ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಮಾರ್ನಾಡಿನಲ್ಲಿ  ಹ್ಯಾಂಡ್ ಬಾಲ್ ಪಂದ್ಯಾಟ 

ಮೂಡುಬಿದಿರೆ: ಪಿ. ಎಂ. ಶ್ರೀ. ಸ. ಹಿ. ಪ್ರಾ. ಶಾಲೆ ಮೂಡುಮಾರ್ನಾಡುವಿನಲ್ಲಿ

 ಪ್ರಾಥಮಿಕ ಹಾಗೂ ಪ್ರೌಢ ಶಾಲಾ  ವಿದ್ಯಾರ್ಥಿಗಳ ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟ ನಡೆಯಿತು.  ಪಡುಮಾರ್ನಾಡು ಪಂಚಾಯತ್ ನ ಅಧ್ಯಕ್ಷ ವಾಸುದೇವ ಉಪಾಧ್ಯಾಯ ಪಂದ್ಯಾಟವನ್ನು  ಉದ್ಘಾಟಿಸಿದರು. 

ಕೇಂದ್ರ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ, ಬೆಳುವಾಯಿ ಸಹಕಾರಿ ಸಂಘದ ಅಧ್ಯಕ್ಷ  ಭಾಸ್ಕರ್ ಎಸ್ ಕೋಟ್ಯಾನ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪಂಚಾಯತ್  ಸದಸ್ಯರಾದ  ಶ್ರೀನಾಥ್ ಎನ್ ಸುವರ್ಣ, ಸುಭಾಶ್ ಚಂದ್ರ  ಚೌಟ, ವಿಶ್ವನಾಥ,  ಶಕುಂತಳ, ಯಶೋಧ ಅತಿಥಿಗಳಾಗಿ ಭಾಗವಹಿಸಿದರು. 

ಎಸ್. ಡಿ. ಎಂ. ಸಿ. ಅಧ್ಯಕ್ಷ ಯೋಗೀಶ್ ಆಚಾರ್ಯ ಸಭೆಯ ಅಧ್ಯಕ್ಷತೆಯನ್ನು ವಹಿದ್ದರು. ದೈಹಿಕ ಶಿಕ್ಷಣ ಪರವೀಕ್ಷಣಾಧಿಕಾರಿ  ನಿತ್ಯಾನಂದ ಶೆಟ್ಟಿ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಮೂಡುಮರ್ನಾಡು ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಡಾ |ಬಿ. ರಾಜಶ್ರೀ ಹಾಜರಿದ್ದರು. ಎಸ್. ಡಿ. ಎಂ. ಸಿ ಯ ಸದಸ್ಯರು ಹಳೆವಿದ್ಯಾರ್ಥಿಗಳು, ತಾಯಂದಿರ ಸಮಿತಿಯ ಸದಸ್ಯರು, ಪೋಷಕರು, ಅಂಗನವಾಡಿ ಕಾರ್ಯಕರ್ತೆ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಜ್ಯೋತಿ ಡಿ'ಸೋಜಾ  ಸ್ವಾಗತಿಸಿದರು. ಡೈಸಿ ಎಸ್. ಪಿಂಟೊ ಧನ್ಯವಾದವಿತ್ತರು. ದೈಹಿಕ ಶಿಕ್ಷಣ ಶಿಕ್ಷಕಿ ಪ್ರಮೋದ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments