ದೇಶೀಯ ಮಟ್ಟದಲ್ಲಿ ಸಾರ್ವಕಾಲಿಕ ದಾಖಲೆ ಮೆರೆದ ಮೂಡುಬಿದಿರೆಯ ಆಳ್ವಾಸ್

ಜಾಹೀರಾತು/Advertisment
ಜಾಹೀರಾತು/Advertisment

 ಕ್ರೀಡೆ :  ದೇಶೀಯ ಮಟ್ಟದಲ್ಲಿ ಸಾರ್ವಕಾಲಿಕ ದಾಖಲೆ ಮೆರೆದ ಮೂಡುಬಿದಿರೆಯ ಆಳ್ವಾಸ್ 

* ಮಂಗಳೂರು ವಿವಿಯ ಅಂತರ್ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ  47 ಕೂಟ ದಾಖಲೆಗಳು, 22 ಬಾರಿ ಸಮಗ್ರ  ಚಾಂಪಿಯನ್ಸ್ 

ಮೂಡುಬಿದಿರೆ: ಮಂಗಳೂರು ವಿವಿಯ ಅಂತರ್ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು ದೇಶೀಯ ಮಟ್ಟದಲ್ಲಿ ಸಾರ್ವಕಾಲಿಕ ಸಾಧನೆ ಮೆರೆದಿದ್ದಾರಲ್ಲದೆ ಪುರುಷರ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಸತತ 22ನೇ ಬಾರಿ ಸಮಗ್ರತಂಡ ಪ್ರಶಸ್ತಿಯನ್ನು ದ್ವಿತೀಯ ಸ್ಥಾನ ಪಡೆದ ತಂಡದಿಂದ 460 ಅಂಕಗಳ ಅಂತರದಲ್ಲಿ ಪಡೆಯುವುದರ ಜೊತೆಗೆ 11 ನೂತನ ಕೂಟದಾಖಲೆಯನ್ನು ಆಳ್ವಾಸ್ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಕ್ರೀಡಾ ಪ್ರೋತ್ಸಾಹಕ  ಡಾ.ಎಂ. ಮೋಹನ ಆಳ್ವ ತಿಳಿಸಿದರು.

  ಅವರು ಸೋಮವಾರ ತನ್ನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು.

ಅಸಾಮಾನ್ಯ ಸಾಧನೆ ಮಾಡಿದ ಭಾರತದ ಏಕೈಕ ಕಾಲೇಜು ಆಳ್ವಾಸ್  :  ಈ ಅಪ್ರತಿಮಾ ಸಾಧನೆಯ ಜೊತೆಯಲ್ಲಿ ಮಂಗಳೂರು ವಿವಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿರುವ 46 ವಿಭಾಗಗಳಲ್ಲಿ ಈಗಾಗಲೇ ಆಳ್ವಾಸ್ ವಿದ್ಯಾರ್ಥಿಗಳು ನೂತನ ಕೂಟದಾಖಲೆ ನಿರ್ಮಿಸಿದ್ದರೆ, ಬಾಕಿ ಉಳಿದಿದ್ದ ಹೆಪ್ಪಾತ್ಲಾನ್ ವಿಭಾಗದಲ್ಲೂ ಈ ಬಾರಿ ನೂತನ ಕೂಟದಾಖಲೆ ನಿರ್ಮಿಸುವ ಮೂಲಕ ಅಥ್ಲೆಟಿಕ್ಸ್‌ನಲ್ಲಿರುವ ಒಟ್ಟು 47 ವಿಭಾಗಗಳಲ್ಲೂ ನೂತನ ಕೂಟದಾಖಲೆ ನಿರ್ಮಿಸಿದ ಭಾರತದ ಏಕೈಕ ಕಾಲೇಜು ಅಸಾಮಾನ್ಯ ಸಾಧನೆಗೆ ಆಳ್ವಾಸ್ ಪಾತ್ರವಾಗಿದೆ.

