"ಯೋಚನೆ- ಯೋಜನೆ -ಆಯೋಜನೆ-ಯಿಂದ ಭಜನೆ ಯಶಸ್ಸು ಕಾಣಲಿದೆ : ಶ್ರದ್ಧಾ ಅಮಿತ್"

ಜಾಹೀರಾತು/Advertisment
ಜಾಹೀರಾತು/Advertisment

 "ಯೋಚನೆ- ಯೋಜನೆ -ಆಯೋಜನೆ-ಯಿಂದ ಭಜನೆ ಯಶಸ್ಸು ಕಾಣಲಿದೆ : ಶ್ರದ್ಧಾ ಅಮಿತ್"

 ಬೆಂಗಳೂರು : ಭಾರತೀಯ ಸಂಸ್ಕೃತಿಯಲ್ಲಿ ಭಜನೆ ಪುರಾತನವಾದ ಸಂಸ್ಕೃತಿಯಾಗಿದ್ದು ಈ ಭಜನೆ ಯೋಚನೆಗಳು ಯೋಜನೆಗಳು ಹಾಗೂ ಆ ಯೋಜನೆಯನ್ನು ವ್ಯವಸ್ಥಿತವಾಗಿ ರೂಪಿಸಿಕೊಂಡಾಗ ಯಶಸ್ಸು ಸಾಧ್ಯ ಎಂದು ಜಿನಭಜನ ಕೇಂದ್ರ ಸಮಿತಿಯ ಮಾರ್ಗದರ್ಶಕ ರಾದ ಶ್ರೀಮತಿ ಶ್ರದ್ಧಾ  ಅಮಿತ್ ತಿಳಿಸಿದರು.

 ಅವರಿಂದು ಬೆಂಗಳೂರಿನ ಕರ್ನಾಟಕ ಜೈನ ಭವನದ ರಾಜರ್ಷಿ ಡಾ. ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಸಭಾಭವನದಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ- 8 ರ ಬೆಂಗಳೂರು ವಿಭಾಗದ  ಜಿನ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 ಈವರೆಗೆ ನಡೆದ ಎಂಟು ಜಿನ ಭಜನಾ ಕಾರ್ಯಕ್ರಮಗಳು ಯಶಸ್ಸು ಕಂಡಿದ್ದು, ಜೈನ ಸಾಹಿತ್ಯ, ಸಂಸ್ಕಾರ, ಪರಂಪರೆಗಳನ್ನು   ಉಳಿಸುವ ಕಾರ್ಯ ಮಾಡಿವೆ, ಬೆಂಗಳೂರಿನಲ್ಲಿ ಪ್ರಾರಂಭವಾದ ಈ ಜಿನ ಭಜನೆಯಲ್ಲಿ, ಎಲ್ಲಾ ಜೈನ ವರ್ಗಗಳು ಪಾಲು ಪಡೆದಿದ್ದಾರೆ. ಭಟ್ಟಾರಕ ರಿಂದ ಕಲ್ಪನೆ ಮೀರಿ ಯಶಸ್ಸು ಕಂಡಿದೆ. ಯಾವುದೇ ಕಾರ್ಯಕ್ರಮದ ಲ್ಲಿ ಯೋಜನೆ ಹಾಗೂ ಆಲೋಚನೆಗಳಿದ್ದರೆ ಯಶಸ್ಸು ಸಾಧ್ಯ ಎಂದರು.

 ಈ ಜಿನ ಭಜನಾ ಕಾರ್ಯಕ್ರಮದಿಂದ ಎಲ್ಲಾ ವರ್ಗದವರು ಯಶಸ್ಸು ಕಾಣೋದು ಅನಿತಾ ಸುರೇಂದ್ರ ಕುಮಾರ್ ರವರ ಬಯಕೆಯಾಗಿದೆ.  ಆಶಯ ಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ,ಸಾಹಿತ್ಯಗಳು ಸೃಷ್ಟಿಯಾಗುತ್ತಿವೆ ,ಜೈನ ಪ್ರತಿಭಾ ವಂತ ಸಾಹಿತಿಗಳಿಗೆ ಇದು ವೇದಿಕೆಯಾಗಿದೆ ಎಂದರು.

