ನಳಿನ್ ಜೋಕರ್ ಎಂದುಕೊಂಡಿದ್ದೆ, ಇನ್ನೊಬ್ಬರು ಬಂದಾಗ ಅವರ ಮಹತ್ವ ಅರಿವಾಯಿತು: ಮಂಗಳೂರು ನಂಬರ್ ಒನ್ ಆಗಲು ಅವರೇ ಕಾರಣ
ನಳಿನ್ ಕುಮಾರ್ ಕಟೀಲು ಒಬ್ಬ ಜೋಕರ್ ಎಂದುಕೊಂಡಿದ್ದೆ. ಆದರೆ ಹೊಸ ಅಧ್ಯಕ್ಷರು ಬಂದ ನಂತರ ಅವರ ಮಹತ್ವ ಅರಿತುಕೊಂಡೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರು ತಂದಿರುವ ಅನುದಾನ ಅಪಾರ. ಯತ್ನಾಲ್ ಕೂಡಾ ಕಟೀಲುರವರ ಬಗ್ಗೆ ಶ್ಲಾಘನೀಯ ಮಾತುಗಳನ್ನು ಆಡಿದ್ದರು ಎಂದು ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ರವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಪ್ರಕಾಶ್ ಅಮ್ಮಣ್ಣಾಯ ರವರು ಮಾಜಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಬಿಜೆಪಿ ಬೀದಿ ಜಗಳವಾಗಿ ಮಾರ್ಪಟ್ಟಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಬಹಿರಂಗ ಟೀಕೆಗಳನ್ನು ಮಾಡುತ್ತಿರುವುದು ಮತ್ತು ಬಣ ರಾಜಕೀಯ ಜೋರಾಗಿ ಇರುವುದು ಬಿಜೆಪಿಯ ಹೋರಾಟಕ್ಕೆ ಹಿನ್ನಡೆ ಉಂಟಾಗಿದೆ. ಈ ನಡುವೆ ನಳಿನ್ ಕುಮಾರ್ ಕಟೀಲು ರವರು ಯಾವ ಬಣಗಳಲ್ಲೂ ಗುರುತಿಸಿಕೊಳ್ಳದೆ ತಟಸ್ಥ ನೀತಿ ಅನುಸರಿಸುತ್ತಿರುವುದು ಕೂಡ ಕುತೂಹಲ ಮೂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ರವರು ಟಿಕೆಟ್ ವಂಚಿತರಾದ ನಂತರ ಅವರ ಬಗೆಗಿನ ಜನಾಭಿಪ್ರಾಯವು ಧನಾತ್ಮಕವಾಗಿ ಮೂಡಿ ಬರುತ್ತಿದೆ.
0 Comments