ಶಾಂಭವಿ ನದಿ ತಟದಲ್ಲಿ ದನಗಳ ರುಂಡ ಪತ್ತೆ ಆರೋಪಿಗಳ ಬಂಧನಕ್ಕೆ ಆಗ್ರಹ

ಜಾಹೀರಾತು/Advertisment
ಜಾಹೀರಾತು/Advertisment

 ಶಾಂಭವಿ ನದಿ ತಟದಲ್ಲಿ ದನಗಳ ರುಂಡ ಪತ್ತೆ 

ಆರೋಪಿಗಳ ಬಂಧನಕ್ಕೆ ಆಗ್ರಹ 


 ಕಡಂದಲೆಯಲ್ಲಿ ಹರಿಯುವ ಶಾಂಭವಿ ನದಿಯ ತಟದಲ್ಲಿ ಬುಧವಾರ ಬೆಳಿಗ್ಗೆ ಎರಡು ದನಗಳ ರುಂಡಗಳು ಮತ್ತು ಮೃತದೇಹದ ಅವಯವಗಳು ಪತ್ತೆಯಾಗಿವೆ.

ಸ್ಥಳೀಯರು ನದಿ ಬದಿಗೆ ತೆರಳಿದಾಗ ರುಂಡಗಳು ಪತ್ತೆಯಾಗಿದ್ದು ಸ್ಥಳೀಯರು ಜಮಾಯಿಸಿದರು. ಈ ಕುರಿತು ಮೂಡುಬಿದಿರೆ ಪೋಲಿಸರಿಗೆ ಮಾಹಿತಿ ನೀಡಿದ್ದು ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಹಾಗೂ ಸಿಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಬಳಿಕ ಮಹಜರು ಮಾಡಿ ಅಲ್ಲಿಯೇ ದಫನ ಮಾಡಲಾಯಿತು. ಈ ಪರಿಸರದಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಯುತ್ತಿದ್ದು ಅಲ್ಲಿ ವಧಿಸಿದ ಜಾನುವಾರು ತಲೆಗಳನ್ನು ನದಿಗೆ ಎಸೆದಿರಬಹುದೆಂದು ಶಂಕಿಸಲಾಗಿದೆ.

ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಭೇಟಿ ನೀಡಿ ಪೋಲಿಸರೊಂದಿಗೆ ಮಾತುಕತೆ ನಡೆಸಿದರು. ಅಕ್ರಮ ಗೋಸಾಗಟ, ಗೋಹತ್ಯೆ ನಡೆಸುವ ಮೂಲಕ ಮೂಡುಬಿದಿರೆಯ ಕೋಮು ಸಾಮರಸ್ಯವನ್ನು ಹಾಳು ಮಾಡುವ ಷಡ್ಯಂತ್ರ ನಡೆಯುತ್ತಿದೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. 

ಪಾಲಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ, ಸದಸ್ಯ ರಂಜಿತ್ ಭಂಡಾರಿ ಮತ್ತಿತರರು ಉಪಸ್ತಿತರಿದ್ದರು.


Post a Comment

0 Comments