ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯದರ್ಶಿಯಾಗಿ ರಶ್ಮಿತ್ ಶೆಟ್ಟಿ ಕೈತ್ರೋಡಿ ಆಯ್ಕೆ
ಮೂಡುಬಿದಿರೆ: ಬಿಜೆಪಿ ಬಂಟ್ವಾಳ ಮಂಡಲದ ನೂತನ ಕಾರ್ಯದರ್ಶಿಯಾಗಿ ರಶ್ಮಿತ್ ಶೆಟ್ಟಿ ಕೈತ್ರೋಡಿ ಆಯ್ಕೆಗೊಂಡಿದ್ದಾರೆ.
ಬಿಜೆಪಿ ಬೂತ್ ಸಮಿತಿಯ ಸಕ್ರೀಯ ಸದಸ್ಯರಾಗಿ ಅನುಭವವನ್ನು ಹೊಂದಿರುವ ರಶ್ಮಿತ್ ಅವರು ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಶಕ್ತಿ ಕೇಂದ್ರದಲ್ಲಿ ಪ್ರಮುಖರಾಗಿದ್ದುಕೊಂಡು ರಾಯಿ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾಗಿ, ಹಾಲಿ ಸದಸ್ಯರಾಗಿದ್ದಾರೆ.
ದ.ಕ.ಜಿಲ್ಲಾ ಕಂಬಳ ಸಮಿತಿಯ ಲ್ಲಿ ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ, ಹೊಕ್ಕಾಡಿಗೋಳಿ ಕಂಬಳ ಸಮಿತಿಯಲ್ಲಿ ಸತತ 8 ನೇ ಬಾರಿಗೆ ಅಧ್ಯಕ್ಷರಾಗಿ, ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷರಾಗಿ, ರಾಯಿ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾಗಿ, ಸಿದ್ಧಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರರಾಗಿ, ಕೊಯಿಲ ಶಾರದೋತ್ಸವ ಸಮಿತಿಯ ಸಂಘಟಕರಾಗಿ ಅಲ್ಲದೆ ವಿವಿಧ ಸಂಘ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರನ್ನು ಬಿಜೆಪಿ ಬಂಟ್ವಾಳ ಮಂಡಲವು ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದೆ.
0 Comments