ಎಸ್‌ಕೆಎಫ್ ಎಲಿಕ್ಸರ್ ಕೈಗಾರಿಕೆಗೆ ಆನೆಗುಂದಿ ಶ್ರೀ ಭೇಟಿ
ಮೂಡುಬಿದಿರೆ : ಇಲ್ಲಿನ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ (ಪ್ರೈ) ಲಿ. ಕಂಪೆನಿಗೆ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರು ಮಂಗಳವಾರ ಭೇಟಿ ನೀಡಿದರು.
ಕೈಗಾರಿಕೆಯ ಎರಡನೇ ಹಂತದ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಕೈಗಾರಿಕೆಯ ಪ್ರದೇಶದಲ್ಲಿ ಕೈಗೊಂಡ ಹಸುರೀಕರಣ, ಪರಿಸರದಲ್ಲಿ ನೀರಿಂಗಿಸುವ ದೃಷ್ಠಿಯಿಂದ ನಿರ್ಮಿಸಿದ ಬೃಹತ್ ಕೆರೆಯ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸಂಸ್ಥೆಯ ಸಿಬಂದಿಗಳು, ಕಾರ್ಮಿಕರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಸ್ವಾಮೀಜಿಯವರು ಬದುಕಿನಲ್ಲಿ ಎದುರಾಗುವ ಎಡರು ತೊಡರಗಳನ್ನು ನಿವಾರಿಸಿ ಮುನ್ನುಗ್ಗಿ ಸಾಧನೆ ಮಾಡುವವರಿಗೆ ಲಕ್ಷ್ಮೀ ಕೃಪಾಕಟಾಕ್ಷವಿರುತ್ತದೆ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸಿಲ್ಲದ ಹಾದಿಯಲ್ಲಿ ನಡೆಯುವುದು ಅಸಾಧ್ಯ. ನಿರಂತರ ಪರಿಶ್ರಮ, ಕನಸನ್ನು ನನಸಾಗಿಸಿದ ಯಶಸ್ವಿ ಉದ್ಯಮಿ ರಾಮಕೃಷ್ಣ ಆಚಾರ್ಯ ಅವರ ಬದುಕೇ ಆದರ್ಶ ಎಂದರು.
ರಾಮಕೃಷ್ಣ ಆಚಾರ್ಯ ಅವರು ಸ್ವಾಮೀಜಿಯವರನ್ನು ಗೌರವಿಸಿದರು. ಆನೆಗುಂದಿ ಸರಸ್ವತಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸೂರ್‍ಯಕುಮಾರ್, ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ, ಎಸ್‌ಕೆಎಫ್ ಎಲಿಕ್ಸರ್‌ನ ಟ್ರಸ್ಟಿಗಳಾದ ಪ್ರಜ್ವಲ್ ಆಚಾರ್ಯ, ತೇಜಸ್ ಆಚಾರ್ಯ ಉಪಸ್ಥಿತರಿದ್ದರು. ಬಿ. ಸೀತಾರಾಮ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
0 Comments