ಕರಾವಳಿಯ ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ಧಿ ನೀಡಿದ ಕೋಟ:ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬರಲಿದೆ ಮತ್ಸ್ಯಗಂಧ ರೈಲು: ಅಪಘಾತ ಆದರೂ ನೋ ಪ್ರಾಬ್ಲಮ್

ಜಾಹೀರಾತು/Advertisment
ಜಾಹೀರಾತು/Advertisment

 ಕರಾವಳಿಯ ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ಧಿ ನೀಡಿದ ಕೋಟ

:ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬರಲಿದೆ ಮತ್ಸ್ಯಗಂಧ ರೈಲು: 

ಅಪಘಾತ ಆದರೂ ನೋ ಪ್ರಾಬ್ಲಮ್

ಸುರಕ್ಷಿತ ಮತ್ತು ಆರಾಮದಾಯಕ ರೈಲು ಪ್ರಯಾಣಕ್ಕೆ ಅಗತ್ಯವಾದ LHB ಬೋಗಿಗಳನ್ನು ಮತ್ಸ್ಯ ಗಂದಾ ಎಕ್ಸ್ ಪ್ರೆಸ್ ರೈಲಿಗೆ ಪೆಬ್ರವರಿ 17 ನೇ ತಾರೀಕಿನಿಂದ ಜೋಡಿಸಲಾಗುತಿದ್ದು, ಕರಾವಳಿಗರ ದಶಕಗಳ ಬೇಡಿಕೆ ಈಡೇರಿದಂತಾಗಿದೆ..


ವಿವಿದ ಸಾಮಾಜಿಕ ಜಾಲತಾಣಗಳಲ್ಲಿ ಹಾಗು ಜನಪ್ರತಿನಿದಿಗಳ ಮೂಲಕ ಸಾರ್ವಜನಿಜರು ನಿರಂತರ ವಾಗಿ ಮತ್ಸಗಂದಾ ಹಳೆಯ ಬೋಗಿಯ ಸಮಸ್ಯಗಳ ಬಗ್ಗೆ ದೂರು ದಾಖಲಿಸಿದರೂ ಇಪ್ಪತ್ತು ಇಪ್ಪತೈದು ವರ್ಷಗಳಷ್ಟು ಹಳೆಯ ಬೋಗಿಗಳಲ್ಲೇ ಮತ್ಸಗಂದಾ ರೈಲು ಓಡುತ್ತಿರುವ ಬಗ್ಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ಸಂಸದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿಯವರ ಗಮನಕ್ಕೆ ಕಳೆದ ಜುಲೈನಲ್ಲಿ ತಂದಿತ್ತು.


ಕಳೆದ ಜುಲೈನಲ್ಲಿ ರೈಲ್ವೇ ಸಚಿವರನ್ನು ಬೇಟಿಯಾಗಿದ್ದ ಸಂಸದ ಶ್ರೀನಿವಾಸ್ ಪೂಜಾರಿಯವರು ರೈಲ್ವೇ ಸಚಿವರಿಗೆ ಮತ್ಸಗಂದಾ ರೈಲಿನ ಮಹತ್ವ ಮತ್ತುLHb ಕೋಚ್ ಅಗತ್ಯಗಳನ್ನು ಮನವರಿಕೆ ಮಾಡಿಕೊಟ್ಟು LHB ಬೋಗಿಗಳ ಜೋಡಣೆಗೆ ದಕ್ಷಿಣ ರೈಲ್ವೆಗೆ ಸೂಚನೆ ಕೊಡಿಸಿದ್ದಲ್ಲದೇ ಈ ಪ್ರಕ್ರಿಯೆಗೆ ನಿರಂತರ ಪತ್ರ ವ್ಯವಹಾರವನ್ನೂ ಮಾಡಿದ್ದರು.

ಸಂಸದರ ಕಾರ್ಯಗಳಿಗೆ ಪೂರಕವಾಗಿ ವಿವಿಧ ರೈಲು ಹೋರಾಟಗಾರರು, ವ್ಲಾಗರ್ ಗಳು ವಿಡಿಯೋ ,ಈ ಮೈಲ್ ಮೂಲಕ  ರೈಲ್ವೆಗೆ ಒತ್ತಡ ಹಾಕಿದ್ದರು.


