ಗಾಂಧಿಜಯಂತಿ : ಜನಜಾಗೃತಿ ವೇದಿಕೆಯಿಂದ ಪೂರ್ವ ತಯಾರಿ ಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಗಾಂಧಿಜಯಂತಿ : ಜನಜಾಗೃತಿ ವೇದಿಕೆಯಿಂದ ಪೂರ್ವ ತಯಾರಿ ಸಭೆ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಮೂಡುಬಿದಿರೆ ತಾಲೂಕಿನ ಜನ ಜಾಗ್ರತಿ ವೇದಿಕೆಯ   ವತಿಯಿಂದ  ಗಾಂಧಿ ಜಯಂತಿ ಕಾರ್ಯಕ್ರಮದ  ಪೂರ್ವ ತಯಾರಿ ಸಭೆಯು ಸಮಾಜ ಮಂದಿರದಲ್ಲಿ ನಡೆಯಿತು.

 ಜನ ಜಾಗ್ರತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಸುಭಾಶ್ಚಂದ್ರ ಚೌಟ  ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

 

ನಂತರ ಮಾತನಾಡಿದ ಅವರು ಸಭೆಯನ್ನು ಅಕ್ಟೋಬರ್ 2 ರಂದು ಬೆಳಿಗ್ಗೆ 9.30 ಕ್ಕೆ ಕಾರ್ಯಕ್ರಮ ವನ್ನು ಸಮಾಜ ಮಂದಿರದಲ್ಲಿ ಹಮ್ಮಿಕೊಳ್ಳುವುದೆಂದು  ತಯಾರಿಯ ಬಗ್ಗೆ ಚರ್ಚಿಸಿ ನಿರ್ಣಯಿಸಲಾಯ್ತು. 


ಸುಮಾರು 300 ಜನರನ್ನು ಸೇರಿಸಿ ವ್ಯವಸ್ಥಿತ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಬಗ್ಗೆ  ಮಾಹಿತಿ ನೀಡಿದರು.  ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಜನಜಾಗ್ರತಿ ವೇದಿಕೆಯ ಕಾನೂನು ಸಲಹೆಗಾರರಾದ ಬಾಹುಬಲಿ ಪ್ರಸಾದ್ ಸರ್, ಧನ ಕೀರ್ತಿ ಬಲಿಪ, ತಾಲೂಕಿನ ಯೋಜನಾಧಿಕಾರಿ ಸುನೀತಾ ನಾಯ್ಕ್  ಹಾಗೂ ಜನ ಜಾಗ್ರತಿ ವೇದಿಯ 6 ಜನ ಉಪಾಧ್ಯಕ್ಷರು, ಹಾಗೂ ಎಲ್ಲಾ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.  

 ಮೇಲ್ವಿಚಾರಕಿ ಶಿವ ಲಕ್ಷ್ಮಿ ಸ್ವಾಗತಿಸಿ, ಲೆಕ್ಕ ಪರಿಶೋಧಕ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ಮಮತ ರವರು ವಂದಿಸಿದರು.

Post a Comment

0 Comments