ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ಮೂಡುಬಿದಿರೆ ಇವರ ವತಿಯಿಂದ ವಿಜ್ಞಾನ ಪ್ರಯೋಗ ದರ್ಶನ

ಜಾಹೀರಾತು/Advertisment
ಜಾಹೀರಾತು/Advertisment

 ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ಮೂಡುಬಿದಿರೆ ಇವರ ವತಿಯಿಂದ ವಿಜ್ಞಾನ ಪ್ರಯೋಗ ದರ್ಶನ 

ಉನ್ನತ ಭಾರತ ಅಭಿಯಾನದ ಅಡಿಯಲ್ಲಿ ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ನ ನಾಲ್ಕನೇ ವರ್ಷದ  "ವಿಜ್ಞಾನ ಪ್ರಯೋಗದರ್ಶನ" ಕಾರ್ಯಕ್ರಮ ಕಿಲೆಂಜಾರು ಅರಮನೆ ಸರಕಾರಿ ಪ್ರೌಢಶಾಲೆ ಕುಪ್ಪೆಪದವು ಇಲ್ಲಿ ದಿನಾಂಕ 19/12/2024 ರಂದು ನಡೆಯಿತು. 

ಎಸ್.ಎನ್. ಎಂ. ಪಾಲಿಟೆಕ್ನಿಕ್ ಕಾಲೇಜಿನ 15 ವಿದ್ಯಾರ್ಥಿಗಳು ಹಾಗೂ 3 ಮಂದಿ ಉಪನ್ಯಾಸಕರ ತಂಡ ಕಾಲೇಜಿನಲ್ಲೇ ಸಿದ್ಧಪಡಿಸಿದ ಉಪಕರಣಗಳನ್ನು  NCERT ಯಡಿ ಪರಿಷ್ಕೃತಗೊಂಡ ಹತ್ತನೇ ತರಗತಿಯ ಪಠ್ಯಕ್ರಮದಂತೆ  ಶಾಲೆಯ ವಿದ್ಯಾರ್ಥಿಗಳಿಗೆ "ವಿಜ್ಞಾನ ಪ್ರಯೋಗ" ಗಳನ್ನು ನಮ್ಮ ವಿದ್ಯಾರ್ಥಿಗಳ ಮುಖೇನ ಪ್ರೌಢಶಾಲಾ  ವಿದ್ಯಾರ್ಥಿಗಳಿಗೆ ಸ್ವತಃ  ಪ್ರಯೋಗಗಳನ್ನು ಮಾಡಲು ಅವಕಾಶ ನೀಡಲಾಯಿತು. 

 ಕುಪ್ಪೆಪದವು ಪ್ರೌಢಶಾಲೆಯ 45 ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಬಾಬು ಪಿ.ಎಂ. ಎಸ್. ಡಿ.ಎಂ.ಸಿ ಸದಸ್ಯರಾದ ಶ್ರೀ ಶೇಖ್ ಅಬ್ದುಲ್ಲಾ, ಕಾಲೇಜು ಉಪನ್ಯಾಸಕರಾದ ಶ್ರೀ ರಾಮ್ ಪ್ರಸಾದ್, ಶ್ರೀ ಸುಶಾಂತ್ , ಶ್ರೀ ಗೋಪಾಲಕೃಷ್ಣ, ವಿಜ್ಞಾನ ಶಿಕ್ಷಕರಾದ ಶ್ರೀ ಮಾರ್ಕ್ ಜೆ. ಮೆಂಡೊನ್ಸಾ ಉಪಸ್ಥಿತರಿದ್ದರು.

Post a Comment

0 Comments