ಈ ಹಿನ್ನೆಲೆಯಲ್ಲಿ , ದಕ್ಷಿಣ ರೈಲ್ವೆ ಈ ಬಗ್ಹೆ ಅದಿಕೃತ ಪ್ರಕಟಣೆ ಹೊರಡಿಸಿದ್ದು ,ಮತ್ಸ್ಯ ಗಂದಾ ರೈಲಿಗೆ ಆಧುನಿಕ ಹೊಸ LHB ಬೋಗಿಗಳನ್ನು, 120 ದಿನದ ಮುಂಗಡ  ಟಿಕೇಟ್ ಬುಕ್ಕಿಂಗ್ ಆಗಿರುವ  ಅವದಿ ಕಳೆದು ಪೆಬ್ರವರಿ 17 ರಿಂದ ಜೋಡಿಸುವುದಾಗಿ ಪ್ರಕಟಿಸಿದೆ.

ಇದಕ್ಕೆ ಕಾರಣರಾದ ಸಂಸದ ಶ್ರೀನಿವಾಸ್ ಪೂಜಾರಿಯವರಿಗೆ ,ವಿವಿಧ ರೈಲು ಹೋರಾಟಗಾರರಿಗೆ ಹಾಗು ಸಾಮಾಜಿಕ ಜಾಲತಾಣದ ಸಕ್ರೀಯರಿಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅದ್ಯಕ್ಷ ಶ್ರೀ ಗಣೇಶ್ ಪುತ್ರನ್  ದನ್ಯವಾದಗಳನ್ನು ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡ ಸಂಸದ ಕೋಟ ಈ ರೀತಿ ಹೇಳಿಕೊಂಡಿದ್ದಾರೆ.

ಕರಾವಳಿ ಭಾಗದ ರೈಲು ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಲು ಉತ್ಸುಕನಾಗಿದ್ದೇನೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡವು ಸೇರಿದಂತೆ ಕರ್ನಾಟಕದ ಕರಾವಳಿ ಮತ್ತು ಮಹಾರಾಷ್ಟ್ರವನ್ನು ಬೆಸೆಯುವ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ಒಂದು ಭಾವನಾತ್ಮಕವಾದ ಪ್ರಯಾಣವನ್ನು ಬೆಸೆಯುವ ರೈಲು ಆಗಿದೆ. ಅದೆಷ್ಟೋ ವರ್ಷಗಳಿಂದ ಕರ್ನಾಟಕ ಕರಾವಳಿಗಳು ಮುಂಬೈಗೆ ತೆರಳಲು ಈ ರೈಲನ್ನು ಅವಲಂಬಿಸಿದ್ದಾರೆ. ಆದರೆ ಈ ರೈಲಿಗೆ ಬಹಳಷ್ಟು ವರ್ಷವಾಗಿದ್ದ ಕಾರಣ  ಒಂದಷ್ಟು ಶಿಥಿಲಾವಸ್ಥೆಗೆ ತಲುಪಿತ್ತು.

