ಭಜನೆ ಬಗ್ಗೆ ಅವಹೇಳನಕಾರಿ ಹೇಳಿಕೆ : ಮೂಡುಬಿದಿರೆಯಲ್ಲಿ ಭಜನಾ ಪರಿಷತ್ತ್ ನಿಂದ ಪ್ರತಿಭಟನಾ ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment

ಭಜನೆ ಬಗ್ಗೆ ಅವಹೇಳನಕಾರಿ ಹೇಳಿಕೆ : ಮೂಡುಬಿದಿರೆಯಲ್ಲಿ ಭಜನಾ ಪರಿಷತ್ತ್ ನಿಂದ ಪ್ರತಿಭಟನಾ ಮೆರವಣಿಗೆ

ಮೂಡುಬಿದಿರೆ: ಭಜನೆಯ ಹೆಣ್ಣು ಮಕ್ಕಳ ಬಗ್ಗೆ ಕೀಳುಮಟ್ಟದ ಅವಹೇಳನಕಾರಿ  ಹೇಳಿಕೆ ನೀಡಿರುವ ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ಮತ್ತು ಭಜನೆಯ ವಿರುದ್ಧ ಮಾತನಾಡುವ ದುಷ್ಟಶಕ್ತಿಗಳನ್ನು ಖಂಡಿಸಿ ಭಜನಾ ಪರಿಷತ್ತು ಮೂಡುಬಿದಿರೆ ತಾಲೂಕು ಇದರ ವತಿಯಿಂದ ಮತ್ತು ಜಿಲ್ಲೆಯ ವಿವಿಧ ಕುಣಿತ ಭಜನಾ ತಂಡಗಳಿಂದ ಮೂಡುಬಿದಿರೆಯಲ್ಲಿ ಭಾನುವಾರ ಸಂಜೆ ಪ್ರತಿಭಟನಾ ಮೆರವಣಿಗೆ ನಡೆಯಿತು.


  ಹಿಂಜಾವೇ ಪ್ರಾಂತ ಕಾರ್ಯಕಾರಣಿ  ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣಗೈಯುತ್ತಾ ಈ ಸಮಾಜ ಗುಲಾಮಗಿರಿಯಿಂದ ಮೇಲೆದ್ದು   ಈಗ ಸ್ವಂತ ಕಾಲಿನಲ್ಲಿ ಸ್ವಾಭಿಮಾನದಿಂದ  ತಲೆ ಎತ್ತಿ ನಿಂತಿದೆ. ಪ್ರತಿಯೊಂದು ಮನೆಗಳಲ್ಲೂ ಪ್ರತಿಯೊಂದು ಮಗುವು ಧರ್ಮವನ್ನು ಅನುಸರಿಸುತ್ತಾ ದೇವತಾ ಭಕ್ತಿ, ಆಧ್ಯಾತ್ಮ, ಇತಿಹಾಸ, ಪರಂಪರೆ ಮತ್ತು ಸಂಸ್ಕಾರವನ್ನು ಅನುಸರಿಸುತ್ತಾ ಬರುತ್ತಿದ್ದು ಇದು ಎಲ್ಲೋ ಒಂದು ಕಡೆ ಭಾರತ ವಿರೋಧಿಗಳಿಗೆ, ಹಿಂದೂ ವಿರೋಧಿ ಶಕ್ತಿಗಳಿಗೆ ಬಲವಾಗಿ ಕಾಡುತ್ತಿರುವ ಸಮಸ್ಯೆಯಾಗಿದ್ದು ಇದನ್ನು ಒಡೆಯುವ ಷಡ್ಯಂತ್ರ ನಡೆಯುತ್ತಿರುವುದು ವಿಷಾಧಕರ ಆದ್ದರಿಂದ ಇಂತಹ ವಿರೋಧಿ ಶಕ್ತಿಗಳಿಗೆ ಹಿಂದೂ ಸಮಾಜ ಎಚ್ಚೆತ್ತುಕೊಂಡು ತಕ್ಕ ಪಾಠವನ್ನು ಕಲಿಸಬೇಕಾಗಿದೆ ಎಂದರು.


   ಇದಕ್ಕೂ  ಮೊದಲು ಸಾವಿರ ಕಂಬದ ಬಸದಿಯಿಂದ ಸ್ವರಾಜ್ಯ ಮೈದಾನದವರೆಗೆ ಕುಣಿತ ಭಜನೆಯ ತಂಡಗಳು ದೇವರ ನಾಮಸ್ಮರಣೆಯನ್ನು ಮಾಡುತ್ತಾ ಭಜನೆಯ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಿರುವ ಅವಿವೇಕಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಭಗವಂತನಲ್ಲಿ ಪ್ರಾರ್ಥಿಸಿ ಮೆರವಣಿಗೆಯಲ್ಲಿ ಸಾಗಿ ಬಂದರು.


ಭಜನಾ  ಪರಿಷತ್ತಿನ ರಾಜ್ಯಾಧ್ಯಕ್ಷ ಚಂದ್ರಶೇಖರ್  ತಾಲೂಕು ಅಧ್ಯಕ್ಷ ಲಕ್ಷ್ಮಣ್ ಸುವರ್ಣ, ವಿಶ್ವಹಿಂದು ಪರಿಷತ್   ಕಾರ್ಯಾಧ್ಯಕ್ಷ ಶಾಮ್ ಹೆಗ್ಡೆ,   ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಕಾರ್ಕಳ, ಹಿಂದು ಸಂಘಟನೆ ಪ್ರಮುಖರಾದ  ಪ್ರಶಾಂತ್ ಕೆಂಪುಗುಡ್ಡೆ, ರಂಜಿತ್ ಪೂಜಾರಿ ತೋಡಾರು, ಅಶೋಕ್ ಶೆಟ್ಟಿ ಬೇಲೊಟ್ಟು, ಮಂಜುನಾಥ್ ಬೆಳುವಾಯಿ ಮತ್ತಿತರ  ಪ್ರಮುಖರು ಉಪಸ್ಥಿತರಿದ್ದರು.

ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ  ಸಹ ಸಂಯೋಜಕ ರಾದ ಸಮಿತ್ ರಾಜ್ ಧರೆಗುಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. ವಿಹಿಂಪ ಬಜರಂಗದಳದ ಸುಚೇತನ್ ಜೈನ್ ವಂದಿಸಿದರು.

Post a Comment

0 Comments