ಹೆಣ್ಣು ಸಮಾಜದ ಕಣ್ಣು: ರಶ್ಮಿತಾ ಜೈನ್
ಮೂಡುಬಿದಿರೆ: ನಮ್ಮ ಜನ್ಮಕ್ಕೆ ಕಾರಣಳಾಗಿರುವ ಹೆಣ್ಣು ಧೈರ್ಯ, ಛಲ, ಮಮತೆ, ಪ್ರೀತಿ, ತ್ಯಾಗ, ಸಹನೆ, ಕ್ಷಮೆ ಎಲ್ಲದರಲ್ಲೂ ದೇವತೆಯಾಗಿದ್ದು ಸಮಾಜದಿಂದ ಗೌರವಿಸಲ್ಪಡಬೇಕಾದವಳು ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಹೇಳಿದರು.
ಅವರು ಲಿಂಗ ತಾರತಮ್ಯ ಧೋರಣೆ ನಿಲ್ಲಿಸಿ ಎಂಬ ಘೋಷವಾಕ್ಯದಿಂದ ಪ್ರಾರಂಭಗೊಂಡ ಅವರು ನಡ್ಯೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾರ್ಪಾಡಿಯಲ್ಲಿ ನಡೆದ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಶಿಬಿರವು ಹೆಣ್ಣನ್ನು ಗೌರವಿಸುವ ಪ್ರಕೃತಿ ಮಾತೆಯನ್ನು ಆರಾಧಿಸುವ ಸಂಸ್ಕೃತಿಯನ್ನು ನೂರ್ಮಡಿಗೊಳಿಸಿದೆ, ಸ್ತ್ರೀ ಸಮಾಜವನ್ನು ಗೌರವಿಸುವ ಸಮಾಜ ಬಲಿಷ್ಠ ರಾಷ್ಟವನ್ನು ಕಟ್ಟುತ್ತದೆ. ಆ ನಿಟ್ಟಿನಲ್ಲಿ ನಿಮ್ಮ ನಡೆಗಳು ಬಲಿಷ್ಠ ನಡೆಗಳಾಗಲಿ. ದೀರ್ಘವಾದ ಬದುಕಿನಲ್ಲಿ ಬರುವ ಸಂಘರ್ಷಗಳು ಬದುಕಿನ ಸಂಕೀರ್ಣತೆ, ಸವಾಲುಗಳನ್ನು ಎದುರಿಸುವಲ್ಲಿ ಎನ್‌ಎಸ್‌ಎಸ್ ಈ ಶಿಬಿರ ನಿಮಗೆ ಆತ್ಮವಿಶ್ವಾಸವನ್ನು ತುಂಬಲಿ ಎಂದರು.
ಮುಖ್ಯ ಅತಿಥಿಗಳಾಗಿ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರು ಭಾಗವಹಿಸಿ ನಾವು ಕಾರ್ಯದಲ್ಲಿ ಸಾಗಬೇಕೇ ಹೊರತು ಕಾರಣದಲ್ಲಿ ಅಲ್ಲ. ವ್ಯವಸ್ಥೆಗಳನ್ನು ಅನುಕೂಲಗಳನ್ನಾಗಿ ಮಾಡಿಕೊಳ್ಳುವ ಕೌಶಲ, ರಾಷ್ಟ್ರೀಯ ಸೇವಾ ಯೋಜನೆಯಿಂದ ಸಿದ್ಧಗೊಂಡಿದೆ ಬದುಕನ್ನು ಕಟ್ಟಿಕೊಳ್ಳುವ ಸುಂದರ ಕನಸು ಇಲ್ಲಿ ನೀವು ಪಡೆದ ಅನುಭವಗಳಿಂದ ನನಸಾಗಲಿ.
ವಕೀಲರಾದ ಬಾಹುಬಲಿ ಪ್ರಸಾದ್ ಮೂಡುಬಿದಿರೆಯ ಹೆಮ್ಮೆಯ ಸಂಸ್ಥೆಯಾದ ಎಕ್ಸಲೆಂಟ್ ಎನ್‌ಎಸ್‌ಎಸ್ ಮೂಲಕ ಗಾಂಧೀಜಿಯವರ ಕೂಡಿ ಬಾಳುವ ಶಿಕ್ಷಣವನ್ನು ನನಸಾಗಿದೆ. ಛಲ ಮತ್ತು ಆಶಾಭಾವದ ವ್ಯಕ್ತಿತ್ವ ಈ ಶಿಬಿರದ ಮೂಲಕ ದೃಢಗೊಳ್ಳಲಿ ಎಂದರು.
ವೇದಿಕೆಯಲ್ಲಿ ನಡ್ಯೋಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸವಿತಾ ಸತೀಶ್, ಶಿಕ್ಷಕಿ ಜಾನೆಟ್ ಲೋಬೊ, ಸಲಹಾ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಸ್ಥಳೀಯರಾದ ಪುರುಷೋತ್ತಮ ಶೆಟ್ಟಿ, ಪ್ರದೀಪ್ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತೇಶ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಶಿಬಿರಾಧಿಕಾರಿ ತೇಜಸ್ವಿ ಭಟ್, ವಿದ್ಯಾರ್ಥಿ ನಾಯಕರಾದ ಅಭಿನವ ಕು| ಅಪೇಕ್ಷಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸೃಷ್ಟಿದುರ್ಗಾ, ಸಮೀಕ್ಷಾ ಶೆಟ್ಟಿ ಚಂದ್ರಶೇಖರ್ ಸಾನ್ವಿ, ಪ್ರಥಮ್, ಊರವರ ಪರವಾಗಿ ಪತ್ರಕರ್ತರಾದ ಪ್ರಸನ್ನ ಹೆಗ್ಡೆ ಅಭಿಪ್ರಾಯ ಮಂಡಿಸಿದರು.
ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ , ಅಶೋಕ್ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಕು| ವಿನೊಲಿಯ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು.ತೇಜಸ್ವಿ ಭಟ್ ವಂದಿಸಿದರು.
0 Comments