ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯಿಂದ ನಾಗರಿಕ ಜಾಗೃತಿ
ಮೂಡುಬಿದಿರೆ : ಇಲ್ಲಿನ ಕಲ್ಲಬೆಟ್ಟಿನ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ವತಿಯಿಂದ ಮೂಡುಬಿದಿರೆ ಪರಿಸರವನ್ನು ಸ್ವಚ್ಛವಾಗಿ ಇಡಲು ಮತ್ತು ರಸ್ತೆ ಸುರಕ್ಷತಾ ನಿಯಮ ಪಾಲಿಸಿ ಎಂಬ ನಾಗರಿಕ ಜಾಗೃತಿ ಜಾಥಾ ನಡೆಯಿತು.
ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಮೂಲಕ ನಾಗರಿಕರನ್ನು ಸ್ವಚ್ಛತೆಯ ಕಡೆಗೆ ಹಾಗೂ ಏಕೆ ಬಳಕೆ ಪ್ಲಾಸ್ಟಿಕ್ ನಿಲ್ಲಿಸುವ ಬಗೆಗೆ ಜಾಗೃತಿ ಮೂಡಿಸಲು ಒಂದು ಚಿಕ್ಕ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಎಲ್ಲರೂ ಸಹಕರಿಸಿ ಮೂಡುಬಿದಿರೆಯನ್ನು ಸ್ವಚ್ಛ, ಪ್ಲಾಸ್ಟಿಕ್ ಮುಕ್ತ ಮಾಡಲು ಕೈಜೋಡಿಸಬೇಕೆಂದು ಕೇಳಿಕೊಂಡರು.
ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಎ ಎಸ್ ಐ ರಾಜೇಶ್, ಪ್ರಶಾಂತ್, ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ಕನಿಷ್ಠ ಮಕ್ಕಳಿಂದಲಾದರೂ ಈ ಪ್ರಯತ್ನ ಯಶಸ್ವಿಗೊಂಡು ಸ್ವಚ್ಛ ಮೂಡುಬಿದಿರೆಯ ಕನಸು ಸಾಕಾರಗೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಿ ಎಚ್ ಗಫೂರ್, ಕೃಷ್ಣರಾಜ ಹೆಗ್ಡೆ, ಕೊರಗಪ್ಪ, ಸುರೇಶ್ ಕೋಟ್ಯಾನ್, ಮುಡಾ ಅಧ್ಯಕ್ಷ ಹರ್ಷವರ್ಧನ್ ಪಡೀವಾಳ್,
ಧೀರಜ್ ಕೊಲ್ಕೆ, ಕ್ಲಾರಿಯೋ, ರಾಕೇಶ್, ಕೊಡಂಗಲ್ಲು ಫ್ರೆಂಡ್ಸ್, ಸಂತೋಷ್ ಶೆಟ್ಟಿ, ಕೋಡಂಗಲ್ಲು ಆಟೋ ಸಂಘ, ಮಹಾಮಾಯಿ ದೇವಸ್ಥಾನ ಕಲ್ಲಬೆಟ್ಟು, ಕಲ್ಲಬೆಟ್ಟು ಸೇವಾ ಸಹಕಾರಿ ಸಂಘ, ಕಲ್ಲಬೆಟ್ಟು ಹಾಲು ಉತ್ಪಾದಕರ ಒಕ್ಕೂಟದ ಪದಾಧಿಕಾರಿಗಳು, ಈ ಸಂದರ್ಭದಲ್ಲಿ ಹಾಜರಿದ್ದರು. ಎಕ್ಸಲೆಂಟ್ ಸಂಸ್ಥೆಯ ಸಂಪತ್ ಕುಮಾರ್ ಸ್ವಾಗತಿಸಿ, ವಂದಿಸಿದರು. ಅಕ್ಷಯ್ ಕೆ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
ಮೂಡುಬಿದಿರೆ ಪೊಲೀಸ್ ಠಾಣೆಯ ಬಳಿಯಿಂದ ಪ್ರಾರಂಭಗೊಂಡ ನಾಗರಿಕ ಜಾಗೃತಿ ಜಾಥಾವು ಕಲ್ಲಬೆಟ್ಟು ವಿನಿಂದ ಉರ್ಪೆಲ್ ಪಾದೆ ವರೆಗೆ ವಿವಿಧ ಜಾಗೃತಿ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಘೋಷಣೆಗಳನ್ನು ಮೊಳಗಿಸುತ್ತ ಕಾಲ್ನಾಡಿಗೆಯಲ್ಲಿ ನಡೆದರು.
0 Comments