ತಾ.ಮಟ್ಟದ ವಾಲಿಬಾಲ್ ಪಂದ್ಯಾಟ : ಬೆಳುವಾಯಿ ಸರಕಾರಿ ಮೈನ್ ಪ್ರಥಮ
ಮೂಡುಬಿದಿರೆ: ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕಿಯರ ವಿಭಾಗದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬೆಳುವಾಯಿ ಸ.ಮೈನ್ ಶಾಲೆಯ ಎರಡೂ ವಿಭಾಗದ ತಂಡಗಳು ಪ್ರಥಮ ಸ್ಥಾನಗಳನ್ನು ಪಡೆದುಕೊಂಡಿದೆ.
ದ.ಕ.ಜಿ.ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ವಲಯ ಹಾಗೂ ದ.ಕ.ಜಿ.ಪಂ.ಸ.ಉ.ಮಾ.ಹಿ.ಪ್ರಾ.ಶಾಲೆ ಬೆಳುವಾಯಿ ಮೈನ್ ಇವುಗಳ ಸಹಯೋಗದಲ್ಲಿ ಮೈನ್ ಶಾಲಾ ಆವರಣದಲ್ಲಿ ಪಂದ್ಯಾಟವು ನಡೆದಿದ್ದು ಪ್ರಥಮ ಸ್ಥಾನ ಪಡೆದಿರುವ ತಂಡಗಳು ಜಿಲ್ಲಾ ಮಟ್ಟದಲ್ಲಿ ನಡೆಯುವ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿವೆ.
ರಘು ಪೆಲಕುಂಜ ಇವರು ಈ ತಂಡಕ್ಕೆ ತರಬೇತುದಾರರಾಗಿದ್ದಾರೆ.
0 Comments