ವಂದೇ ಭಾರತ್ ಮುಂಬೈಗೆ ವಿಸ್ತರಿಸಿ,ಕೊಂಕಣ್ ರೈಲನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿ-ವಿವಿಧ ಬೇಡಿಕೆಯ ರೈಲ್ವೆ ಸಚಿವರ ಮುಂದಿಟ್ಟ ಕರಾವಳಿ ಸಂಸದರು

ಜಾಹೀರಾತು/Advertisment
ಜಾಹೀರಾತು/Advertisment

 ವಂದೇ ಭಾರತ್ ಮುಂಬೈಗೆ ವಿಸ್ತರಿಸಿ,ಕೊಂಕಣ್ ರೈಲನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿ-ವಿವಿಧ ಬೇಡಿಕೆಯ ರೈಲ್ವೆ ಸಚಿವರ ಮುಂದಿಟ್ಟ ಕರಾವಳಿ ಸಂಸದರು

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಹಾಗೂ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇಂದು ದೆಹಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ಶ್ರೀ ವಿ.ಸೋಮಣ್ಣ ರವರನ್ನು ಭೇಟಿಯಾಗಿ ಕರಾವಳಿಯ ರೈಲ್ವೆ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದರು.


*ಈಗಾಗಲೇ ಇರುವ ಮಂಗಳೂರು - ಮಡಗಾಂವ್(ಗೋವಾ) ಸೂಪರ್ ಫಾಸ್ಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮುಂಬೈಯವರೆಗೆ ವಿಸ್ತರಿಸಬೇಕು. ಮತ್ತು ಈ ರೈಲಿನಲ್ಲಿ ಸ್ಲೀಪರ್ ಕೋಚ್ ವ್ಯವಸ್ಥೆಯನ್ನು ಅಳವಡಿಸಬೇಕು. ಇದು ಕರಾವಳಿ ಭಾಗದಿಂದ ಮುಂಬೈಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಮತ್ತು ವಂದೇ ಭಾರತ್ ರೈಲಿಗೂ ಬೇಡಿಕೆ ಹೆಚ್ಚಾಗಲಿದೆ.


*ಈಗಾಗಲೇ ಕಾರ್ಯಾಚರಿಸುತ್ತಿರುವ ಕೊಂಕಣ್ ರೈಲ್ವೆ ವಿಭಾಗವನ್ನು ಭಾರತೀಯ ರೈಲ್ವೆ ಇಲಾಖೆಯೊಂದಿಗೆ ವಿಲೀನಗೊಳಿಸಬೇಕು. ಇದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಕೊಂಕಣ ರೈಲ್ವೆ ಸುಧಾರಿಸಿಕೊಂಡು ಭಾರತೀಯ ರೈಲ್ವೆ ಮೂಲಕ ಎಲ್ಲಾ ನಿಲ್ದಾಣಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಹೊಸ ಹಳಿಗಳ ನಿರ್ಮಾಣಕ್ಕೆ ಹಾಗೂ ಹೊಸ ರೈಲುಗಳ ಜೋಡಣೆಗೆ ಅನುಕೂಲ ಆಗುತ್ತದೆ.

 

*ಎರ್ನಾಕುಲಂ-ನಿಜಾಮುದ್ದೀನ್ ಹಾಗೂ ತ್ರಿವೇಂಡ್ರಂ-ನಿಜಾಮುದ್ದೀನ್ ವರೆಗೆ ಸಂಚರಿಸುತ್ತಿರುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಉಡುಪಿ ಜಿಲ್ಲೆಯ ಕುಂದಾಪುರದ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾದಲ್ಲಿ ಈ ರೈಲಿಗಾಗಿ ಉಡುಪಿ ಅಥವಾ ಕಾರವಾರಕ್ಕೆ ತೆರಳುವ ಹೊರೆ ತಪ್ಪಲಿದೆ. ಪ್ರಸಿದ್ಧ ಶಕ್ತಿಪೀಠ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಮತ್ತು ಈ ನಡುವೆ ಇರುವ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಲಾಭವಾಗಲಿದೆ.


ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಮನವಿಗೆ ಸ್ಪಂದಿಸಿದ ಸನ್ಮಾನ್ಯ ಸಚಿವರು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Post a Comment

0 Comments