ಸೆಪ್ಟೆಂಬರ್ 20 ಚಿಕ್ಕಮಗಳೂರು ಜಿಲ್ಲಾಮಟ್ಟದ ಕಾರ್ಯಗಾರ:ಸಂಸದ ಕೋಟ

ಜಾಹೀರಾತು/Advertisment
ಜಾಹೀರಾತು/Advertisment

 ಸೆಪ್ಟೆಂಬರ್ 20 ಚಿಕ್ಕಮಗಳೂರು ಜಿಲ್ಲಾಮಟ್ಟದ ಕಾರ್ಯಗಾರ:ಸಂಸದ ಕೋಟ

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಶ್ವಕರ್ಮ ಯೋಜನೆಯೂ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಿಗಬಹುದಾದ ಸಾಲ ಸೌಲಭ್ಯಗಳ ಬಗ್ಗೆ ಸೆಪ್ಟೆಂಬರ್ 20ರಂದು ಜಿಲ್ಲಾಮಟ್ಟದ ಕಾರ್ಯಾಗಾರ ಏರ್ಪಡಿಸಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಕರೆದ ಅಧಿಕಾರಿಗಳ ಸಭೆಯಲ್ಲಿ ಸಂಸದರು ಈ ಬಗ್ಗೆ ಚರ್ಚಿಸಿ ಮಾತನಾಡಿದರು.


ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 43694 ವಿಶ್ವಕರ್ಮ ಯೋಜನೆಗೆ ಅರ್ಜಿಗಳು ಬಂದಿದ್ದು ಇದರಲ್ಲಿ ಪ್ರಥಮ ಹಂತದಲ್ಲಿ 5894 ಅರ್ಜಿಗಳನ್ನು ಅನುಮೋದನೆಗೊಂಡಿದೆ. ಸುಮಾರು 2186 ಫಲಾನುಭವಿಗಳಿಗೆ ತರಬೇತಿಯನ್ನು ಪೂರ್ಣಗೊಳಿಸಲಾಗಿದೆ. ಸೆಪ್ಟೆಂಬರ್ 20ರ ವಿಶ್ವಕರ್ಮ ಕಾರ್ಯಾಗಾರದಲ್ಲಿ ಬಹುತೇಕರಿಗೆ ಸಾಲ ಮಂಜೂರಾತಿ ಆದೇಶ ನೀಡಲಾಗುವುದು. ತರಬೇತಿ ಪಡೆದ ವ್ಯಕ್ತಿಗಳು 15000 ಮೌಲ್ಯದ ವೃತ್ತಿಗೆ ಸಂಬಂಧಿಸಿದ ಸಲಕರಣೆಗಳನ್ನು ಕೇಂದ್ರ ಸರ್ಕಾರದ ಮೂಲಕ ಉಚಿತವಾಗಿ ಪಡೆಯಲಿದ್ದಾರೆ. ಅಲ್ಲದೆ ಫಲಾನುಭವಿಗಳಿಗೆ ನೀಡುವ ತರಬೇತಿಯ ಅವಧಿಯಲ್ಲಿ ಅವರ ಖರ್ಚು ವೆಚ್ಚಗಳನ್ನು ಸರಿದೂಗಿಸಿ ದಿನಕ್ಕೆ 500 ಬತ್ತೆ ನೀಡುವ ಅವಕಾಶ ವಿಶ್ವಕರ್ಮ ಯೋಜನೆಯಲ್ಲಿದೆ ಎಂದು ಸಂಸದರು ಹೇಳಿದರು.


ಚಿಕ್ಕಮಗಳೂರು ಜಿಲ್ಲೆಯಲ್ಲಿ 11 ತರಬೇತಿ ಸೆಂಟರ್ಗಳಿಗೆ ಅನುಮೋದನೆ ಸಿಕ್ಕಿದ್ದು ಈಗಾಗಲೇ ಎರಡು ಕಾರ್ಯನಿರ್ವಹಿಸುತ್ತಿದ್ದು ಉಳಿದವುಗಳನ್ನು ಒಂದೆರಡು ವಾರದಲ್ಲಿ ಸಜ್ಜುಗೊಳಿಸಿ ಫಲಾನುಭವಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.


ವಿಶ್ವಕರ್ಮ ಯೋಜನೆಯಲ್ಲಿ 18 ಕುಲ ಕಸುಬುಗಳನ್ನು ಒಳಗೊಂಡ ವೃತ್ತಿ ತರಬೇತಿ ನೀಡಿ ಪ್ರಥಮ ಹಂತದಲ್ಲಿ ಒಂದು ಲಕ್ಷದವರೆಗೆ ಸಾಲ ಒದಗಿಸುವ ಎರಡನೇ ಹಂತದಲ್ಲಿ ಎರಡು ಲಕ್ಷ ರೂಪಾಯಿ ಕೊಡುವ ಒಂದು ಅತ್ಯುತ್ತಮ ಉದ್ಯೋಗ ಅವಕಾಶದ ಯೋಜನೆ ಇದಾಗಿದ್ದು ಇದರ ಸದುಪಯೋಗವನ್ನು ಪಡೆಯಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳ ಸಭೆಯಲ್ಲಿ ಸಾರ್ವತ್ರಿಕವಾಗಿ ಮನವಿ ಮಾಡಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ ಟಿ ರವಿ, ಲೀಡ್ ಬ್ಯಾಂಕ್ ಮ್ಯಾನೇಜರ್, ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕೈಗಾರಿಕಾ ಇಲಾಖೆಯ ಅಧಿಕಾರಿಗಳು, ವಿವಿಧ ಬ್ಯಾಂಕಿನ ಅಧಿಕಾರಿಗಳು, ವಿಶ್ವಕರ್ಮ ಯೋಜನೆಯ ಸಲಹಾ ಸಮಿತಿಯ ಸದಸ್ಯರಾದ ರವೀಂದ್ರ ಬೆಳವಾಡಿ ಮತ್ತು ಸಂತೋಷ್ ಕೋಟ್ಯಾನ್ ಉಪಸ್ಥಿತರಿದ್ದರು.

Post a Comment

0 Comments