ಇನ್ನೊಂದು ಧರ್ಮದ ಉತ್ಸವ ಕಂಡು ಸಂಭ್ರಮಿಸುವುದೇ ಸೌರ್ಹಾದತೆ : ತಾರಾನಾಥ ಗಟ್ಟಿ

ಜಾಹೀರಾತು/Advertisment
ಜಾಹೀರಾತು/Advertisment

 ಇನ್ನೊಂದು ಧರ್ಮದ ಉತ್ಸವ ಕಂಡು ಸಂಭ್ರಮಿಸುವುದೇ ಸೌರ್ಹಾದತೆ : ತಾರಾನಾಥ ಗಟ್ಟಿ

ಮೂಡುಬಿದಿರೆ: ಒಂದು ಧರ್ಮದವರು ಇನ್ನೊಂದು ಧರ್ಮದವರು ಆಚರಿಸುವ ಹಬ್ಬಗಳ ಉತ್ಸವವನ್ನು ಕಂಡು ಮನತುಂಬಿಸಿಕೊಂಡು ಸಂಭ್ರಮಿಸುವುದೇ ಸೌಹಾರ್ದತೆ ಇದು ತುಳುನಾಡಿನ ವಿಶೇಷತೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಭಿಪ್ರಾಯಪಟ್ಟರು.

   ಅವರು ಸಮಾಜ ಮಂದಿರ ಸಭಾ(ರಿ) ಮೂಡುಬಿದಿರೆ ಇದರ  ವತಿಯಿಂದ ಐದು ದಿನಗಳ ಕಾಲ ನಡೆದ 77 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಸಂಜೆ ಭಾಗವಹಿಸಿ 'ತುಳುನಾಡಿನ ಹಬ್ಬಗಳು ಮತ್ತು ಸೌಹಾರ್ದ ಪರಂಪರೆ' ಎಂಬ ವಿಷಯದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಮಾತನಾಡಿದರು.


 ಹಿಂದೆ ನಮ್ಮ ಹಿರಿಯರು ಉತ್ಸವ, ಜಾತ್ರೆ, ಆರಾಧನೆಯನ್ನು ಎಲ್ಲರನ್ನು ಸೇರಿಸಿಕೊಂಡು‌ ಮಾಡುತ್ತಾ ಬಂದಿದ್ದರು ಅದರಂತೆ ಮುಂದೆಯೂ ಇದು ನಡೆದುಕೊಂಡು ಹೋಗಬೇಕು ಇತ್ತೀಚಿನ ದಿನಗಳಲ್ಲಿ ನಡು ನಡುವೆ ರಾಜಕೀಯದಿಂದಾಗಿ ಮತ, ಧರ್ಮ, ಪಂಥವೆಂಬ ವಿಷ ಗಾಳಿಗಳು ಬರುತ್ತಿವೆ ಇದನ್ನು ತಡೆದು ನಿಲ್ಲಿಸಿ ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ವಿದ್ಯಾವಂತರ, ಬುದ್ಧಿವಂತರ ಜಿಲ್ಲೆಯೆಂದು ಗುರುತಿಸಿಕೊಂಡಿರುವ ನಾವು ದ್ವೇಷ, ವೈಷಮ್ಯ ಬರುವಾಗ ಮೌನ ವಹಿಸುವ ಮೂಲಕ ಮೌನ ಎಷ್ಟು ತೀಕ್ಣ ಎಂದು ತೋರಿಸಿಕೊಡಬೇಕಾಗಿದೆ. ತುಳುವಿಗೆ ಆಯಾಯ ಕಾಲದಲ್ಲಿ ಸಿಗುವ ಮಾನ್ಯತೆ ಸಿಕ್ಕಿದೆ ಇನ್ನು ತುಳು ಭಾಷೆಗೆ ಮಾನ್ಯತೆ ಸಿಗಬೇಕಾಗಿದೆ ಸರಕಾರ ಈ ಬಗ್ಗೆ ಗಮನಹರಿಸಬಹುದೆಂಬ ಆತ್ಮವಿಶ್ವಾಸವಿದೆ ಎಂದ ಅವರು ಮಕ್ಕಳಿಗೆ ವಿದ್ಯೆ ಮತ್ತು ಉದ್ಯೋಗದ ವಿಚಾರದಲ್ಲಿ ನಾವು ಗಮನ ಹರಿಸೋಣ ಇತರ ವಿಚಾರಗಳನ್ನು ದೂರ ಸರಿಸೋಣ ಎಂದು ಸಲಹೆ ನೀಡಿದರು.

  ಉದ್ಯಮಿ, ರೋಟರಿ ಎಜುಕೇಶನ್ ಸೊಸೈಟ್ ನ ಅಧ್ಯಕ್ಷ  ನಾರಾಯಣ ಪಿ.ಎಂ.ಅಧ್ಯಕ್ಷತೆ ವಹಿಸಿದ್ದರು.

  ಸಮಾಜ ಮಂದಿರ ಗೌರವ : ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ (ರಿ) (ಸಾಂಸ್ಕೃತಿಕ) ಪರವಾಗಿ ಸಂತೋಷ್ ಕುಮಾರ್, ವೀರ ಮಾರುತಿ ಸೇವಾ ಟ್ರಸ್ಟ್ (ರಿ) ( ಸಾಂಸ್ಕೃತಿಕ) ಪರವಾಗಿ ಜ್ಞಾನೇಶ್ವರ್ ಕಾಳಿಂಗ ಪೈ, ನಾಗರಾಜ ಶೆಟ್ಟಿ ಅಂಬೂರಿ ಬೆಳುವಾಯಿ (ಕೃಷಿ), ಬಾಬು ಹಂಡೇಲು (ಸಮಾಜ ಸೇವೆ) ಹಾಗೂ ನಾರಾಯಣ ಆಚಾರ್ಯ (ಕಾಷ್ಠ ಶಿಲ್ಪ) ಅವರಿಗೆ ಸಮಾಜ ಮಂದಿರದ ಗೌರವವನ್ನು ನೀಡಲಾಯಿತು.

  ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.

 ಸಂಚಾಲಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಎಂ.ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


    ಸಭಾ ಕಾರ್ಯಕ್ರಮದ ನಂತರ ಎಂ.ರೂಪೇಶ್ ಕುಮಾರ್ ನಿರ್ದೇಶನದಲ್ಲಿ ಟಾಪ್ ಎಂಟರ್ ಟೈನರ್ಸ್ ಡ್ಯಾನ್ ಅಕಾಡೆಮಿ ಮೂಡುಬಿದಿರೆ ಇವರಿಂದ 'ನೃತ್ಯ ವೈವಿಧ್ಯ' ಪ್ರಸ್ತುತಗೊಂಡಿತು. ಪತ್ರಕರ್ತ ಚೇತನ್ ಪಿಲಿಕುಳ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments