ಮೂಡುಬಿದಿರೆ ಪುರಸಭಾಧಿವೇಶನ *ತರಕಾರಿ ಮಾರ್ಕೆಟ್ ನಲ್ಲಿ ಫಾಸ್ಟ್ ಫುಡ್ ಸ್ಟಾಲ್ ಗಳದ್ದೇ ದರ್ಭಾರು: ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ ಸದಸ್ಯರು

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಪುರಸಭಾಧಿವೇಶನ

*ತರಕಾರಿ ಮಾರ್ಕೆಟ್ ನಲ್ಲಿ ಫಾಸ್ಟ್ ಫುಡ್ ಸ್ಟಾಲ್ ಗಳದ್ದೇ ದರ್ಭಾರು: ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ ಸದಸ್ಯರು

ಮೂಡುಬಿದಿರೆ: ತರಕಾರಿ ಮಾರ್ಕೆಟ್ ನಲ್ಲಿ ಫಾಸ್ಟ್ ಫುಡ್ ಸ್ಟಾಲ್ ಗಳ ದರ್ಬಾರು ನಡೆಯುತ್ತಿದ್ದು ಫುಟ್ ಫಾತ್ ನ ಮೇಲೆ ಸಿಲಿಂಡರ್ ಗಳನ್ನು ಇಡುತ್ತಿದ್ದು ನಡೆದಾಡಿಕೊಂಡು ಹೋಗುವವರ ಮೇಲೆ ದರ್ಪ ತೋರಿಸುತ್ತಿದ್ದಾರೆ .ರಾತ್ರಿ ವೇಳೆ ಕುಡುಕರು ಅಲ್ಲಿ ಮದ್ಯಗಳನ್ನು ಸೇವಿಸುತ್ತಿದ್ದು ಇದರಿಂದಾಗಿ ಸಾರ್ವಜನಿಕರಿಗೆ ಮುಜಗರವಾಗುತ್ತಿದೆ ಅಲ್ಲದೆ ಹಲವಾರು ನಾಯಿಗಳು ಅಲ್ಲಿಯೇ ಸುತ್ತುವರೆದಿದ್ದು ಜನರು ನಡೆದಾಡಿಕೊಂಡು ಹೋಗಲು ಕಷ್ಟಸಾಧ್ಯವಾಗುತ್ತಿದೆ   ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸದಸ್ಯೆ ದಿವ್ಯ ಜಗದೀಶ್ ಸಹಿತ ಸದಸ್ಯರು ಪುರಸಭಾಧಿವೇಶನದಲ್ಲಿ ಆಗ್ರಹಿಸಿದ್ದಾರೆ. 

   ಹನ್ನೆರಡು ತಿಂಗಳ ನಂತರ ನೂತನ ಅಧ್ಯಕ್ಷೆ ಜಯಶ್ರೀ ಕೇಶವ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪುರಸಭಾಧಿವೇಶದಲ್ಲಿ  ಈ ಬಗ್ಗೆ ಚರ್ಚೆಗಳು ನಡೆದವು. ಫಾಸ್ಟ್ ಫುಡ್ ಆಹಾರ ಪದಾರ್ಥಗಳಿಗೆ ಕಲರ್ ಫೌಡರ್, ಫೇಸ್ಟ್ ಗಳನ್ನು ಬಳಸಲಾಗುತ್ತಿದ್ದು ಇದರಿಂದ ಕ್ಯಾನ್ಸರ್ ನಂತಹ ಹಾನಿಕಾರಕ ರೋಗಗಳು ಬರುತ್ತದೆ ಆದರೆ ಶಾಲಾ ಮಕ್ಕಳು ಇದನ್ನೇ ಇಷ್ಟ ಪಡುತ್ತಿದ್ದಾರೆ ಈ ಬಗ್ಗೆ  ಆಹಾರ  ಇಲಾಖಾಧಿಕಾರಿಗಳು ತನಿಖೆ ನಡೆಸಬೇಕೆಂದು ಸದಸ್ಯ ಕೊರಗಪ್ಪ ಅವರು ತಿಳಿಸಿ ಫಾಸ್ಟ್ ಫುಡ್ ಸ್ಟಾಟ್ ಗಳನ್ನು ಅಲ್ಲಿಂದ ತೆರವುಗೊಳಿಸಿ ಎಂದು ತಿಳಿಸಿದರು.  


ಇದಕ್ಕುತ್ತರಿಸಿದ ಮುಖ್ಯಾಧಿಕಾರಿ ಇಂದು ಅವರು ಈ ಬಗ್ಗೆ ತನಿಖೆ ನಡೆಸಿ ಸ್ಟಾಲ್ ಗಳನ್ನು‌ ರಿಂಗ್ ರೋಡ್ ಬಳಿ ಸ್ಥಳಾಂತರಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.