 ಜಿನಭಜನ ಗೆ ವೇದಿಕೆ ಅವಕಾಶ ಕಲ್ಪಿಸಿದೆ ತಾವೇ ಸಾಹಿತ್ಯವನ್ನು ರಚಿಸಿಕೊಂಡು ಪ್ರಭುದ್ಧರಾಗುವಂತೆ ಕರೆ ನೀಡಿದವರು ,ಜಿನಭಜನೆ ಎನ್ನುವುದು ಅನಾದಿ ಕಾಲದಿಂದಲೂ ಇದ್ದು ಇದಕ್ಕೆ ಯಾವುದೇ ದೇಶ ,ರಾಜ್ಯ, ಭಾಷೆ ಮಿತಿ ಇಲ್ಲ, ಭಜನೆಗಳು ಧರ್ಮದ ತಪ್ಪುಗಳನ್ನು ತಿಳಿಸುವ ವಿಧಾನ ವಾಗಿದ್ದು ,ಧರ್ಮಸ್ಥಳದಲ್ಲಿ ನಡೆಯುವ  ಭಜನ ಕಮ್ಮಟಗಳು ಇದಕ್ಕೆ ಪೂರಕವಾಗಿವೆ ಎಂದರು.

 ಇದು ಮನಸ್ಸು- ಮನಗಳಲ್ಲಿ ನೋಡುವ ಭಜನೆಯಾಗಿದೆ ಜೈನ ಧರ್ಮ ಎನ್ನುವುದು  ಬಸದಿಗೆ ಹೋದಾಗ ಮಾಡುವುದಲ್ಲ ಸದಾ  ಕಾಲ ಮೂಲೆ ಮೂಲೆಗಳಲ್ಲಿ ಮಹಾವೀರನ ತತ್ವಗಳು, ಭಜನೆಗಳು, ಪ್ರವಚನಗಳು, ಮನೆ ಮನೆಗೆ ತಲುಪಬೇಕು ಎಂದರು.

 ಇತ್ತೀಚಿಗೆ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಜನಾ ಸಂಘಗಳು ಹೆಚ್ಚುತ್ತಿದೆ ಇದು ಹಬ್ಬ- ಹರಿದಿನಗಳಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದೆ ಇದನ್ನು ಶಿಸ್ತು ಸಂಯಮದಿಂದ ಹಾಡುತ್ತಿದ್ದು, ಭಜನೆಯಲ್ಲಿ  ಪಾಲ್ಗೊಳ್ಳುವುದು ಎಂದರೆ ಗುಂಪು ಸೇರುವುದು ಎಂದರ್ಥ ಜಿನಭಜನೆ ಜೈನ ಸಾಹಿತ್ಯವಾಗಿ ಜೀವಂತವಾಗಿದೆ ಎಂದು ಅವರು, ಭಜನೆಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಪ್ರಶಸ್ತಿಗಾಗಿ ಅಲ್ಲ ಎಂದರು.

 ಜಿನ ಭಜನ ಸ್ಪರ್ಧೆಯ ತೀರ್ಪುಗಾರರಾದ ಮುನಿರಾಜ ರೇಂಜಳ ಮಾತನಾಡಿ  ಜಿನ ಭಜನ ಸ್ಪರ್ಧೆ ನಿರಂತರವಾಗಿರಬೇಕು, ಜಿನಭಜನೆ ಯ ಸ್ಪರ್ಧಾ ಸಾರ್ಥಕತೆಗೆ ಶ್ರದ್ಧೆಯ ಕೊರತೆ ಇದ್ದು, ಜಿನಭಜನೆ ಪ್ರಾರಂಭದಲ್ಲಿ ಜನ  ಹೆಚ್ಚಿರುತ್ತಾರೆ, ಆದರೆ ಅಂತ ಅಂತವಾಗಿ ಸ್ಪರ್ಧೆ  ಕಳೆ ಗುಂದುತ್ತದೆ, ಶ್ರದ್ಧೆಯ ಕೊರತೆಯಿಂದ ಮುನ್ನಡೆಯನ್ನು ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂದವರು, ಶ್ರದ್ಧೆ ಅಚಲವಾಗಿರಬೇಕು, ಮರು ನಿರ್ಮಾಣವಾಗಿರಬೇಕು, ಪೌರಾಣಿಕ ಹಿನ್ನೆಲೆಯಲ್ಲಿ ಗುರುತಿಸಿಕೊಳ್ಳಬೇಕು. ಯಾವುದಕ್ಕೂ ಶ್ರದ್ಧೆ ಅಗತ್ಯ ಎಂದರು .

