ಆಳ್ವಾಸ್ ಫಾರ್ಮಸಿ ಕಾಲೇಜು ಉದ್ಘಾಟನೆ
*ಫಾರ್ಮಸಿ: ವೈದ್ಯ- ರೋಗಿ ನಡುವಿನ ಸೇತು : ಡಾ.ಮೋಹನ ಆಳ್ವ
ಮೂಡುಬಿದಿರೆ: ‘ಔಷಧಾಲಯ ಅಥವಾ ಔಷಧ ವಿಜ್ಞಾನ ಎಂಬುದು ಕೇವಲ ಕುಳಿತು ಮಾಡುವ ವ್ಯಾಪಾರಿ ವೃತ್ತಿಯಲ್ಲ, ಅದು ವೈದ್ಯರು ಮತ್ತು ರೋಗಿಗಳ ಮಧ್ಯದ ಸೇತು’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು.
ಆಳ್ವಾಸ್ ಕಾಲೇಜಿನ ಧನ್ವಂತರಿ ಸಭಾಭವನದಲ್ಲಿ ಸೋಮವಾರ ನಡೆದ ಆಳ್ವಾಸ್ ಫಾರ್ಮಸಿ ಕಾಲೇಜು ಉದ್ಘಾಟನೆ ಮತ್ತು ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಔಷಧಾಲಯ ಪರಿಣಿತರು ವೈದ್ಯರು ಸೂಚಿಸಿ ಬರೆದ ಔಷಧಗಳ ಸಂಪೂರ್ಣ ಜ್ಞಾನ ಹೊಂದಿರಬೇಕು. ಔಷಧಾಲಯ ಪರಿಣತರಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಿದೆ. ಆಳ್ವಾಸ್‌ನಲ್ಲಿ ‘ಫಾರ್ಮಸಿ’ ಎಲ್ಲ ಅಗತ್ಯ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದರು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್,ಉದ್ಯಮಿ ಕೆ.ಶ್ರೀಪತಿ ಭಟ್, ಸಿ.ಹೆಚ್.ಗಫೂರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಡಾ. ಹನ್ನಾ ಆಳ್ವ ಉಪಸ್ಥಿತರಿದ್ದರು.
ಆಳ್ವಾಸ್ ಫಾರ್ಮಸಿ ಕಾಲೇಜಿನ ಡಾ.ಎಂ.ಮಂಜುನಾಥ್ ಸೆಟ್ಟಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂತಪಿಸಿದರು.
0 Comments