ತಾಲೂಕು ಭಜನಾ ಪರಿಷತ್ ಸಭೆ
ಮೂಡುಬಿದಿರೆ: ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಾಲೂಕಿನ ಭಜನಾ ಪರಿಷತ್ತಿನ ಸಭೆಯನ್ನು ಲಕ್ಷ್ಮಣ ಸುವರ್ಣ ರವರ ಅಧ್ಯಕ್ಷತೆಯಲ್ಲಿ ವಲಯ ಕಛೇರಿಯಲ್ಲಿ ಭಾನುವಾರ ನಡೆಸಲಾಯಿತು.
ಸಭೆಯಲ್ಲಿ ತಾಲೂಕಿನ ಭಜನಾ ಮಂಡಳಿಗಳನ್ನು ಸಕ್ರಿಯಗೊಳಿಸುವುದು. ಮತ್ತು ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟಕೆ ಭಾಗವಹಿಸುವ ತಂಡಗಳ ಆಯ್ಕೆ ಬಗ್ಗೆ ಮಾಹಿತಿ ನೀಡುವುದರ ಬಗ್ಗೆ ಚರ್ಚೆ ನಡೆಸಲಾಯಿತು.
ಭಜನಾ ಪರಿಷತ್ತಿನ ಸಮನ್ವಯ ಅಧಿಕಾರಿ. ರಾಘವೇಂದ್ರ ಮುದ್ರಾಡಿಯವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ತಾಲೂಕಿನ ಭಜನಾ ಪರಿಷತ್ತಿನ ಪದಾಧಿಕಾರಿಗಳು. ವಲಯದ ಅಧ್ಯಕ್ಷರು ಪದಾಧಿಕಾರಿಗಳು. ಉಪಸ್ಥಿತರಿದ್ದರು.
ಮೇಲ್ವಿಚಾರಕಿ ಮಮತಾ ಸ್ವಾಗತಿಸಿದರು. ಭಜನಾ ಪರಿಷತ್ತಿನ ಸಮನ್ವಯಾಧಿಕಾರಿ ಸಂತೋಷ್ ಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಶಿವಲಕ್ಷ್ಮಿಯವರು ವಂದಿಸಿದರು.
0 Comments