"ವೈಭವದಿಂದ ನಡೆದ ಜೈನರ ಗುತ್ತಿ ಜಿನ ಬಿಂಬ ಪಂಚ ಕಲ್ಯಾಣ ಮಹೋತ್ಸವ ಸಂಪನ್ನ"

ಜಾಹೀರಾತು/Advertisment
ಜಾಹೀರಾತು/Advertisment

 "ವೈಭವದಿಂದ ನಡೆದ ಜೈನರ ಗುತ್ತಿ   ಜಿನ ಬಿಂಬ ಪಂಚ ಕಲ್ಯಾಣ ಮಹೋತ್ಸವ ಸಂಪನ್ನ"   


 ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಮಾದಿಹಳ್ಳಿ  ಹೋಬಳಿ ಗೆ ಸೇರಿದ  ಜೈನರ ಗುತ್ತಿಯ  ಜಿನ ಬಿಂಬ ಪಂಚ ಕಲ್ಯಾಣ ಪ್ರತಿಷ್ಠಾಪನ ಮಹೋತ್ಸವ 2024ರ ನಂಬರ್ 29ರ ಶುಕ್ರವಾರ ದಿಂದ 2024ರ ಡಿಸೆಂಬರ್ 4ರ ವರೆಗೆ  ಮುನಿಶ್ರೀ ವೀರ ಸಾಗರ  ಮಹಾರಾಜರ  ನೇತೃತ್ವದಲ್ಲಿ ಹಾಗೂ ಆಚಾರ್ಯ ವಿಶುದ್ಧ ಸಾಗರ್ ಮುನಿ ಮಹಾರಾಜರ ಸಂಘ, ಶ್ರೀ ಚಂದ್ರಸಾಗರ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ವೈಭವದಿಂದ ನೆರವೇರಿತು.


 ಕಾರ್ಯಕ್ರಮದ ಅಂಗವಾಗಿ ಗರ್ಭಕಲ್ಯಾಣಕ ಪೂರ್ವ ಕ್ರಿಯೆ,  ಗರ್ಭ ಕಲ್ಯಾಣಕ ಉತ್ತರಕ್ರಿಯೆ, ಜನ್ಮ ಕಲ್ಯಾಣಕ ,ತಪಕ ಕಲ್ಯಾಣಕ, ಕೇವಲ ಜ್ಞಾನ ಕಲ್ಯಾಣಕ, ಹಾಗೂ ಮೋಕ್ಷ ಕಲ್ಯಾಣಕ ಕಾರ್ಯಕ್ರಮಗಳು ಜರುಗಿದವು .

ಈ ಅಂಗವಾಗಿ  ಬೆಳಗ್ಗೆ ಸುಪ್ರಭಾತ ,ಮಂಗಳವಾದ್ಯ ,  ಆಚಾರ್ಯ ಶ್ರೀಗಳ ಸಂಘ ಪರಿವಾರ, ಧ್ವಜಾರೋಹಣ, ಮಂಟಪ ಉದ್ಘಾಟನೆ, ಮಂಗಳ ಕಳಸ ಸ್ಥಾಪನೆ, ಜಿನೇಂದ್ರ ಅಭಿಷೇಕ ಶಾಂತಿದಾರ ಮಂಟಪ, ಹೋಮಗಳು, ಹವನಗಳು, ಮಂಗಳ ಪ್ರವಚನಗಳು,  ದಾಮ ಸಂಪ್ರೋಕ್ಷಣಗಳು, ಆರತಿಗಳು, ಮಂಗಳ ವಾದ್ಯಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಂತಿಮ ದಿನ ಧ್ವಜಾರೋಹಣ ವಿಸರ್ಜನಾ ಕಾರ್ಯಕ್ರಮ ಜರುಗಿತು.


 ಈ ಕಾರ್ಯಕ್ರಮದಲ್ಲಿ ದೇಶದ ವಿವಿಧತೆಗಳಿಂದ ಜೈನ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

 ಕಾರ್ಯಕ್ರಮದಲ್ಲಿ ಜೈನ ಭಟ್ಟಾರಕರುಗಳಾದ ತಮಿಳುನಾಡಿನ  ಅರಿಹಂತಗಿರಿ ಯ ಸ್ವಸ್ತಿ ಶ್ರೀ ದವಳಕೀರ್ತಿ ಭಟ್ಟರಕ ಪಟ್ಟಾಚಾರ್ಯರು, ಕಾರ್ಕಳ ಜೈನ ದಾನಶಾಲಾ ಮಠದ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಶ್ರೀಗಳು, ಆರತಿಪುರ ಜೈನಮಠದ ಸ್ವಸ್ತಿ ಶ್ರೀ ಸಿದ್ದಂತ ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಶ್ರೀಗಳು ,ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿಮಠದ ಸ್ವಸ್ತಿ ಶ್ರೀ ಲಕ್ಷ್ಮೀ ಸೇನಾ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು ,ಕಂಬದಹಳ್ಳಿ ಜೈನ ಮಠದ ಸ್ವಸ್ತಿ ಶ್ರೀ ಬಾನು ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಶ್ರೀಗಳು, ಮೂಡು ಬಿದರೆ ಜೈನಮಠದ ಸ್ವಸ್ತಿ ಶ್ರೀ ಚಾರು ಕೀರ್ತಿ ಭಟ್ಟರಕ  ಪಂಡಿತಚಾರ್ಯ  ಮಹಾಸ್ವಾಮಿ ಗಳು ಕನಕಗಿರಿ ಜೈನಮಠದ ಸ್ವಸ್ತಿ ಶ್ರೀ ಭುವನ ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಶ್ರೀಗಳು ಶ್ರವಣಬೆಳಗೊಳ ಜೈನಮಠದ ಅಭಿನವ ಚಾರು ಕೀರ್ತಿ  ಭಟ್ಟರಕ  ಶ್ರೀಗಳು ,ನಾಂದಿನಿ ಜೈನಮಠ ದ ಸ್ವಸ್ತಿ ಶ್ರೀ ಜ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು,  ಸೋoದ ಜೈನ ಮಠದ  ಸ್ವಸ್ತಿ ಶ್ರೀ ಭಟ್ಟ  ಅಕಳಂಕ ಭಟ್ಟರಕ ಶ್ರೀಗಳು, ಹೊಂಬುಜ ಜೈನ ಮಠದ ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು, ರಾಜಸ್ಥಾನದ ತಿಜರ  ಜೈನ ಮಠದ ಸ್ವಸ್ತಿ ಶ್ರೀ ಸೌರಭ  ಸೇನಾ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

