ಸೋಲಾಪುರ ಚಾದರ ಮತ್ತು ಸಿಹಿ ತಿಂಡಿ ವಿತರಣೆ
ಮೂಡುಬಿದಿರೆ: 78ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಪ್ರಜ್ಞಾ ಆಶ್ರಯ ಕೇಂದ್ರದ ವಿದ್ಯಾರ್ಥಿಗಳಿಗೆ ಸೋಲಾಪುರ ಚಾದರ ಮತ್ತು ಸಿಹಿ ತಿಂಡಿ ವಿತರಣಾ ಕಾರ್ಯಕ್ರಮ ನಡೆಯಿತು.
ಸವೆರಾಪುರ ಚರ್ಚಿನ ರೆ.ಫಾ. ಅಶ್ವಿಲ್ ಅವರು ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಮೂಡುಬಿದಿರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಕೃಷ್ಣಪ್ಪ ಭಾಗವಹಿಸಿದರು.
ಮಿಲಾಗ್ರಿಸ್ ಸಂಸ್ಥೆಯ ಶಾಖಾ ವ್ಯವಸ್ಥಾಪಕಿ ಮೋಹಿನಿ ಎಂ. ಹಾಗೂ ವಸುಲಾತಿ ಅಧಿಕಾರಿ ಗೌತಮ್ ರೈ , ಪ್ರಜ್ಞಾ ಸಂಸ್ಥೆಯ ಅಧ್ಯಕ್ಷೆ ಸವಿತಾ ಹಾಗೂ ಸಮಾಲೋಚಕಿ ವಿದ್ಯಾಲಕ್ಷ್ಮೀ ಉಪಸ್ಥಿತರಿದ್ದರು.
ಪ್ರೀತಮ್ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.
0 Comments