ನಳಿನ್ ಕುಮಾರ್ ಕಟೀಲಿಗೆ ತಮಿಳುನಾಡು ಸಂಘಟನಾ ಪರ್ವದ ಹೊಣೆ:ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ
ಚೆನ್ನೈನಲ್ಲಿ ನಡೆಯಲಿರು ಭಾರತೀಯ ಜನತಾ ಪಾರ್ಟಿಯ ತಮಿಳುನಾಡಿನ ರಾಜ್ಯ ಪದಾಧಿಕಾರಿಗಳ, ಜಿಲ್ಲಾಧ್ಯಕ್ಷರುಗಳ, ಚುನಾವಣಾಧಿಕಾರಿಗಳ ಮತ್ತು ಸಹ ಚುನಾವಣಾಧಿಕಾರಿಗಳ 2024ರ ಸಂಘಟನಾ ಪರ್ವದ ಕೇಂದ್ರಿಯ ವೀಕ್ಷಕನ ಹೊಣೆಯನ್ನು ಕರ್ನಾಟಕ ಬಿಜೆಪಿಯ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲುರವರಿಗೆ ಹೈಕಮಾಂಡ್ ನೀಡಿದೆ.
ಈ ನೆಲೆಯಲ್ಲಿ ನಳಿನ್ ಕುಮಾರ್ ಕಟೀಲುರವರು ತಮಿಳುನಾಡಿಗೆ ಆಗಮಿಸಿದ್ದು ತಮಿಳುನಾಡಿನ ವಿಮಾನದಲ್ಲಿ ರಾಜ್ಯ ಬಿಜೆಪಿಯ ನಾಯಕರು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ತಮಿಳುನಾಡು ರಾಜ್ಯಾಧ್ಯಕ್ಷರಾದ ಶ್ರೀ ಅಣ್ಣಾಮಲೈ, ಉಪಾಧ್ಯಕ್ಷರೂ, ರಾಜ್ಯ ಚುನಾವಣಾಧಿಕಾರಿಗಳಾದ ಶ್ರೀ ಎಂ ಚಕ್ರವರ್ತಿ, ರಾಜ್ಯ ಕಾರ್ಯದರ್ಶಿಗಳೂ, ರಾಜ್ಯ ಸಹ ಚುನಾವಣಾಧಿಕಾರಿಗಳಾದ ಶ್ರೀಮತಿ ಎಸ್ ಮೀನಾಕ್ಷಿ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
0 Comments