ರಣಭೀಕರ ಮಳೆಗೆ ಪಣಪಿಲದ ಒಂದು ಸೇತುವೆ ನೀರು ಪಾಲು, ಮತ್ತೊಂದು ಸೇತುವೆಗೂ ಅಪಾಯ
ಕಳೆದ ಹಲವಾರು ದಿನಗಳಿಂದ ಧಾರಾಕಾರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಅನೇಕ ಹಾನಿಗಳು ಸಂಭವಿಸಿದ್ದು ಈಗ ಮೂಡುಬಿದ್ರೆಯ ಪಣಪಿಲ ಗ್ರಾಮದಲ್ಲಿರುವ ಪ್ರಮುಖ ರಸ್ತೆಯ ಸೇತುವೆ ನಿರುಪಾಲಾಗಿರುವ ಘಟನೆ ನಡೆದಿದೆ.
ಪಣಪಿಲ ಗ್ರಾಮದ ಆಯರೆಗುಡ್ಡೆ ಮತ್ತು ಬೋರುಗುಡ್ಡೆಯನ್ನು ಸಂಪರ್ಕಿಸುವ ಬಿರ್ಮೆರಬೈಲು ಸೇತುವೆ ಸಂಪೂರ್ಣವಾಗಿ ಕೊಚ್ಚಿಹೋಗಿ ನಿರುಪಾಲಾಗಿದೆ.
ಮತ್ತು ಪಣಪಿಲ ಶಾಲೆಗೆ ಹೋಗುವ ಪ್ರಮುಖ ರಸ್ತೆಯ ಕಲ್ಲೇರಿ ಸೇತುವೆಯ ಭಾಗದಲ್ಲಿ ರಸ್ತೆಯ ಮೇಲೆ ನೀರು ಚಿಮ್ಮಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮತ್ತು ಈ ರಸ್ತೆ ಹಾಗೂ ಸೇತುವೆಯು ಅಪಾಯದ ಅಂಚಿನಲ್ಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
0 Comments