ವಾಲ್ಪಾಡಿ ಖಾಝಿಯಾಗಿ ತ್ವಾಖಾ ಉಸ್ತಾದ್ ಅಧಿಕಾರ ಸ್ವೀಕಾರ

ಜಾಹೀರಾತು/Advertisment
ಜಾಹೀರಾತು/Advertisment

 ವಾಲ್ಪಾಡಿ ಖಾಝಿಯಾಗಿ ತ್ವಾಖಾ ಉಸ್ತಾದ್ ಅಧಿಕಾರ ಸ್ವೀಕಾರ


 ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ನೂತನ ಖಾಝಿಯಾಗಿ ದ..ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ಅವರು ಇಂದು ಅಧಿಕಾರ ಸ್ವೀಕರಿಸಿದರು.

   ಮಸೀದಿಯಲ್ಲಿ ನಡೆದ ಖಾಝಿ ಸ್ವೀಕಾರ ಸಮಾರಂಭದಲ್ಲಿ  ಸಯ್ಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಅವರು ಖಾಝಿ ಪಟ್ಟ ನೀಡಿದರು.

  ಮಸೀದಿ ಕಮಿಟಿಯ ಅಧ್ಯಕ್ಷ ಎಂ.ಎಂ.ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ತೋಡಾರು ಮಸೀದಿಯ ಖತೀಬರಾದ ಐ‌.ಕೆ.ಮೂಸ ದಾರಿಮಿ ಕಕ್ಕಿಂಜೆ ಹಾಗೂ ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

  ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್ ಮರೋಡಿ, ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಖಾಝಿ ಅವರ ಸಹೋದರ ಅಬ್ದುಲ್ ರಹ್ಮಾನ್, ದಾರುನ್ನೂರ್ ವಿದ್ಯಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಮದ್ ಹಾಜಿ, ಮೂಡುಬಿದಿರೆ ಮಸೀದಿ ಕಮಿಟಿ ಅಧ್ಯಕ್ಷ ಅಬ್ದುರ್ರಹ್ಮಾನ್ ( ಅಬ್ಬಾಕ),ಹಂಡೇಲ್ ಮಸೀದಿಯ ಅಧ್ಯಕ್ಷ ಎಚ್‌.ಎಂ.ಹಾಜಿ ,ಹಾಸ್ಕೊ ಅಬ್ದುರ್ರಹ್ಮಾನ್ ಹಾಜಿ,ತೋಡಾರ್ ಮಸೀದಿ ಕಮಿಟಿ ಅಧ್ಯಕ್ಷ ಎಂ.ಎ.ಎಸ್.ಆಸಿಫ್,ಪೆರಾಡಿ ಮಸೀದಿಯ ಅಧ್ಯಕ್ಷ ಸಲಾಮ್ ಮರೋಡಿ,ಮಾಲಿಕ್ ಅಝೀಝ್, ಅಶ್ರಫ್ ಮರೋಡಿ, ಶಾಫಿ ಕಿರೋಡಿ, ಹೆಚ್.ಮುಹಮ್ಮದ್ ವೇಣೂರು, ರಝಾಕ್ ಮದನಿ, ವಾಲ್ಪಾಡಿ ಮಸೀದಿ ಕಮಿಟಿ ಗೌರವಾಧ್ಯಕ್ಷ ಮುಹಮ್ಮದ್ ದೋಣಿಬಾಗಿಲು,ಕಾರ್ಯದರ್ಶಿ ಝಕರಿಯಾ ಯೂಸುಫ್ ಮತ್ತಿತರರು ಉಪಸ್ಥಿತರಿದ್ದರು.

   ಇದೇ ಸಂದರ್ಭದಲ್ಲಿ ದಮಕ.ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು.

   ಮಸೀದಿ ಖತೀಬರಾದ ಅಬ್ಬಾಸ್ ಫೈಝಿ ದಿಡುಪೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಿ ಮಸೀದಿಯ ಖತೀಬರಾದ ಸಿರಾಜುದ್ದೀನ್ ಫೈಝಿ ಖಾಝಿ ಪರಿಚಯ ಮಾಡಿದರು.ವಾಲ್ಪಾಡಿ ಸದರ್ ಅಬ್ದುಲ್ ಹಕೀಮ್ ಅಶ್ರಫಿ ವಂದಿಸಿದರು. ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments