ಪಣಪಿಲ-ಅಳಿಯೂರು-ದರೆಗುಡ್ಡೆ ಗ್ರಾಮದ ದೈವಗಳ ವಾರ್ಷಿಕ ನೇಮೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 ಪಣಪಿಲ-ಅಳಿಯೂರು-ದರೆಗುಡ್ಡೆ ಗ್ರಾಮದ ದೈವಗಳ ವಾರ್ಷಿಕ ನೇಮೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

ಪಣಪಿಲ ಕಲ್ಲೇರಿ ಶ್ರೀ ಕುಕ್ಕಿನಂದಾಯ ದೈವ, ಅಳಿಯೂರು ಉಮಲತ್ತಡೆ ಧರ್ಮರಸು ಕೊಡಮಣಿತ್ತಾಯ, ಬ್ರಹ್ಮ ಬೈದ್ಯರುಗಳು ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ನಡೆಯಿತು.

ವಾರ್ಷಿಕವಾಗಿ ಅಳಿಯೂರಿನ ಮಜಲೋಡಿ ಗುತ್ತು ಮನೆಯಲ್ಲಿ ನಡೆದ ಕೂಟದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. 

ಅಸ್ರಣ್ಣರು, ಗುತ್ತುಬರ್ಕೆಯವರು, ಆಡಳಿತ ಸಮಿತಿಯ ಪ್ರಮುಖರು, ಚಾಕಿರಿ ವರ್ಗದವರು ಸೇರಿದಂತೆ ಮೂರು ಗ್ರಾಮದ ಗ್ರಾಮಸ್ಥರು ಭಾಗಿಯಾಗಿದ್ದರು.


ಡಿಸೆಂಬರ್ 18ರಂದು ಪಣಪಿಲ ಕಲ್ಲೇರಿ ಶ್ರೀ ಕುಕ್ಕಿನಂದಾಯ ದೈವಕ್ಕೆ 19ರಂದು ಉಮಲತ್ತಡೆ ಧರ್ಮರಸು ಹಾಗೂ ಕೊಡಮಣಿತ್ತಾಯ ದೈವಕ್ಕೆ ಮತ್ತು 20ಕ್ಕೆ ಉಮಲ್ತಡೆ ಬ್ರಹ್ಮ ಬೈದೇರುಗಳ ನೇಮೋತ್ಸವ ನಡೆಯಲಿದೆ ಎಂದು ಸಮಿತಿ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದರು.

Post a Comment

0 Comments