ಸಂಸದನಾಗಿ ನೂರು ದಿನದೊಳಗೆ ಈ ಬೇಡಿಕೆ ಈಡೇರಿಸುವೆ ಎಂದಿದ್ದ ಕೋಟ:ಕ್ರಿಯಾಶೀಲತೆಗೆ ಬಂದೇ ಬಿಡ್ತು ಕೇಂದ್ರ ಸಚಿವರ ಆದೇಶ:ಕರಾವಳಿಗೆ ಇನ್ನುಮುಂದೆ ತಿರುಪತಿ ಪ್ರಯಾಣ ಸುಲಭ

ಜಾಹೀರಾತು/Advertisment
ಜಾಹೀರಾತು/Advertisment

 ಸಂಸದನಾಗಿ ನೂರು ದಿನದೊಳಗೆ ಈ ಬೇಡಿಕೆ ಈಡೇರಿಸುವೆ ಎಂದಿದ್ದ ಕೋಟ:ಕ್ರಿಯಾಶೀಲತೆಗೆ ಬಂದೇ ಬಿಡ್ತು ಕೇಂದ್ರ ಸಚಿವರ ಆದೇಶ:ಕರಾವಳಿಗೆ ಇನ್ನುಮುಂದೆ ತಿರುಪತಿ ಪ್ರಯಾಣ ಸುಲಭ

ಮಂಗಳೂರು-ಉಡುಪಿ-ಕುಂದಾಪುರ-ಮುರುಡೇಶ್ವರ ಭಾಗದಿಂದ ತಿರುಪತಿ ಸಂಪರ್ಕಿಸುವ ರೈಲಿಗೆ ಕೇಂದ್ರ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ. ಕರಾವಳಿ ಭಾಗದಿಂದ ತಿರುಪತಿಗೆ ತೆರಳುವ ಭಕ್ತರ ಸಂಖ್ಯೆ ಅತಿಹೆಚ್ಚಿನದಾಗಿದ್ದು ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಭಾಗದಿಂದ ಪ್ರತಿ ಹಿಂದೂ ಕುಟುಂಬದಿಂದ ಪ್ರತಿವರ್ಷ ತಿರುಪತಿ ತಿರುಮಲ ದರ್ಶನಕ್ಕೆ ತೆರಳುತ್ತಾರೆ. ಆದರೆ ಸರಿಯಾದ ಸಮಯಕ್ಕೆ ರೈಲಿನ ರೈಲಿನ ಸಂಪರ್ಕ ಇಲ್ಲದಿರುವ ಕಾರಣ ಖಾಸಗಿ ವಾಹನಗಳನ್ನು ಅವಲಂಬಿಸಬೇಕಿತ್ತು. ಈ ಬಗ್ಗೆ ಚುನಾವಣಾ ಪೂರ್ವದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಜನತೆಗೆ ನೀಡಿದ ಭರವಸೆಯಂತೆ ಈ ರೈಲನ್ನು ಉಡುಪಿ ಮುಲ್ಕಿ ಉಡುಪಿ ಕುಂದಾಪುರ ಹಾಗೂ ಮುರುಡೇಶ್ವರದವರೆಗೆ ವಿಸ್ತರಿಸಬೇಕು ಎಂದು ಕೇಂದ್ರ ರೈಲ್ವೆ ಇಲಾಖೆಯ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ವಿ ಸೋಮಣ್ಣರವರ ಬಳಿ ಮನವಿ ಮಾಡಿದ್ದರು.


ಸಂಸದನಾಗಿ ನೂರು ದಿನದೊಳಗೆ ಈ ಬೇಡಿಕೆ ಈಡೇರಿಸುವೆ ಎಂದು ಸಂಸದರು ಭರವಸೆ ನೀಡಿದ್ದು ಇದೀಗ ಸಂಸದರ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಸಚಿವರುಗಳು ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಇನ್ನು ಮುಂದೆ ಮಂಗಳೂರಿನಲ್ಲಿ ಎಂಟು ಗಂಟೆಗಳ ಕಾಲ ನಿಲ್ಲುತ್ತಿದ್ದ ರೈಲು ಮುರುಡೇಶ್ವರದವರೆಗೆ ವಿಸ್ತರಿಸಿ ಮುರುಡೇಶ್ವರ ಕುಂದಾಪುರ ಉಡುಪಿ ಮೂಲ್ಕಿ ಸುರತ್ಕಲ್ ಮಾರ್ಗವಾಗಿ ಮಂಗಳೂರನ್ನು ತಲುಪಿ ನಂತರ ತಿರುಪತಿಗೆ ತೆರಳಲಿದೆ. ಈ ಮೂಲಕ ಅನೇಕ ವರ್ಷಗಳ ಕರಾವಳಿ ತಿರುಪತಿ ಸಂಪರ್ಕಿಸುವ ರೈಲಿನ ಕನಸು ನನಸಾಗಿದ್ದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ಸಚಿವರುಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಸಂಸದರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Post a Comment

0 Comments