ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್. 44ನೇ ಸೇವಾ ಯೋಜನೆ ಅಕ್ಟೋಬರ್ ತಿಂಗಳ 2ನೇ ಸೇವಾ ಯೋಜನೆ.

ಜಾಹೀರಾತು/Advertisment
ಜಾಹೀರಾತು/Advertisment

 ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್.

44ನೇ ಸೇವಾ ಯೋಜನೆ 

ಅಕ್ಟೋಬರ್ ತಿಂಗಳ  ಸೇವಾ ಯೋಜನೆ.



ಮೂಡುಬಿದ್ರಿ ತಾಲೂಕಿನ ಮೂಡುಮಾರ್ನಾಡ್ ಗ್ರಾಮದ  ಪ್ರವೀಣ್ ಪೂಜಾರಿ ಎಂಬವರಿಗೆ 6-9-24ರಂದು ನಾಯಿ ಅಡ್ಡ ಬಂದು ಆಕ್ಸಿಡೆಂಟ್ ಆಗಿ ಬಲ ಭಾಗದ ಕೈ ಮುರಿತವಾಗಿದ್ದು ತಲೆಗೂ ಪೆಟ್ಟಾಗಿರುತ್ತದೆ. 2ವಾರ ಆಳ್ವಾಸ್ ಆಸ್ಪತ್ರೆಯಲ್ಲಿ ಐ. ಸಿ. ಯು ನಲ್ಲಿ ಇದ್ದು ಸುಮಾರು 2ಲಕ್ಷ ದಷ್ಟು ಖರ್ಚಾಗಿದ್ದು ಈಗ ಮನೆಗೆ ಕರೆದು ಕೊಂಡು ಬಂದಿರುತ್ತಾರೆ. ಈಗ ನೆನಪು ಶಕ್ತಿ ಸ್ವಲ್ಪ ಕಡಿಮೆ ಆಗಿರುತ್ತದೆ.ಇವರಿಗೆ 2.5ವರ್ಷದ ಮುಂಚೆ ಆಕ್ಸಿಡೆಂಟ್ ಆಗಿದ್ದು ಸೊಂಟ ಕ್ಕೆ ಬಲವಾದ ಪೆಟ್ಟಾಗಿತ್ತು.ಆಗ 2ಆಪರೇಷನ್ ಆಗಿದ್ದು ಇವರಿಗೆ ಕೆಲಸ ಕ್ಕೆ ಹೋಗಲು ಆಗುತ್ತಿರಲಿಲ್ಲ. ಆಗ ಆಸ್ಪತ್ರೆಯಲ್ಲಿ ಸುಮಾರು 3.5ಲಕ್ಷ ಖರ್ಚಾಗಿತ್ತು.ಸ್ವಲ್ಪ ಚೇತರಿಸುವ ಸಮಯದಲ್ಲಿ ಇನ್ನೊಂದು ಆಕ್ಸಿಡೆಂಟ್ ಆಗಿ ತುಂಬಾ ಕಷ್ಟದಲ್ಲಿ ಇದ್ದಾರೆ. ಇವರ ಹೆಂಡತಿಯು ಕೂಲಿ ಕೆಲಸ ಮಾಡುತ್ತಿದ್ದು ಈಗ ಗಂಡನನ್ನು ನೋಡಿ ಕೊಳ್ಳಲು ಮನೆಯಲ್ಲೇ ಇದ್ದಾರೆ.

ಇವರಿಗೆ 2ಮಕ್ಕಳಿದ್ದು ದೊಡ್ಡ ಮಗ 9ನೇ ತರಗತಿ ಯಲ್ಲಿ ಹಾಗೂ ಚಿಕ್ಕ ಮಗಳು 5ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಇವರ ದೈನಂದಿನ ಮನೆಯ ಖರ್ಚು ಹಾಗೂ ಇವರ ಔಷದಿಯ ಖರ್ಚು ತುಂಬಾ ಇದ್ಧು ಇವರ ಕಷ್ಟಕ್ಕೆ ಸ್ಪಂದಿಸಿ  ನಮ್ಮ ಸೇವಾ ಸಂಘದಿಂದ 10000 ರೂಪಾಯಿಯನ್ನು ದಿನಾಂಕ 20-10-2024 ರಂದು ಹಸ್ತಾಂತರಿಸಲಾಯಿತು.

Post a Comment

0 Comments