ಸಿದ್ದಚಕ್ರ ಆರಾಧನೆಯಿಂದ ಜಿನ  ಗಂಧೋದಕ ವನ್ನು  ತಲೆಗೆ ಸವರಿ ಕೊಳ್ಳುವುದರಿಂದ ಕುಷ್ಟರೋಗ ನಿವಾರಣೆ ಯಾಗುತ್ತದೆ ಎಂಬ ನಂಬಿಕೆ ಇದ್ದು, ಜೈನರು ಎಲ್ಲರ ಸುಖ ಬಯಸುತ್ತಾರೆ. ಅಚಲ ಶ್ರದ್ಧೆಯಿಂದ ಎಲ್ಲವನ್ನು ಪಡೆದುಕೊಳ್ಳಬಹುದು ಎಂದು ಅವರು ,ಆಚಲ ಶ್ರದ್ಧೆ ನಂಬಿಕೆಯಿಂದ ನಮ್ಮ ಜಿನೇಂದ್ರ ಭಗವಂತ ನಿಂದ ಎಲ್ಲವೂ ಸಾಧ್ಯ ಎಂದರು.ಶ್ರದ್ಧೆ ಹೆಚ್ಚಿಸಲು ಭಜನೆಯನ್ನ ಮನೆಮನೆಗಳಲ್ಲಿ ಮಾಡುವುದರಿಂದ ಭಕ್ತಿ ಬರಲಿದೆ ಭಜನೆಗೆ ಭಕ್ತಿ ಮತ್ತು ಸಂಗೀತ ಮುಖ್ಯ. ಭಜನೆ ಭಾವನೆಯಾಗಿದ್ದು ಎಲ್ಲದಕ್ಕೂ ಭಕ್ತಿ -ಶ್ರದ್ಧೆ ಅಗತ್ಯ ಎಂದರು.

 ಶರ್ಮಿಳ ಜಿನೀಶ್ ಹಾಗೂ ಅನುರಾಧ ಭಟ್ ಹಾಡುಗಳನ್ನು ಪ್ರಸ್ತುತಪಡಿಸಿದರು.ಗಾಯಕಿ ಅನುರಾಧ ಭಟ್ ಸ್ಪರ್ಧಾ ತಂಡಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು .ಇದೇ ಸಂದರ್ಭದಲ್ಲಿ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ಹಾಗೂ ಗೌರವ ಧನಗಳನ್ನು, ಹಾಗೂ ಎಲ್ಲಾ ಸ್ಪರ್ಧಾಳು ತಂಡಗಳಿಗೆ ಪ್ರಶಸ್ತಿ ಪತ್ರ, ಗೌರವ ಧನವನ್ನು ವಿತರಿಸಲಾಯಿತು.