ಎರಡು ವಿಭಾಗಗಳಲ್ಲಿ 84 ಪದಕಗಳು :

ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ 292 ಅಂಕಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 277 ಅಂಕ ಪಡೆದು ಆಳ್ವಾಸ್ ಒಟ್ಟು 569 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆಯಿತು. ಪುರುಷರ ವಿಭಾಗದಲ್ಲಿ 64 ಅಂಕ ಪಡೆದ ಉಜಿರೆಯ ಎಸ್‌ಡಿಎಂ ಕಾಲೇಜು ಹಾಗೂ ಮಹಿಳೆಯರ ವಿಭಾಗದಲ್ಲಿ 48 ಅಂಕ ಪಡೆದ ಅಜ್ಜರಕಾಡಿನ ಡಾ ಜಿ ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರನ್ನ‌ರ್ ಅಪ್ ಪ್ರಶಸ್ತಿ ಪಡೆದವು. ಆಳ್ವಾಸ್ ಕಾಲೇಜು ಪುರುಷರ ವಿಭಾಗದಲ್ಲಿ 24 ಚಿನ್ನ, 17 ಬೆಳ್ಳಿ, 1 ಕಂಚಿನ ಪದಕ ಸೇರಿಒಟ್ಟು 42 ಹಾಗೂ ಮಹಿಳಾ ವಿಭಾಗದಲ್ಲಿ 21 ಚಿನ್ನ 16 ಬೆಳ್ಳಿ ಹಾಗೂ 5 ಕಂಚಿನ ಪದಕದೊಂದಿಗೆ 42 ಪದಕ ಪಡೆಯಿತು. ಎರಡು ವಿಭಾಗಗಳಲ್ಲಿ ಒಟ್ಟು 84 ಪದಕ ಪಡೆಯಿತು.

*ವೈಯಕ್ತಿಕ ದಾಖಲೆ: 

ಕ್ರೀಡಾಕೂಟದ ಪುರುಷರ ಹಾಗೂ ಮಹಿಳಾ ವಿಭಾಗದ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಉದ್ದಜಿಗಿತ ಸ್ಪರ್ಧೆಯ ಪುರುಷೋತ್ತಮ ಹಾಗೂ 100 ಮೀ ಓಟದ ಪವಿತ್ರಾ ಪಡೆದುಕೊಂಡರು. ಇವರಿಬ್ಬರೂ  ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು.

*ನೂತನ ಕೂಟ ದಾಖಲೆಗಳು: 

ಪುರುಷರ ವಿಭಾಗದಲ್ಲಿ ಗಗನ್-5000 ಮೀ ಓಟ, ಚಂದನ್- 10000ಮೀ ಓಟ, ಅಮನ್ ಪೋಲ್ವಾರ್ಟ್, 4+100 ರಿಲೇ ತಂಡ ಕೂಟದಾಖಲೆ ನಿರ್ಮಿಸಿದರೆ, ಮಹಿಳೆಯರ ವಿಭಾಗದಲ್ಲಿ ಕೆ.ಎಂ ಶಾಲಿನಿ 20 ಕಿಮೀ ನಡಿಗೆ, ಸುನೀತಾ- ಡಿಸ್ಕಸ್‌ಥೋ, ಶ್ರುತಿ ಹ್ಯಾಮರ್‌ಥ್, ಪ್ರಜ್ಞಾ- 400 ಮೀ ಹರ್ಡಲ್ಸ್, ಮಂಜುಯಾದವ್ - ಸ್ಪೀಪಲ್ ಚೇಸ್, ಕಮಲ್ಲೀತ್‌ ಕೌ‌ರ್- ಹೆಪ್ಪಾಗ್ದಾಲ್ ಹಾಗೂ 4*400 ಮೀ ರಿಲೇಯಲ್ಲಿ ಕೂಟದಾಖಲೆ ನಿರ್ಮಾಣವಾಗಿವೆ.

*ನಗದು ಬಹುಮಾನ: 

ಮಂಗಳೂರು ವಿವಿಯ ಅಂತರಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನೂತನ ಕೂಟದಾಖಲೆ ಮೆರೆದ 11 ಜನ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ತಲಾ 10000 ನಗದು ಬಹುಮಾನವನ್ನು ನೀಡಲಾಯಿತು.

*ಅಂತರ ವಿವಿಯ ಅಥ್ಲೆಟಿಕ್ಸ್‌ ಕ್ರೀಡಾಕೂಟ: 

ರಾಷ್ಟ್ರ ಮಟ್ಟದ ಅಂತರ ವಿವಿಯ ಅಥ್ಲೆಟಿಕ್ಸ್ ಕ್ರೀಡಾಕೂಟವು ಡಿಸೆಂಬರ್ 26 ರಿಂದ 31ರ ವರೆಗೆ ಒಡಿಶಾದ ಕಳಿಂಗ ವಿವಿಯಲ್ಲಿ ಜರುಗಲಿದ್ದು, ಆಳ್ವಾಸ್ ಕಾಲೇಜಿನ ಒಟ್ಟು 75 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದರು.

Post a Comment

0 Comments