ಹಿಂದುತ್ವದ ಪರವಾಗಿ ಮಾತಾಡಿದ್ದೇ ತಪ್ಪಾ? ಅರುಣ್ ಉಳ್ಳಾಲ್ ಮನೆಗೆ ಭೇಟಿನೀಡಿ ಧೈರ್ಯ ತುಂಬಿದ ಕಟೀಲ್: ಪೊಲೀಸ್ ಆಯುಕ್ತರ ಜೊತೆಗೆ ಮಾತುಕತೆ
ಹಿಂದೂಗಳ ಮಕ್ಕಳು ಹಿಂದುಗಳ ಮಾಲೀಕತ್ವದ ಶಾಲೆಯಲ್ಲೇ ಓದಬೇಕು ಹಾಗೂ ಹಿಂದುಗಳು ಹಿಂದುಗಳ ಮಾಲೀಕತ್ವದಲ್ಲೇ ಇರುವ ಕಲ್ಯಾಣ ಮಂಟಪದಲ್ಲಿ ಮದುವೆಯಾಗಬೇಕು ಎಂದು ಭಾಷಣ ಮಾಡಿದ್ದ ಚಿಂತಕ ಹಾಗೂ ಉಪನ್ಯಾಸಕ ಅರುಣ್ ಉಳ್ಳಾಲ್ ವಿರುದ್ಧ ರಾಜಕೀಯ ಪ್ರೇರಿತ ದೂರು ದಾಖಲಾಗಿದ್ದು ಅವರ ಮನೆಗೆ ಮಾಜಿ ಸಂಸದರು ಹಾಗೂ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ಪ್ರಕರಣದ ಬಗ್ಗೆ ಮಾತುಕತೆ ನಡೆಸಿ ನಂತರ ವಕೀಲರ ಜೊತೆಗೆ ಚರ್ಚಿಸಿದರು. ಕಾಂಗ್ರೆಸ್ ಸರ್ಕಾರ ಹಿಂದೂಗಳ ಪರವಾಗಿ ಮಾತನಾಡುತ್ತಿರುವ ಚಿಂತಕರನ್ನು ಧಮನಿಸುವ ಪ್ರಯತ್ನವನ್ನು ಮಾಡುತ್ತಿದೆ. ಇದು ಸರ್ಕಾರದ ಅವನತಿಯನ್ನು ಸೂಚಿಸುತ್ತದೆ. ಅರುಣ್ ಉಳ್ಳಾಲ್ ರವರು ಹಿಂದೂಗಳ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆಯೇ ಹೊರತು ಯಾವುದೇ ಧರ್ಮ ಅಥವಾ ವ್ಯಕ್ತಿಗಳನ್ನು ನಿಂದಿಸಿಲ್ಲ, ಅಥವಾ ಟೀಕಿಸಿಲ್ಲ. ಹೀಗಾದರೂ ಅವರ ಮೇಲೆ ದ್ವೇಷಪೂರಿತವಾಗಿ ಪ್ರಕರಣ ದಾಖಲಿಸುವುದು ಸರ್ಕಾರದ ಇಬ್ಬಗೆ ನೀತಿಯನ್ನು ಖಂಡಿಸುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ರವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭೇಟಿ ಸಂದರ್ಭದಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.
0 Comments