ಈ ಹಿಂದೆ ಅಂದರೆ ಜುಲೈ ಸಮಯದಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿದ್ದು ಆ ಸಂದರ್ಭದಲ್ಲಿ ಗೌರವಾನ್ವಿತ ಶ್ರೀ ಅಶ್ವಿನಿ ವೈಷ್ಣವ್ ರವರು ಮತ್ತು ನಮ್ಮದೇ ರಾಜ್ಯದ ವಿ.ಸೋಮಣ್ಣರವರ ಬಳಿ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿಗೆ ಹೊಸ ಕೋಚನ್ನು ಅಂದರೆ ಅತ್ಯಾಧುನಿಕ ಎಲ್‌ಹೆಚ್‌ಬಿ ಕೋಚ್ ಅನ್ನು ಅಳವಡಿಸಿ ಮೇಲ್ದರ್ಜೆಗೇರಿಸಬೇಕೆಂದು ಮನವಿ ಮಾಡಿದ್ದೆ. ನನ್ನ ಮನವಿಗೆ ಪೂರಕವಾಗಿ ಸ್ಪಂದಿಸಿದ್ದ ಸಚಿವರುಗಳು ಶೀಘ್ರವಾಗಿ ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸುತ್ತೇವೆ ಎಂಬ ಭರವಸೆ ನೀಡಿದ್ದರು. ಇದೀಗ ಸಚಿವರು ನೀಡಿದ್ದ ಭರವಸೆಗಳು ಈಡೇರಿದ್ದು ಮತ್ಸ್ಯಗಂಧ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನದ ಎಲ್‌ಹೆಚ್‌ಬಿ ಭೋಗಿಗಳು ಉತ್ಪಾದನೆಗೊಳ್ಳುತ್ತಿವೆ. ಈ ನಡುವೆ ಹೊಸ ಆದೇಶ ಹೊರಡಿಸಿರುವ ಇಲಾಖೆಯು ಫೆಬ್ರವರಿ 15 ಅಂದರೆ ಮುಂದಿನ 120 ದಿನಗಳ ಕಾಲ ಪ್ರಯಾಣಿಕರು ರೈಲ್ವೆ ಬುಕಿಂಗ್ ಮಾಡಿರುವುದರಿಂದ ಫೆಬ್ರವರಿ 15ರವರೆಗೆ ಈಗ ಇರುವ ಭೋಗಿಗಳಲ್ಲೇ ಮತ್ಸ್ಯಗಂಧ ರೈಲು ಪ್ರಯಾಣಿಸಲಿದೆ. ಮತ್ತು ಫೆಬ್ರವರಿ 15 ರಿಂದ ಹೊಸ ಬೋಗಿಗಳನ್ನು ಅಳವಡಿಸುವ ಮೂಲಕ ಅತ್ಯಾಧುನಿಕ ಎಲ್‌ಹೆಚ್‌ಬಿ ಕೋಚ್ ಗಳನ್ನು ಒಳಗೊಂಡಿರುವ ಸುಂದರ ರೈಲು ಕರಾವಳಿ ಮತ್ತು ಮುಂಬೈಯನ್ನು ಬೆಸೆಯಲಿದೆ. ಎಲ್‌ಹೆಚ್‌ಬಿ ಕೋಚ್ ಅತ್ಯಾಧುನಿಕ ತಂತ್ರಜ್ಞಾನದ ಕೋಚ್ ಆಗಿದ್ದು ಯಾವುದೇ ಅಪಘಾತ ಸಂಭವಿಸಿದರೂ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ತಡೆಯುವ ತಂತ್ರಜ್ಞಾನ ಈ ಕೋಚ್‌ನಲ್ಲಿದೆ. ಈಗಾಗಲೇ ಹಲವಾರು ರೈಲ್ವೆ ಪ್ರಯಾಣಿಕರು, ರೈಲ್ವೆ ಹಿತ ರಕ್ಷಣಾ ಸಮಿತಿಯವರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಮಂದಿ ರೈಲು ಅವ್ಯವಸ್ಥೆಯ ಬಗ್ಗೆ ನನ್ನ ಗಮನ ಸೆಳೆದಿದ್ದರು. ಈ ಎಲ್ಲಾ ಅಂಶಗಳನ್ನು ನಾನು ರೈಲ್ವೆ ಸಚಿವರುಗಳ ಮುಂದಿಟ್ಟು ವಿನಂತಿಸಿದ್ದು ರೈಲ್ವೆ ಸಚಿವರು ನನ್ನ ಮನವಿಗೆ ಅತ್ಯಂತ ವೇಗವಾಗಿಯೇ ಸ್ಪಂದಿಸಿದ್ದು ಗೌರವಾನ್ವಿತ ಅಶ್ವಿನಿ ವೈಷ್ಣವ್ ಹಾಗೂ ವಿ ಸೋಮಣ್ಣರವರಿಗೆ ಧನ್ಯವಾದಗಳು ತಿಳಿಸುತ್ತೇನೆ. ಹೊಸ ರೈಲಿನ ಕೋಚುಗಳಿಗೆ ನಾವೆಲ್ಲರೂ ಮಾನಸಿಕವಾಗಿ ತಯಾರಾಗುವುದು ಮತ್ತು ಆ ರೈಲಿನ ಪ್ರಯಾಣವನ್ನು ನಾವೆಲ್ಲರೂ ಅನುಭವಿಸೋಣ ಎಂಬುದೇ ನಿಮ್ಮೊಂದಿಗೆ ಹಂಚಿಕೊಳ್ಳುವ ಖುಷಿ...


Post a Comment

0 Comments