ಅರಣ್ಯ ಅಧಿಕಾರಿ ವಿರುದ್ಧ ನೋ ರೆಸ್ಪಾನ್ಸ್:ಭಜನಾ ಪರಿಷತ್ತಿನಿಂದ ಇಂದು ಬೃಹತ್ ಪ್ರತಿಭಟನೆಗೆ ನಿರ್ಧಾರ
ಬಿಲ್ಲವ ಸಮುದಾಯದ ಮಹಿಳೆಯರ ಅವಹೇಳನ ಮತ್ತು ಕುಣಿತ ಭಜನೆಯ ಹೆಣ್ಣು ಮಕ್ಕಳ ಅವಹೇಳನವನ್ನು ಮಾಡಿದ್ದ ಅರಣ್ಯ ಅಧಿಕಾರಿ ಸಂಜೀವ ಕಾಣಿಯೂರು ವಿರುದ್ಧ ಸರ್ಕಾರವು ಯಾವುದೇ ಕ್ರಮವನ್ನು ತೆಗೆದುಕೊಳ್ಳದ ಕಾರಣ ಇಂದು ಮೂಡುಬಿದಿರೆಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಮೂಡುಬಿದರೆ ತಾಲೂಕು ಭಜನಾ ಪರಿಷತ್ ಮತ್ತು ವಿವಿಧ ಹಿಂದೂ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದ್ದು ಸಾವಿರ ಕಂಬದ ಬಸದಿಯಿಂದ ಮೂಡುಬಿದಿರೆ ಸ್ವರಾಜ್ ಮೈದಾನದವರೆಗೆ ಮೆರವಣಿಗೆ ಕೈಗೊಂಡು ಸ್ವರಾಜ್ ಮೈದಾನದಲ್ಲಿ ಸಮರೋಪ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಚಿಂತಕ ಶ್ರೀಕಾಂತ್ ಶೆಟ್ಟಿ ಅವರು ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ ಎಂದು ಭಜನಾ ಪರಿಷತ್ ಮೂಡಬಿದ್ರೆ ತಾಲೂಕು ಘಟಕದ ಅಧ್ಯಕ್ಷರಾದ ಲಕ್ಷ್ಮಣ ಸುವರ್ಣ ಅಳಿಯೂರು ಇವರು ತಿಳಿಸಿರುತ್ತಾರೆ.
0 Comments