ಪಣಪಿಲದಲ್ಲಿ ಮತ್ಸ್ಯ ಮಿಲನ-ಕ್ಷೇತ್ರೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಪಣಪಿಲದಲ್ಲಿ ಮತ್ಸ್ಯ ಮಿಲನ-ಕ್ಷೇತ್ರೋತ್ಸವ


ಮೂಡುಬಿದಿರೆ: ಮೀನು ಪೋಷಕಾಂಶಯುಕ್ತ ಆರೋಗ್ಯದಾಯಕ ಆಹಾರ. ಕೊಬ್ಬಿನಾಂಶವನ್ನು ಕರಗಿಸುವ ಶಕ್ತಿ ಇದಕ್ಕಿದ್ದು ಹೃದಯಾಘಾತವನ್ನು ತಡೆಗಟ್ಟಲು ಸಹಕಾರಿಯಾಗಿದೆ. ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ಮೀನು ಸಾಕಾಣೆ ಮಾಡುವುದರೊಂದಿಗೆ ಉಪವೃತ್ತಿಯಾಗಿ ಆದಾಯ ಗಳಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ರಮೇಶ್ ಹೇಳಿದರು. 

ಅವರು ಪಶುವೈದ್ಯಕಿಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಿಗಳ ವಿವಿ, ಐಸಿಎಆರ್, ಕೃಷಿ ವಿಜ್ಞಾನ ಕೇಂದ್ರಗಳ ಸಹಭಾಗಿತ್ವದಲ್ಲಿಪಣಪಿಲದಲ್ಲಿರುವ ಶ್ರೀ ರಾಜ್ ಮತ್ಸ್ಯ ಫಾರ್ಮ್ನಲ್ಲಿ  ನಡೆದ ಕ್ಷೇತ್ರೋತ್ಸವ ಮತ್ತು ಮತ್ಸ್ಯ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಮೀನುಗಾರಿಕೆ ಇಲಾಖೆ ವಿಜ್ಞಾನಿ ಡಾ.ರವೀಂದ್ರನಾಥ ಪಾಟೀಲ್, ಫುಡ್ ಚೈನ್‌ನ ಸ್ಥಾಪಕ ಡಾ. ಸಾರೀಶ್ ಭಾಗವಹಿಸಿ ಮಾಹಿತಿ ನೀಡಿದರು.

ದರೆಗುಡ್ಡೆ ಗ್ರಾಪಂ ಮಾಜಿ ಅಧ್ಯಕ್ಷೆ ತುಳಸಿ, ಸದಸ್ಯ ದೀಕ್ಷಿತ್ ಪಣಪಿಲ, ಮಾಜಿ ಸದಸ್ಯ ದೇವರಾಜ ಕೋಟ್ಯಾನ್, ಹಿರಿಯ ಕೃಷಿಕ ಹರಿಯಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.

ರಾಜೇಶ್ ಕೋಟ್ಯಾನ್ ಸ್ವಾಗತಿಸಿ ದರು. ರಾಜೇಶ್ ಕೋಟ್ಯಾನ್ ವಂದಿಸಿದರು.

 ಮೀನಿನ ಹೊಂಡಗಳ ವೀಕ್ಷಣೆ, ಹಿಡಿಯುವ ಪ್ರಾತ್ಯಕ್ಷಿಕೆಗಳು ನಡೆಯಿತು. 

ಕರಾವಳಿ ಪ್ರದೇಶದಲ್ಲಿ ಮಾಡಂಜಿ ಮೀನಿನ ಸಾಗಣಿಕೆಯನ್ನು ಪ್ರಾಯೋಗಿಕವಾಗಿ ಮಾಡಲಾಗಿದ್ದು, ಅದು ರಾಜೇಶ್ ಅವರ ಮೀನಿನ ಕೃಷಿಯಲ್ಲಿ ಯಶಸ್ವಿಯಾಗಿದೆ. ಮಾಡಂಜಿ ಮೀನಿನಲ್ಲಿ ಹೆಚ್ಚು ಪೋಷಕಾಂಶವಿದ್ದು, ಔಷಧೀಯ ಗುಣವನ್ನೂ ಹೊಂದಿದೆ ಎಂದು ವಿಜ್ಞಾನಿ ಡಾ. ರಮೇಶ್ ಹೇಳಿದರು.

Post a Comment

0 Comments