ವಿಧಾನ ಪರಿಷತ್ ಗೆಲ್ಲಲು ಕೋಟ ನಾಯಕತ್ವ: ಮಹತ್ತರ ಜವಬ್ದಾರಿ ನೀಡಿದ ರಾಜ್ಯ ಬಿಜೆಪಿ

ಜಾಹೀರಾತು/Advertisment
ಜಾಹೀರಾತು/Advertisment

 ವಿಧಾನ ಪರಿಷತ್ ಗೆಲ್ಲಲು ಕೋಟ ನಾಯಕತ್ವ: ಮಹತ್ತರ ಜವಬ್ದಾರಿ ನೀಡಿದ ರಾಜ್ಯ ಬಿಜೆಪಿ


ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾಗಿದ್ದ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆಗೆ ಪುತ್ತೂರಿನ ಕಿಶೋರ್ ಕುಮಾರ್ ರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು ನಾಮಪತ್ರ ಸಲ್ಲಿಸಿದ್ದಾರೆ. ಈ ನಡುವೆ ಚುನಾವಣಾ ಉಸ್ತುವಾರಿಯಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಆಯ್ಕೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ರವರು ಘೋಷಣಾ ಪತ್ರ ಪ್ರಕಟಿಸಿದ್ದಾರೆ. 


ಈ ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಯಾಗಿ ಅನೇಕ ಕೆಲಸ ಕಾರ್ಯಗಳನ್ನು ಗ್ರಾಮ ಪಂಚಾಯತ್ ಸದಸ್ಯರಿಗಾಗಿ ಮಾಡಿಕೊಟ್ಟು ವೇತನ ಪರಿಷ್ಕರಣೆ, ವೇತನ ಹೆಚ್ಚಳ, ಗ್ರಾಮ ಪಂಚಾಯತ್ ನೌಕರರು ಹಾಗೂ ಸದಸ್ಯರಿಗೆ ವಿವಿಧ ಸವಲತ್ತುಗಳು ಸೇರಿದಂತೆ ಅನೇಕ ಬದಲಾವಣೆಗಳ ನಾಂದಿಗೆ ಕಾರಣಕರ್ತರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರು ಗ್ರಾಮ ಪಂಚಾಯತ್ ಸದಸ್ಯರಿಗೆ ಬಹಳ ಹತ್ತಿರದ ನಾಯಕರಾಗಿದ್ದರು. ಇದೀಗ ಅವರಿಂದ ತೆರವಾಗಿರುವ ಈ ಸ್ಥಾನವನ್ನು ಶಿವಕುಮಾರ್ ರವರು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು ಪೂಜಾರಿಯವರಿಗೆ ಗೆಲ್ಲಿಸುವ ಹೊಣೆಗಾರಿಕೆಯನ್ನು ನೀಡಲಾಗಿದೆ. ಮತ್ತು ಸಹಉಸ್ತುವಾರಿಗಳನ್ನಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ರವರಿಗೆ ನೀಡಲಾಗಿದೆ.

Post a Comment

0 Comments