   ಗಾಂಧಿನಗರದ ರಾಯಲ್ ಪ್ಯಾರಡೈಸ್ ಕಟ್ಟಡದಲ್ಲಿ ಸುಮಾರು 30 ಕ್ಕೂ ಅಧಿಕ ಮನೆಗಳಿದ್ದು, ಕೊಳಚೆ ನೀರನ್ನು ಸಾರ್ವಜನಿಕ ಪ್ರದೇಶಕ್ಕೆ ಬಿಡುತ್ತಿರುವುದರಿಂದ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ ಎಂದು ಸದಸ್ಯ ಕೊರಗಪ್ಪ ದೂರಿದರು. ಈ ಬಗ್ಗೆ  ಈಗಾಗಲೇ ನೀಡಲಾದ ದೂರಿಗೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ, ಈ ಕಟ್ಟಡದ ಸುತ್ತ ಪರಿಶಿಷ್ಟ ಸಮುದಾಯ ಸೇರಿದಂತೆ ಬಡ ಕುಟುಂಬಗಳ ಮನೆಗಳಿದ್ದು, ಅವರ ಮನೆಯ ಬಾವಿಗಳ ನೀರು ಕಲುಷಿತಗೊಂಡಿರುವುದಾಗಿ ಹೇಳಿದರು. ತನ್ನ ಮನೆಯ ನೀರನ್ನು ಪರೀಕ್ಷಿಸಿದಾಗ ಅಲ್ಲೂ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ರಾಯಲ್ ಕಟ್ಟಡದ ನೀರನ್ನು ಹಾಳು ಕೊಳವೆ ಬಾವಿಗೆ ಬಿಡಲಾಗಿತ್ತು. ಅದು ತುಂಬಿದ ನಂತರ ತೆರೆದ ಬಾವಿಗೆ ಬಿಡಲಾಗಿತ್ತು. ಅದೂ ತುಂಬಿ ಹೊರ ಬಿಡಲಾಗುತ್ತಿದೆ ಎಂದು ಕೊರಗಪ್ಪ ದೂರಿದರು. ಈ ಬಗ್ಗೆ  ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ನವರು ತನಿಖೆ ನಡೆಸುವ ಬಗ್ಗೆ ಮುಖ್ಯಧಿಕಾರಿ ಇಂದು ಎಂ. ತಿಳಿಸಿದರು. 


ಪೂರಕವಾಗಿ ಮಾತನಾಡಿದ ಪುರಸಭಾ ಸದಸ್ಯ ರಾಜೇಶ್ ಕೋರ್ಟ್ ರಸ್ತೆಯ ಎರಡು ವಸತಿ ಸಮುಚ್ಛಯ ಸಹಿತ ವಾಣಿಜ್ಯ ಸಂಕೀರ್ಣದಲ್ಲಿ ಕೂಡ ಇಂತದ್ದೇ ಸಮಸ್ಯೆ ತಲೆದೋರಿದ್ದು ಈಗಾಗಲೇ ಹಲವಾರು ಬಾರಿ ದೂರು ಸಲ್ಲಿಸಿರುವುದಾಗಿ ತಿಳಿಸಿದರು. 

ಮತ್ತೋರ್ವ ಪುರಸಭಾ ಸದಸ್ಯೆ ದಿವ್ಯಾ ಜಗದೀಶ್ ತನ್ನ ವಾರ್ಡಿನ ಸಾಯಿಮಂಜಯ್ ಹೊಟೇಲ್ ಪಂಚಮಿ ಯವರಿಂದಲೂ ಕೊಳಚೆ ನೀರನ್ನು ಸಾರ್ವಜನಿಕ ಪ್ರದೇಶಗಳಿಗೆ ಬಿಡುತ್ತಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. 

ಕೊಳಚೆ ನೀರುಗಳನ್ನು  ಆರೋಗ್ಯಾಧಿಕಾರಿಯವರನ್ನು ಸಭೆಗೆ ಕರೆಯಿಸುವಂತೆ ಸದಸ್ಯರು ಕೋರಿದಾಗ ಅವರು ಅನಾರೋಗ್ಯದಲ್ಲಿರುವುದನ್ನು ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದರು.


