ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜು

ಜಾಹೀರಾತು/Advertisment
ಜಾಹೀರಾತು/Advertisment

 ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜು

ಶೈಕ್ಷಣಿಕ ವಿನಿಮಯ: ಜಪಾನ್ ಸೋಜೊ ವಿಶ್ವವಿದ್ಯಾಲಯ ಜೊತೆ ಆಳ್ವಾಸ್ ಒಡಂಬಡಿಕೆ

ಮೂಡುಬಿದಿರೆ: ಜಪಾನ್‌ನ ಸೋಜೊ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆ್ಯಂಡ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಎಂಜಿನಿಯರಿAಗ್ ಜೊತೆ ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜು ಮಹತ್ವದ ಶೈಕ್ಷಣಿಕ ವಿನಿಮಯ ಒಡಂಬಡಿಕೆ ಸೋಮವಾರ ಮಾಡಿಕೊಂಡಿತು.


ಶಿಕ್ಷಣ, ಸಂಶೋಧನೆ, ಬೋಧಕ, ಆಡಳಿತ ವರ್ಗ, ಸಂಶೋಧನಾ ಪ್ರಕಟಣೆಗಳು ಸೇರಿದಂತೆ ವಿವಿಧ ವಲಯದಲ್ಲಿ ಪರಸ್ಪರ ಸ್ವಾತಂತ್ರö್ಯವನ್ನು ಕಾಯ್ದುಕೊಂಡು ವಿನಿಮಯ, ಬೌದ್ಧಿಕ ಆಸ್ತಿಗಳ ರಕ್ಷಣೆ ಸೇರಿದಂತೆ ಶೈಕ್ಷಣಿಕ ಅಭ್ಯುದಯದ ದೃಷ್ಟಿಯ ಐದು ವರ್ಷಗಳ ಒಪ್ಪಂದಕ್ಕೆ ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಹಾಗೂ ಫ್ಯಾಕಲ್ಟಿ ಆ್ಯಂಡ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಎಂಜಿನಿಯರಿAಗ್ ಅಧ್ಯಕ್ಷ ಡಾ.ನಗಾಟೊ ಒನೊ ಸಹಿ ಮಾಡಿದರು.

ಶೈಕ್ಷಣಿಕ ವಿನಿಮಯಕ್ಕೆ ಸಂಬAಧಿಸಿದ ಬೋಧನೆ, ವಸತಿ ಸೌಕರ್ಯ, ಆರ್ಥಿಕ ಜವಾಬ್ದಾರಿ, ಬೌದ್ಧಿಕ ಆಸ್ತಿ ರಕ್ಷಣೆ, ಅವಧಿ, ತಿದ್ದುಪಡಿ ಸೇರಿದಂತೆ ಪ್ರಮುಖ ವಿಚಾರಗಳನ್ನು ಒಡಂಬಡಿಕೆ ಒಳಗೊಂಡಿದೆ.

ಜಪಾನ್‌ನ ಸೋಜೊ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆ್ಯಂಡ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಎಂಜಿನಿಯರಿAಗ್‌ನ ಪರಿಣಾಮಕಾರಿ ಎಂಜಿನಿಯರಿAಗ್‌ನ ಪ್ರಗತಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ರುಚಿ ಥೋಮೊಶಿಗೆ, ಸೋಜೊ ಅಂತರರಾಷ್ಟಿçÃಯ ಕೇಂದ್ರದ ವ್ಯವಸ್ಥಾಪಕಿ ಮಿಯೆ ಒಕುಬೊ, ಮೆಕ್ಯಾನಿಕಲ್ ಎಂಜಿನಿಯರಿAಗ್ ಪ್ರಾಧ್ಯಾಪಕ ಡಾ.ಅಕಿಸಾ ಮೊರಿ ಹಾಗೂ ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜು ಮ್ಯಾಕಾನಿಕಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ ಇದ್ದರು.  ಡಾ ಗುರಶಾಂತ್ ವಗ್ಗರ್ ಕರ‍್ಯಕ್ರಮ ನಿರೂಪಿಸಿದರು.

Post a Comment

0 Comments