ಮೂಡಬಿದ್ರಿ ನಮನ ಸೌಹರ್ಧ ಸಹಕಾರಿ ಸಂಘ ಇದರ ಪ್ರಥಮ ಸಾಮಾನ್ಯ ಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡಬಿದ್ರಿ ನಮನ ಸೌಹರ್ಧ ಸಹಕಾರಿ ಸಂಘ ಇದರ ಪ್ರಥಮ  ಸಾಮಾನ್ಯ ಸಭೆ 

ಮೂಡಬಿದ್ರಿ ನಮನ ಸೌಹರ್ಧ ಸಹಕಾರಿ ಸಂಘ ಇದರ ಪ್ರಥಮ  ಸಾಮಾನ್ಯ ಸಭೆ ದಿನಾಂಕ 25 ರ ಆದಿತ್ಯವಾರ ಸಮಾಜಮಂದಿರ  ಸಭಾದಲ್ಲಿ ಬೊಕ್ಕಸ ಚಂದ್ರ ಶೇಖರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ 250 ಕ್ಕೂ ಮಿಕ್ಕ ಸಹಕಾರಿ ಸದಸ್ಯರ ಸಮಕ್ಷ ಸಭೆ ಸಂಪನ್ನ ಗೊಂಡಿತು. 


ನಿರ್ದೇಶಕರಾದ ಏರ್ಪಲೆ ಸುಬ್ರಹ್ಮಣ್ಯ ಭಟ್ ಅವರ ದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಸಂಸ್ಥೆಯ ಮುಖ್ಯ ಪ್ರವರ್ತಕ, ಉಪಾಧ್ಯಕ್ಷರೂ ಆದ ಎಂ ದೇವಾನಂದ ಭಟ್ ಬೆಳ್ವಾಯಿ ಪ್ರಸ್ತಾವಿಕವಾಗಿ ಸಹಕಾರಿ ತತ್ವ, ಸ್ಥಾಪನೆ, ಉದ್ದೇಶ ಇತ್ಯಾದಿ ವಿಚಾರಗಳೊಂದಿಗೆ ಸಹಕಾರಿ ಸದಸ್ಯರನ್ನು ಸ್ವಾಗತಿಸಿದರು.

ಅಧ್ಯಕ್ಷ ಸ್ಥಾನದಿಂದ ಮಾತಾಡಿದ ಬೊಕ್ಕಸ ಚಂದ್ರ ಶೇಖರ್ ರಾವ್ ಅವರು ಒಂದು ವರುಷದಲ್ಲಿ 7 ಕೋಟಿ ವ್ಯವಹಾರ ನಡೆಸಿ "ಎ" ತರಗತಿಯ ಸಂಸ್ಥೆ ಎಂಬ ಹೆಸರು ಗಳಿಸಿದೆ. ಪೂರ್ಣ ಪ್ರಮಾಣದಲ್ಲಿ ಸಾಲ ಮರುಪಾವತಿಗೊಂಡಿದೆ. ಪ್ರಥಮ ವಾರ್ಷಿಕ 5ಲಕ್ಷ  ಲಾಭ ಹೊಂದಿದ್ದು ಹೆಚ್ಚು ಆದಾಯ ಬಾರದೆ ಇದ್ದರು ಮುಂದಿನ ಸಾಲಿನಲ್ಲಿ 15ಕೋಟಿಯ ವ್ಯವಹಾರ ನಡೆಸಿ ಸಹಕಾರಿ ಸದಸ್ಯರಿಗೆ ಉತ್ತಮ ಡಿವಿಡೆಂಟ್ ಬರುವಂತೆ ಪ್ರಯತ್ನಿಸಲಾಗುವದು ಎಂದರು.

ಸಂಘದ ಸಿಬ್ಬಂದಿ ಸುಕ್ಷಿತ್ ಜೈನ್ ಸಭೆಯ ನೋಟಿಸ್ ಓದಿ, ವಾರ್ಷಿಕ ವರದಿಯನ್ನು ಸಂಘದ  ಕಾರ್ಯನಿರ್ವಾಹಣ ಅಧಿಕಾರಿ ಶ್ರೀಮತಿ ಸೌಮ್ಯ ಶೆಟ್ಟಿ ವಾಚಿಸಿ ಸಭೆಯಲ್ಲಿ ಮಂಜೂರಾತಿ ಪಡೆದರು. ಕಳೆದ ಸಾಲಿನ ಲೆಕ್ಕ ಪತ್ರ ವರದಿಯನ್ನು ನಿರ್ದೇಶಕರಾದ ರಾಘವೇಂದ್ರ ಹೆಬ್ಬಾರ್ ಮಂಡಿಸಿದ್ದು 24-25ರ ಸಾಲಿನ ಬಜೆಟ್ ಮಂಡನೆ ಮಾಡಿದವರು ಶ್ರೀಮತಿ ವಿದ್ಯಾ ರಮೇಶ್ ಭಟ್.

ಮುಂದೆನಿರ್ದೇಶಕ ಕೇಶವ ರಾವ್ ಮುಂದಿನ ಸಾಲಿಗೆ ಸನದು ಲೆಕ್ಕ ಪರಿಶೋಧಕರ ನೇಮಕಾತಿ ವಿವರ ನೀಡಿ ಮಂಜರಾತಿ ಪಡೆದರು. ಇನ್ನೊರ್ವ ನಿರ್ದೇಶಕಾರದ ವಸಂತ ಭಟ್ ಪಯ್ಯಾಡಿ ಅವರು ಸಹಕಾರಿ ಠೇವಣಿ ಮತ್ತು ಸಾಲ ನಿಯಮಾವಳಿ ಹಾಗೂ ಸಹಕಾರಿ ಸಿಬ್ಬಂದಿ ನೇಮಕಾತಿ ನಿಯಮಾವಳಿ ಯನ್ನು ಓದಿ ಸಭೆಯಲ್ಲಿ ಮಂಜೂರಾತಿ ಪಡೆದರು. ಗೌರವ ಸಲಹೆಗಾರರಾದ ಕೆ ಶ್ರೀಪತಿ ಭಟ್ ಸಂಸ್ಥೆಗೆ ಶುಭಾಶಯಗಳನ್ನು  ಕೋರಿದರು.

ನಿರ್ದೇಶಕರು ಡಾ! ಸುಬ್ರಹ್ಮಣ್ಯ ಪದ್ಯಾಣ ಹಾಗೂ ಶ್ರೀಮತಿ ಅಲಕಾ ಬಿ. ನಿರೂಪಿಸಿದ ಕಾರ್ಯಕ್ರಮದಲ್ಲಿ ನಿರ್ದೇಶಕ ವಾಸುದೇವ ಭಟ್ ಮಾರ್ನಾಡ್ ಸಭೆಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ನೀಡಿ ರಾಷ್ಟ್ರ ಗೀತೆಯೊಂದಿಗೆ ಸಭೆ ಮುಕ್ತಾಯ ಗೊಂಡಿತು. 🙏🏻

Post a Comment

0 Comments