ಮೂಡುಬಿದಿರೆಯಲ್ಲಿ ಪಾರ್ಶ್ವನಾಥ ಸ್ವಾಮಿ ಮೋಕ್ಷ ಕಲ್ಯಾಣ ದಿನಾಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ  ಪಾರ್ಶ್ವನಾಥ ಸ್ವಾಮಿ ಮೋಕ್ಷ ಕಲ್ಯಾಣ ದಿನಾಚರಣೆ


ಮೂಡುಬಿದಿರೆ : ಭಗವಾನ್ ಶ್ರೀ 1008 ಪಾರ್ಶ್ವ ನಾಥ ಸ್ವಾಮಿ 

2772ನೇ ವರ್ಷ ದ ಮೋಕ್ಷ ಕಲ್ಯಾಣ ದಿನವನ್ನು ಮೂಡುಬಿದಿರೆ ಶ್ರೀಮಠ ಹಾಗೂ ಗುರು ಬಸದಿಯಲ್ಲಿ ಭಾನುವಾರ ಭಕ್ತಿಭವದಿಂದ  ಆಚರಿಸಲಾಯಿತು.

18ಬಸದಿಗಳಲ್ಲಿ ಮುಖ್ಯ ಬಸದಿಯಾಗಿರುವ ಗುರು ಬಸದಿಯಲ್ಲಿ,  ಮೂಲಸ್ವಾಮಿ ಪಾರ್ಶ್ವನಾಥ ಸ್ವಾಮಿಯ 12ಅಡಿಯ ಕೃಷ್ಣ ಶಿಲ ಜಿನಬಿಂಬ ವಿಶೇಷ ಮಸ್ತಕಾಭಿಷೇಕ,  ಕ್ಷೀರಾಭಿಷೇಕ, ಅಷ್ಟ ವಿಧಾರ್ಚನೆ ಪೂಜೆಯನ್ನು ಸಲ್ಲಿಸಲಾಯಿತು.

ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಧರ್ಮ ಸಂದೇಶ ನೀಡಿ,

ಒಳ್ಳೆಯ ಗುಣ, ಪ್ರಸನ್ನತೆ, ನಿಗರ್ವದಿಂದ ಶ್ರೇಷ್ಠ ಸ್ಥಾನಕ್ಕೆ ತಲುಪಲು ಸಾಧ್ಯ ಎಂಬ ಪ್ರೇರಣೆ ನೀಡಿದವರು ಭಗವಾನ್ ಪಾರ್ಶ್ವನಾಥರು ಎಂದರು.

ಸ್ವಾಮೀಜಿಯವರ  ಮಾರ್ಗದರ್ಶನ ಲದಲ್ಲಿ ಸ್ಥಾನೀಯ ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯೆಯರು ಸಾಮೂಹಿಕ ಪೂಜೆ ಪಾಲ್ಗೊಂಡರು.

ಶಂಭವ್ ಕುಮಾರ, ಸಮಂತ, ವೀರೇಂದ್ರ ಜೈನ್, ಪಾರ್ಶ್ವನಾಥ,  ವೃಂದಾ ರಾಜೇಂದ್ರ, ಮಂಜುಳಾ ಅಭಯಚಂದ್ರ ಸುಧಾ, ಆರತಿ ಮೊದಲಾದವರು ಉಪಸ್ಥಿತರಿದ್ದರು. ವಿರಾಜ್ ಇಂದ್ರರು ಪೂಜೆ, ಆರತಿ ನೆರವೇರಿಸಿದರು.

Post a Comment

0 Comments