ತಾಲೂಕು ಅಥ್ಲೆಟಿಕ್ಸ್ ಕ್ರೀಡಾಕೂಟ: 18ನೇ ಬಾರಿ ಆಳ್ವಾಸ್ ಶಾಲೆಗೆ ಸಮಗ್ರ
* 143 ಪದಕ
ಮೂಡುಬಿದಿರೆ: ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಒಟ್ಟು 62 ಚಿನ್ನ, 53 ಬೆಳ್ಳಿ ಮತ್ತು 29 ಕಂಚಿನ ಪದಕಗಳೊಂದಿಗೆ 143 ಪದಕಗಳನ್ನು ಪಡೆದು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿ, ಪ್ರೌಢಶಾಲಾ 14ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿ ಹಾಗೂ ಪ್ರೌಢಶಾಲಾ 17ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿಯೊಂದಿಗೆ ಕ್ರೀಡಾಕೂಟದ ಸತತವಾಗಿ 18ನೇ ಬಾರಿ ಆಳ್ವಾಸ್ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಮೂಡುಬಿದಿರೆ ತಾಲೂಕು ಗಳಿಸಿದ ಒಟ್ಟು 143 ಪದಕಗಳು ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು ಪಡೆದ ಪದಕಗಳಾಗಿವೆ ಎನ್ನುವುದು ಗಮನಾರ್ಹ.
ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ:
ಬಾಲಕರ ವಿಭಾಗ: ಸುಭಾಷ್ ಎ.ಆರ್, ಬಾಲಕಿಯರ ವಿಭಾಗ: ರಕ್ಷಿತಾ ಮತ್ತಪ್ಪ, ದೀಪಾ ನಿಂಗಪ್ಪ,
ಪ್ರೌಢ ಶಾಲಾ 14 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ: ಬಾಲಕರ ವಿಭಾಗ: ಕೌಶಿಕ್ ಪಿ ಶೆಟ್ಟಿಗಾರ್, ಬಾಲಕಿಯರ ವಿಭಾಗ: ಮೇಘಾ ಅಶೋಕ್ ಪೂಜಾರಿ, ಅಮೂಲ್ಯ ಬಿ
ಪ್ರೌಢ ಶಾಲಾ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ: ಬಾಲಕರ ವಿಭಾಗ: ಸಮರ್ಥ್ ಸಂಜೀವ ಕುಮಾರ್, ಬಾಲಕಿಯರ ವಿಭಾಗ: ಪೂಜಾ
ಸಾಧಕ ಕ್ರೀಡಾಪಟುಗಳನ್ನು ಆಳ್ವಾಸ್ ಅಧ್ಯಕ್ಷ ಡಾ.ಎಂ ಮೋಹನ ಆಳ್ವರು ಅಭಿನಂದಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇÃರಿ ಮೂಡುಬಿದಿರೆ, ದ.ಕ. ಹಾಗೂ ಸರ್ಕಾರಿ ಪ್ರೌಢಶಾಲೆ ನೆಲ್ಲಿಕಾರು ಸಂಯುಕ್ತ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಯಿತು.
0 Comments