲಕರ ವಿಭಾಗದ ಪೈನಲ್ಸ್ನಲ್ಲಿ ಆಳ್ವಾಸ್ ಬಾಲಕರ ತಂಡ ಬೆಂಗಳೂರಿನ ರಾಜೇಶ್ವರಿ ಯುತ್ ಕ್ಲಬ್ (ಆರ್‌ವೈಸಿ) ತಂಡವನ್ನು ೩೫-೩೧ ಹಾಗೂ ೩೫-೨೭ ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗಳಿಸಿತು.  ಆಳ್ವಾಸ್ ಬಾಲಕಿಯರ ತಂಡ ಫೈನಲ್ಸ್  ಹಣಾಹಣಿಯಲ್ಲಿ ಆಳ್ವಾಸ್‌ನ ಎ ತಂಡವನ್ನು, ಆಳ್ವಾಸ್‌ನ ಬಿ ತಂಡವು ೩೫-೨೯ ಹಾಗೂ ೩೫-೩೩ ನೇರ ಸೆಟ್‌ಗಳಿಂದ ಸೋಲಿಸಿ  ಪ್ರಥಮ ಹಾಗೂ ದ್ವಿತೀಯ  ಸ್ಥಾನÀ್ವನ್ನು ಪಡೆದುಕೊಂಡವು.  ಬಾಲಕರ ವಿಭಾಗದಲ್ಲಿ ರಾಜ್ಯದ ಸುಮಾರು ೨೪ ತಂಡಗಳು ಹಾಗೂ ಬಾಲಕಿಯರ ವಿಭಾದಲ್ಲಿ ೧೬ ತಂಡಗಳು ಭಾಗವಹಿಸಿದ್ದವು.  ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Post a Comment

0 Comments