"ಮೈಸೂರು ವಿಭಾಗೀಯ ಮಟ್ಟದ ಜಿನ ಭಜನ ಕಾರ್ಯಕ್ರಮಕ್ಕೆ ಚಾಲನೆ"

ಜಾಹೀರಾತು/Advertisment
ಜಾಹೀರಾತು/Advertisment

 "ಮೈಸೂರು ವಿಭಾಗೀಯ  ಮಟ್ಟದ ಜಿನ ಭಜನ ಕಾರ್ಯಕ್ರಮಕ್ಕೆ  ಚಾಲನೆ"

 ಭಾರತೀಯ ಜೈನ್ ಮಿಲನ್ ವಲಯ - 8 ಮೈಸೂರು ವಿಭಾಗ ಮಟ್ಟದ ಜಿನ ಭಜನ ಸ್ಪರ್ಧೆ ಎಂಟನೇ ಆವೃತ್ತಿಗೆ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪದಲ್ಲಿ  ಚಾಲನೆ ನೀಡಲಾಯಿತು.

 ಭಾರತೀಯ ಜೀನ್ ಮಿಲನ್ ವಲಯ - 8. ರ ಗೌರವ ಅಧ್ಯಕ್ಷರಾದ ಶೀಲಾ ಅನಂತರಾಜು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜೀವನ ಮಹಿಳಾ ಒಕ್ಕೂಟದ ಮಾಜಿ ಕಾರ್ಯಾಧ್ಯಕ್ಷರಾದ ಪದ್ಮಿನಿ ಪದ್ಮರಾಜ್, ಜ್ಯೋತಿ  ನೇಮಿರಾಜು ಲಿಂಗನಮಕ್ಕಿ, ಭಾರತೀಯ ಜೈನ ಮಿಲನ್ ವಲಯ -8 ರ ಅಧ್ಯಕ್ಷ ಕೆ.ಯುವರಾಜು ಭಂಡಾರಿ, ಸುಶ್ರುತ ಕಣ್ಣಿನ ಆಸ್ಪತ್ರೆಯ ಡಾ. ಪಲ್ಲವಿ ಪ್ರಭು ,ಡಾ. ಸಿ. ಎ. ಪಿ. ಪ್ರಭು ಇನ್ನಿತರ ಗಣ್ಯರುಗಳು ಭಾಗವಹಿಸಿದ್ದರು.


ಸಂಗೀತ ವಿದುಷಿ ಸೌಮ್ಯ ಶ್ರೀಧರ್ ಜೈನ್ ಮತ್ತು ತಂಡ ಮಂಗಳ ಜಿನಭಕ್ತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ  ಸ್ನೇಹ, ಶರ್ಮಿಳಜಿನೇಶ್ ,ಮೈಸೂರು ವಿಭಾಗದ ಉಪಾಧ್ಯಕ್ಷ ಸಿ.ಎಸ್. ನಾಗರಾಜ್, ಕಾರ್ಯದರ್ಶಿ  ಎಂ. ರತ್ನರಾಜು, ಪ್ರಸನ್ನ ಕುಮಾರ್, ಜಿ. ಬಿ .ಚಂದ್ರಶೇಖರ್, ಇನ್ನಿತರ ಪದಾಧಿಕಾರಿಗಳು, ವಿವಿಧ ಜೈನ ಸಂಘಟನೆಗಳ ಅಧ್ಯಕ್ಷರು ,ಪದಾಧಿಕಾರಿಗಳು, ಉಪಸ್ಥಿತರಿದ್ದರು.


 ವರದಿ : ಜೆ ರಂಗನಾಥ ತುಮಕೂರು

Post a Comment

0 Comments