ಮೂಡುಬಿದಿರೆಯಲ್ಲಿ ಸ್ವಉದ್ಯೋಗ ಅಭಿವೃದ್ಧಿ ತರಬೇತಿ
ಮೂಡುಬಿದಿರೆ: ಬ್ರಾಂಚ್ ಎಂಎಸ್‌ಎಂಇ ಡಿ.ಎಫ್.ಒ, ಮಿನಿಸ್ಟ್ರಿ ಆಫ್ ಮೈಕ್ರೋಸ್ಮಾಲ್ ಮೀಡಿಯಂ ಎಂಟರ್‌ಪ್ರೆಸಸ್ ಗವರ್ನಮೆಂಟ್ ಆಫ್ ಇಂಡಿಯ ಇಂಡಸ್ಟ್ರಿಯಲ್ ಎಸ್ಟೇಟ್ ಯೆಯ್ಯಾಡಿ ವತಿಯಿಂದ ಮಹಿಳಾ ಉದ್ಯಮಿ ಗಳಿಗೆ ಐದು ದಿನಗಳ ಮ್ಯಾನೇಜ್ ಮೆಂಟ್ ಡೆವಲಪ್‌ಮೆಂಟ್ ಪ್ರೋಗ್ರಾಂ ಮೂಡುಬಿದಿರೆ ವೀಚೀಸ್ ಫ್ಯಾಶನ್ ಡಿಸೈನಿಂಗ್ ಹಾಗೂ ಕೌಶಲ್ಯಾಧಾರಿತ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಯಿತು.
ಮಂಗಳೂರು ವಿನಾಯಕ ಗಾರ್ಮೆಂಟ್ ಹಾಗೂ ನಂದಿನಿ. ಸಿಲ್ಕ್
ಮಾಲಕಿ ಕುಸುಮಾ ಎಚ್.ದೇವಾಡಿಗ ಉದ್ಘಾಟಿಸಿದರು. ಕಾರ್ಯಕ್ರಮ ಸಂಯೋಜಕ ಎಂಎಸ್‌ಎಂಇ ಡೆವಲಪ್ ಮೆಂಟ್ ಇನ್‌ಸ್ಟಿಟ್ಯೂಟ್ ಉಪನಿರ್ದೇಶಕಿ ಶ್ರುತಿ ಜಿ.ಕೆ ಹಾಗೂ ತರಬೇತಿ ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮಿ ಸ್ವ ಉದ್ಯೋಗಗಳ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಿದರು.
ಕುಸುಮಾ ಎಚ್.ದೇವಾಡಿಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು.
ಫಿಟ್ ಫೋನ್ ಫಿಟೈಸ್ ಸೆಂಟರ್ ಮಾ ಅಶ್ವಿನಿ ಶೆಟ್ಟಿ ಮೂಡುಬಿದಿರೆ, ಮೂಡಬಿದಿರೆ ಬಿಲ್ಲವ ಸಂಘ ಮಹಿಳಾ ಘಟಕ ಅಧ್ಯಕ್ಷೆ ಸಾವಿತ್ರಿ ಕೇಶವ್ ಹಾಗೂ ರೇಣುಕಾ ಶೇಖರ್ ಬಜಪೆ ಉಪಸ್ಥಿತರಿದ್ದರು.
ಶ್ರೀನಿ ಸಂಜಿತ್ ಜೈನ್ ಕಳಸಕಾರ್ಯಕ್ರಮ ನಿರೂಪಿಸಿದರು. ನಿಶ್ಚಿಂತ ಜೈನ್ ಮರೋಡಿ ವಂದಿಸಿದರು. ಸುಮಾರು 30 ಮಂದಿ ಮ ಹಿಳೆಯರು ತರಬೇತಿಯ ಸದುಪಯೋಗ ಪಡೆಯಲಿದ್ದಾರೆ.
0 Comments