ಶ್ರವಣಬೆಳಗೊಳ ಶ್ರೀ ಚಾರು ಕೀರ್ತಿ ಭಟ್ಟಾರಕ ಶ್ರೀಗಳ ವರ ನಿಷಿದಿ ಮಂಟಪ ಲೋಕಾರ್ಪಣೆ
ಶ್ರವಣಬೆಳಗೊಳದ ದಿಗಂಬರ ಜೈನಮಠದ ಪರಮಪೂಜ್ಯ ಜಗದ್ಗುರು, ಕರ್ಮ ಯೋಗಿ ಸ್ವಸ್ತಿ ಶ್ರೀ ಚಾರು ಕೀರ್ತಿ ಭಟ್ಟರಕ ಮಹಾಸ್ವಾಮಿಗಳವರ ನಿಶದಿ ಮಂಟಪ ಲೋಕಾರ್ಪಣೆ ಇಂದು ನಡೆಯಲಿದೆ.
ಈ ಲೋಕಾರ್ಪಣ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕರ್ಮ ಯೋಗಿ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟರಕ ಮಹಾಸ್ವಾಮಿಗಳವರ ನಿಷಿದಿ ಮಂಟಪಕ್ಕೆ ಚರಣಾಭಿಷೇಕ ,ವಿನಯಂಜಲಿ ಸಭೆ, ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲಾ ಭಟ್ಟರಕ ಶ್ರೀಗಳು ಭಾಗವಹಿಸಲಿದ್ದಾರೆ. ಪೂಜ್ಯ ಶ್ರೀಗಳ ವರು ಜೈನ ಸಂಸ್ಕೃತಿಯ ಉಳಿವಿಗೆ ಹಲವು ಬಸದಿಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ .ಪುರಾತನ ಜೈನ ಮಠಗಳ ಪುನರ್ ಸ್ಥಾಪನೆಗೆ ಮಠಾಧೀಶರನ್ನು ನೇಮಿಸಿದ್ದಾರೆ .ಜೈನ ಧರ್ಮ ಸುಹಾಸನೆಯನ್ನು ನಾಡಿನಾದ್ಯಂತ ಹರಡಿದ ಪೂಜ್ಯರು, ನಲ್ಲೂರು, ಸಾಂಗ್ಲಿ, ವಿಜಯಪುರ ಸೇರಿದಂತೆ ಹಲವು ಕಡೆ ಚತುರ್ಮಾಸ ಗಳನ್ನು ಆಚರಿಸಿದ್ದರು.
0 Comments