ಮುಂದಿನ ಸಭೆಗೆ ಮೆಸ್ಕಾಂ, ಪೊಲೀಸ್ ಹಾಗೂ ಅರಣ್ಯ ಇಲಾಖಾಧಿಕಾಗಳು ಕಡ್ಡಾಯವಾಗಿ ಬೇಕು : ಮೆಸ್ಕಾಂ ಪವರ್ ಮ್ಯಾನ್‌ಗಳು ರಸ್ತೆ ಬದಿಯ ಮರದ ಗೆಲ್ಲುಗಳನ್ನು ಕಡಿದು ರಸ್ತೆಯಲ್ಲೇ ಚೆಲ್ಲಾಡಿರುವುದನ್ನು ಸದಸ್ಯರು ಆಕ್ಷೇಪಿಸಿದರು. ಈ ಬಗ್ಗೆ ಸೆಕ್ಷನ್ ಅಧಿಕಾರಿಯವರಲ್ಲಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದರು. 

ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಪವರ್‌ಮ್ಯಾನ್‌ಗಳ ಸಭೆ ಕರೆದು ಮಾನವೀಯ ಕ್ರಮಕೈಗೊಳ್ಳಲು ಸೆಕ್ಷನ್ ಅಧಿಕಾರಿಯವರಿಗೆ ಸೂಚಿಸಿದರು.  ಮುಂದಿನ ಸಭೆಗಳಲ್ಲಿ ಪೊಲೀಸ್, ಮೆಸ್ಕಾಂ ಹಾಗೂ ಅರಣ್ಯ ಇಲಾಖೆಯ  ಮುಖ್ಯ ಅಧಿಕಾರಿಗಳು  ಮಾಸಿಕ ಸಭೆಗೆ ಕಡ್ಡಾಯವಾಗಿ ಹಾಜರಾಗಲು ನೋಟೀಸು ನೀಡುವಂತೆ ಮುಖ್ಯಾಧಿಕಾರಿಯವರಿಗೆ ತಿಳಿಸಿದರು ಇದಕ್ಕೆ ಸದಸ್ಯರೂ ಸಹಮತ ಸೂಚಿಸಿದರು.

ಬಸ್‌ಸ್ಟ್ಯಾಂಡ್  ಪಾರ್ಕಿಂಗ್ ಸಮಸ್ಯೆ, ಬಸ್ ನಿಲ್ದಾಣ ಪ್ರವೇಶದ ಬದಿಯಲ್ಲಿ ಫ್ಲೆಕ್ಸ್ ಅಳವಡಿಕೆ ಸಮಸ್ಯೆಗಳ ಬಗ್ಗೆ ಶ್ವೇತಾ ಪ್ರವೀಣ್ ಸಭೆಯ ಗಮನ ಸೆಳೆದರು.

ಕೃಷ್ಣಕಟ್ಟೆಯಿಂದ ನಾಗರಕಟ್ಟೆ ರಸ್ತೆಯಲ್ಲಿ ಪಾರ್ಕಿಂಗ್ ನಡೆಸುತ್ತಿರುವುದರಿಂದ ಪಾದಚಾರಿಗಳಿಗೆ ಆಗುತ್ತಿರುವ ಅಪಾಯವನ್ನು ಸದಸ್ಯೆ ಶಕುಂತಲಾ ಗಮನ ಸೆಳೆದರು. ನಗರೋತ್ಥಾನ ಯೋಜನೆಯಡಿ ಆದೇಶ ಪತ್ರ ನೀಡಿ ಅನುದಾನ ಒದಗಿಸದೇ ಆಯ್ದ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ತೊಂದರೆಯಾಗುತ್ತಿರುವ ಬಗ್ಗೆ ದಿವ್ಯಾ ಜಗದೀಶ್ ಮುಖ್ಯಾಧಿಕಾರಿಯವರಿಗೆ ತಿಳಿಸಿದರು. ಎಂಟುವರೆ ಕೋಟಿ ರೂ. ಅನುದಾನ ಈ ಯೋಜನೆಯಲ್ಲಿ ಮಂಜೂರುಗೊಂಡಿದ್ದು ಬಿಡುಗಡೆಯಾಗಿಲ್ಲ. ಕ್ರಿಯಾಯೋಜನೆ ರೂಪಿಸಿ ಹಿರಿಯ ಅಧಿಕಾರಿಗಳ ಆದೇಶದಂತೆ ಆದೇಶ ಪತ್ರ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಣ ಮಂಜೂರಾಗುವ ಭರವಸೆ ವ್ಯಕ್ತಪಡಿಸಿದರು. 

ಸದಸ್ಯರಾದ ಸುರೇಶ್ ಪ್ರಭು, ಪುರಂದರ ದೇವಾಡಿಗ, ಪ್ರಸಾದ್ ಕುಮಾರ್ ಭಾಗವಹಿಸಿದ್ದರು. ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ ಸದಸ್ಯರ ಪ್ರಶ್ನೆಗೆ ಪೂರಕವಾಗಿ ಸ್ಪಂದಿಸುವ ಭರವಸೆಯಿತ್ತರು.

Post a Comment

0 Comments