ಜವನೆರ್ ಬೆದ್ರ ತಂಡದಿಂದ ಸನ್ಮಾನ, ವಿವಿಧ ಕಾರ್ಯಕ್ರಮಗಳು

ಜಾಹೀರಾತು/Advertisment
ಜಾಹೀರಾತು/Advertisment

 ಜವನೆರ್ ಬೆದ್ರ ತಂಡದಿಂದ ಸನ್ಮಾನ, ವಿವಿಧ ಕಾರ್ಯಕ್ರಮಗಳು

 ಮೂಡುಬಿದಿರೆ : ಸ್ವಚ್ಛ ಭಾರತದ ಕಲ್ಪನೆಯೊಂದಿಗೆ ಆರಂಭಗೊಂಡ ಸಂಘಟನೆ ಜವನೆರ್ ಬೆದ್ರವು ಪ್ರತಿ ವಾರವಾರವೂ ಮೂರು ಗಂಟೆಗಳ ಕಾಲ ಸ್ವಚ್ಛತೆಯನ್ನು ಮಾಡುತ್ತಿರುವುದು ಮಾತ್ರವಲ್ಲದೆ ಜೀವವನ್ನು ಉಳಿಸಲು ಬೇಕಾಗುವ ರಕ್ತಕ್ಕಾಗಿ ರಕ್ತನಿಧಿಯನ್ನು ಸ್ಥಾಪಿಸಿ ಜನಸೇವೆಯನ್ನು ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.


 ಅವರು ಇಲ್ಲಿನ ಮೊಸರುಕುಡಿಕೆ ಉತ್ಸವದಂಗವಾಗಿ ಅಮರನಾಥ ಶೆಟ್ಟಿ ವೃತ್ತದ ಬಳಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು  ಮಾತನಾಡಿದರು.

ಚೌಟರ ಅರಮನೆಯ ಕುಲದೀಪ ಎಂ. ಮಾಜಿ ಸಂಸದ ನಳಿನ್ ಕುಮಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜಗತ್ತಿನಲ್ಲಿ ಇಂದು ಅಶಾಂತಿ ತಾಂಡವವಾಡುತ್ತಿದೆ. ಒಂದು ದೇಶದ ಮೇಲೆ ಮತ್ತೊಂದು ದೇಶ ಆಕ್ರಮಣ ನಡೆಸುತ್ತಿದೆ. ಆದರೆ ಭಾರತ ಆಕ್ರಮಣಶೀಲ ದೇಶವಲ್ಲ. ಇಲ್ಲಿನ ಸಂಸ್ಕೃತಿ ಆದರಿಸುವ ಸಂಸ್ಕೃತಿಯಾಗಿದೆ ಎಂದು ಹೇಳಿದರು.

 


ಜವನೆರ್ ಬೆದ್ರ ಫೌಂಡೇಶನ್‌ನ ಅಧ್ಯಕ್ಷ ಅಮರ್‌ಕೋಟೆ ಅಧ್ಯಕ್ಷತೆ ವಹಿಸಿ ಗೋಪಾಲಕೃಷ್ಣ ದೇವಳದ ಅಬಿವೃದ್ಧಿಗಾಗಿ ಶ್ರಮಿಸಿದ ಶಿವಾನಂದ ಪ್ರಭು ಅವರನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಪದಕ ಪುರಸ್ಕೃತ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಅವರನ್ನು ಗೌರವಿಸಲಾಯಿತು. 

ಸಂಸದ ಬೃಜೇಶ್ ಚೌಟ ಶುಭ ಹಾರೈಸಿದರು.   ಬಿಜೆಪಿ ಮುಖಂಡ ಕೆ.ಪಿ ಜಗದೀಶ ಅಧಿಕಾರಿ, ನ್ಯಾಯವಾದಿ ಶರತ್ ಶೆಟ್ಟಿ, ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಬಿಜೆಪಿ ಮಂಡಲ ಕಾರ್ಯದರ್ಶಿ ರಂಜಿತ್ ಪೂಜಾರಿ, ಪುರಸಭಾ ಸದಸ್ಯ ಪುರಂದರ ದೇವಾಡಿಗ, ಉದ್ಯಮಿ ದಿವಾಕರ ಶೆಟ್ಟಿ ತೋಡಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಅಷ್ಟಮಿದ ಗೊಬ್ಬು ಹಾಗೂ ಮುದ್ದುಕೃಷ್ಣ ರೀಲ್ಸ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ಸಂಚಾಲಕ ನಾರಾಯಣ ಪಡುಮಲ ಸ್ವಾಗತಿಸಿದರು. ಸಂದೀಪ್ ದರೆಗುಡ್ಡೆ ಕಾರ್ಯಕ್ರಮ ನಿರ್ವಹಿಸಿದರು. ರಾಗಂ ಆರ್ಕೆಸ್ಟ್ರಾ ತಂಡದಿಂದ ಭಕ್ತಿಭಾವ ಸಂಗೀತ, ದಿನೇಶ್ ಕೋಡಪದವು ಸಾರಥ್ಯದಲ್ಲಿ ಯಕ್ಷತೆಲಿಕೆ ಕಾರ್ಯಕ್ರಮ ನಡೆಯಿತು.

Post a Comment

0 Comments