ಐವನ್ ಹೇಳಿಕೆಗೆ ಸಂಸದ ಕೋಟ ಗರಂ:ಬಾಂಗ್ಲಾ ದುಷ್ಕರ್ಮಿಗಳನ್ನು ಅನುಸರಿಸುವ ಮಾನಸಿಕತೆ ಕಾಂಗ್ರೆಸ್ಸಿಗೆ ಬಂತಾ ಎಂದ ಕೋಟ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ರವರ ನಿರ್ಧಾರವನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆ ಸಭೆ ನಡೆದಿದ್ದು ಈ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಐವನ್ ಡಿಸೋಜ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ರಾಜ್ಯಪಾಲರನ್ನು ಕೂಡಲೇ ಪಾಪಸು ಕರೆಸಿಕೊಳ್ಳಿ ಇಲ್ಲವಾದರೆ ಬಾಂಗ್ಲಾದೇಶದ ರೀತಿಯಲ್ಲೇ ರಾಜ್ಯಪಾಲರನ್ನು ಓಡಿಸಬೇಕಾಗುತ್ತದೆ. ನಾವು ಕರೆಕೊಟ್ಟರೆ ನಮ್ಮ ಕಾರ್ಯಕರ್ತರು ರಾಜಭವನಕ್ಕೆ ನುಗ್ಗಲು ಸಿದ್ದರಾಗಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದರು. ಈ ಹೇಳಿಕೆಯನ್ನು ಖಂಡಿಸಿದ ಲೋಕಸಭಾ ಸಚೇತಕರು ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಐವನ್ ಡಿಸೋಜಾ ರಾಜ್ಯದ ಜನತೆಯ ಕ್ಷಮೆ ಕೇಳಲಿ ಎಂದು ಅಗ್ರಹಿಸಿದ್ದಾರೆ. ಮುಂದುವರಿದು ಬಾಂಗ್ಲಾದೇಶದ ಮತಾಂಧ ದುಷ್ಕರ್ಮಿಗಳನ್ನು ಅನುಕರಿಸುವಷ್ಟು ಕಾಂಗ್ರೆಸ್ ಪಕ್ಷದ ನಾಯಕರಿಗೆ ಮಾನಸಿಕತೆ ಬಂದಿದ್ದು ಖೇದಕರ ಎಂದು ಹೇಳಿದ್ದಾರೆ.
"ರಾಜಭವನಕ್ಕೆ ನುಗ್ಗಿ ರಾಜ್ಯಪಾಲರನ್ನು ಬಾಂಗ್ಲಾ ರೀತಿಯಲ್ಲಿ ಓಡಿಸುತ್ತೇವೆಂದ ಐವನ್ ಡಿಸೋಜ ಹೇಳಿಕೆ ದೇಶದ್ರೋಹದ ಪರಮಾವಧಿಯಾಗಿದೆ. ಬಾಂಗ್ಲಾದಲ್ಲಿ ದೊಂಬಿ ಎಬ್ಬಿಸಿದ ದುಷ್ಕರ್ಮಿಗಳನ್ನು ಅನುಕರಿಸುವಷ್ಟು ಮಾನಸಿಕತೆ ಕಾಂಗ್ರೆಸ್ ನಾಯಕರಿಗೆ ಬಂದಿರುವುದು ದುರಂತ. ಐವನ್ ಡಿಸೋಜ ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೇಳಲಿ."
-ಕೋಟ ಶ್ರೀನಿವಾಸ ಪೂಜಾರಿ
0 Comments