 ಕಾರ್ಯಕ್ರಮದಲ್ಲಿ ಮಿಡಿಗೇಶಿ  ಜಿನ ಬಸದಿ ಅಧ್ಯಕ್ಷರಾದ  ಎ .ಆರ್ .ರಾಜೇಂದ್ರ  ಕುಮಾರ್, ಶ್ರೀ  ಪಾರ್ಶ್ವನಾಥ ಸಹಕಾರ ಬ್ಯಾಂಕ್ ನ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಶ್ರೀ ಮಂಧರ ಗಿರಿ ಯಾತ್ರಾ ಸಂಘದ ಅಧ್ಯಕ್ಷರು ಹಾಗೂ ತುಮಕೂರು ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಕೆ.ಪಿ .ವೀರೇಂದ್ರ,

 ಪತ್ರಿಕಾ ಸಂಪಾದಕರಾದ ವೈ.ಡಿ. ರತ್ನಾಕರ, ಫ್ಲವರ್ ಸುರೇಶ್ ,ಶ್ರುತ ಜೈನ್ ಮಹಿಳಾ ಮಿಲನ ಶ್ಯಾಮಲ ಧರಣಿಂದ್ರಯ್ಯ,  ಮಂಜುಳಾ ಚಂದ್ರಪ್ರಭ,  ಕೆ ಜೆ  ಎ,ನಿರ್ದೇಶಕರು ಹಾಗೂ ತುಮಕೂರು ಜೈನ ಸಮಾಜದ  ಅಧ್ಯಕ್ಷರಾದ ಟಿ.ಡಿ .ಬಾಹುಬಲಿ ಬಾಬು ನಿರ್ದೇಶಕರಾದ  ಆರ್‌.ಎ .ಸುರೇಶ್, ಮಂಡಿ ನಾಗರಾಜ್, ಎ .ಎನ್ .ಮಂಜುನಾಥ್, ಬಳೆ ಶೀತಲ್ ಮಹಾವೀರ್ ಜ್ವಾಲಾ ಮಾಲಿನಿ (ಎಂ.ಎಲ್.ಎ ಮಾಲಮ್ಮ) ಎ .ಆರ್. ಬ್ರಹ್ಮ ಪ್ರಕಾಶ್, ಕುಣಿಗಲ್ ಜೈನ ಸಮಾಜದ ಅಧ್ಯಕ್ಷರಾದ ಮೋಹನ್ ಕುಮಾರ್, ಕಾರ್ಯದರ್ಶಿ ಜ್ವಾಲೆಂದ್ರ ಕುಮಾರ್,  ತಂಡಗ ಜೈನ ಸಮಾಜದ ತಂ.ಪಾ . ಚಂದ್ರಕೀರ್ತಿ,

ಉದ್ಯಮಿ ಸುಬೋಧ ಕುಮಾರ್ ಜೈನ್, ಜ್ವಾಲಾ ಮಾಲಿನಿ ಯಾತ್ರಾ ಸಂಘದ  ಎನ್. ಜೆ .ಸತ್ಯೇಂದ್ರ ಕುಮಾರ್, ಬೆಂಗಳೂರಿನ ಬಿ.ಎಸ್.ಎಂ ಜೈನ ಅಸೋಸಿಯೇಷನ್ ಮಾಳ ಹರ್ಷೀಂದ್ರ ಜೈನ್ ,ಉದ್ಯಮಿ ಬಿ .ಆರ್. ಶೀತಲ್  ಕುಮಾರ್, ಸೇರಿದಂತೆ ದೇಶದ ವಿವಿಧ ಮೂಲೆ ಮೂಲೆಗಳಿಂದ ಜೈನ ಬಂಧುಗಳು ಸಾರ್ವಜನಿಕರು ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ವಿವಿಧ ಘಟಕಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

 ಧರ್ಮಸ್ಥಳ ಸುರೇಂದ್ರ ಕುಮಾರ್ ಹಾಗೂ ಕುಣಿಗಲ್ ಬ್ರಹ್ಮದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


Post a Comment

0 Comments