 ಕಾರ್ಯಕ್ರಮದಲ್ಲಿ ಭಾರತೀಯ  ಜೈನ್ ಮಿಲನ  ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ,ಉಪಾಧ್ಯಕ್ಷರಾದ ಜಿನಭಜನ ಕಾರ್ಯಕ್ರಮದ ರೂವಾರಿಗಳು ಹಾಗೂ ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ,ಭಾರತೀಯ ಜೈನ ಮಿಲನ್ ವಲಯ- 8 ರ ಉಪಾಧ್ಯಕ್ಷರಾದ ಬೆಂಗಳೂರು ಡಾ. ಭರತ್ ಜಗಶೆಟ್ಟಿ ,ಕಾರ್ಯದರ್ಶಿ ವಿಲಾಸ್ ಪಾಸಣ್ಣನವರ್, ಸಹಕಾರ್ಯದರ್ಶಿ ಸುಖಾನಂದ, ಖಜಾಂಚಿ ಜಿನೇಂದ್ರ ಹೊಸಮನಿ ,ನಿರ್ದೇಶಕರಾದ ಪಿ .ಅಜಿತ್ ಕುಮಾರ್ ಎಂ ಧೀರಜ ಕುಮಾರ್ ಎ .ಪಿ.ಕುಮಾರ್ ದೀಪಾಂಜಲಿ ಗೌರಜ್,  ಬ್ರಾಹ್ಮೀಲ ಮದನ್ ಪದ್ಮಾವತಿ ಬಸ್ತಿ ,ಬೆಳಗುಲಿ ವಿಜಯಕುಮಾರ್, ಜಿನೇಂದ್ರಪ್ಪ ,ಅಖಿಲ ಪ್ರಕಾಶ್ ,ಪ್ರತಿಭಾ ಮಹಿಂದ್ರ, ಅನಂತಕುಮಾರಿ ,ವಜ್ರ ಕುಮಾರ್ ಜೈನ್  ,ವಾಸುದೇವ್ ಬ್ಯಾಂಕ್ ಅಜಿತ್ ಕುಮಾರ್ ಜೈನ್, ಪ್ರೇಮ ಸುಖಾನಂದ ,ಜಿತೇಂದ್ರ ,ಡಾ .ಉದಯ ಪಾಟೀಲ್ ಅನಿತಾ ವಾಸುದೇವ್, ಚಿತ್ರ ಕಲಾವಿದ ಎಂ.ಎಂ.ಜಿನೇಂದ್ರ, ಪ್ರಿಯಾ ವಾಸುದೇವ್, ಉದ್ಯಮಿ ಸುಭಾಷ್ ಪಿ. ಜಿನಗೌಡ,  ರತ್ನತ್ರಯ ಕ್ರಿಯೇಷನ್ ನಿರ್ದೇಶಕಿ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷ ರಾದ ಡಾ ನೀರಜಾ ನಾಗೇಂದ್ರ ಕುಮಾರ್,  ಎನ್. ನಿರಂಜನ್,  ಹಿಮವಂತ ಕುಮಾರ್, ಗುಣ ಪಾಲ್.ಜೈನ್ ,ಆರ್‌.ಎ .ಸುರೇಶ್ ,ಕೆ ಜೆ ಎ ಮಂಜುನಾಥ್ ,ಶಶಿರೇಖಾ,  ಪ್ರಭoಜನ್ ಕುಮಾರ್, ವಿಮುಖ ಜೈನ್ ಇನ್ನಿತರರು ಭಾಗವಹಿಸಿದ್ದರು.ಶರ್ಮಿಳ ಜಿನೇಶ್ ಹಾಗೂ ಮುನಿರಾಜು ರೇಂಜಳ ಜಿನ ಭ ಜನ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

 ಈ ಜಿನ ಭಜನೆಯಲ್ಲಿ ಕಿರಿಯರ ವಿಭಾಗದಲ್ಲಿ 9 ತಂಡಗಳು ಹಿರಿಯರ ವಿಭಾಗದಲ್ಲಿ 17 ತಂಡಗಳು ಸೇರಿ ,ಒಟ್ಟು 26 ಸಂಡೆಗಳು ಭಾಗವಹಿಸಿದ್ದವು.ಧೀರಜ್  ಹೊಳೆ ನರಸೀಪುರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಭಾರತೀಯ ಜೈನ್ ಮಿಲನ್ ವಲಯ 8 ರ ಬೆಂಗಳೂರು ವಿಭಾಗದ ಜಿನ ಭಜನ ಸ್ಪರ್ಧೆ.

ಜಿನ ಭಜನಾ ಸ್ಪರ್ಧಾ ಫಲಿತಾಂಸ

 ಸುವರ್ಣ ತಂಡವಾಗಿ ರತ್ನತ್ರೆಯ ಜೈನ್ ಮಿಲನ್ ತಂಡ

 ಕಿರಿಯರ ವಿಭಾಗ

 ಪ್ರಥಮ ದಿವ್ಯದ್ವನಿ ತಂಡ. 

ದ್ವಿತೀಯ ಸದಾಮೋಸ್ತು ತಂಡ. 

ತೃತಿಯ. ಆಗಮ ತಂಡ.

 ಹಿರಿಯರ ವಿಭಾಗ   ಪ್ರಥಮ  ಜ್ಞಾನಮತಿ ತಂಡ .

 ದ್ವಿತೀಯ  ಶೃತಜ್ಞಾನ ತಂಡ.

 ತೃತಿಯ  ನಂದ್ಯ ವರ್ತ ತಂಡ. 

ಬಹುಮಾನಗಳನ್ನಪಡೆದಿರುತ್ತಾರೆ.

Post a Comment

0 Comments