ಬಾಬು ರಾಜೇಂದ್ರ ಪ್ರಸಾದ ಪ್ರೌಢಶಾಲೆಯಲ್ಲಿ ಸಂಸತ್ತು ಮತ್ತು ಇತರ ಸಂಘಗಳ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಬಾಬು ರಾಜೇಂದ್ರ ಪ್ರಸಾದ ಪ್ರೌಢಶಾಲೆಯಲ್ಲಿ  ಸಂಸತ್ತು ಮತ್ತು ಇತರ ಸಂಘಗಳ ಉದ್ಘಾಟನೆ


 ಮೂಡುಬಿದಿರೆ: ಇಲ್ಲಿನ ಬಾಬು ರಾಜೇಂದ್ರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಮತ್ತು ಇತರ  ಸಂಘಗಳ ಉದ್ಘಾಟನೆಯು ಶುಕ್ರವಾರ ನಡೆಯಿತು.


ಪುತ್ತಿಗೆ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ  ನಾಗವರ್ಮ ಜೈನ್ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿ ಬದುಕಿಗೆ ಗುರಿ ಇರಲಿ ಅದಕ್ಕಾಗಿ ಹಠ ಇರಲಿ. ನಿರಂತರ ಪ್ರಯತ್ನ ಕುಟುಂಬ ಶಾಲೆ ದೇಶದ ಮೇಲೆ ಪ್ರೀತಿ ಇರಲಿ ಎಂದರು.


 ಶಾಲಾಮುಖ್ಯೋಪಾಧ್ಯಾಯಿನಿ  ತೆರೆಸಾ ಕರ್ಡೋಜ ಅಧ್ಯಕ್ಷತೆ ವಹಿಸಿದ್ದರು.


ಆಳ್ವಾಸ್ ಕಾಲೇಜಿನ  ರಾಜ್ಯಶಾಸ್ತ್ರ ವಿಭಾಗ  ಮುಖ್ಯಸ್ಥ. ಸುನೀಲ್ ಅವರು ಸಂಸತ್ತಿನ ಕುರಿತು ಮಾಹಿತಿ ನೀಡಿ ಸಂಸತ್ತು ವಿವಾದಕ್ಕೆ ಇರುವುದಲ್ಲ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇರುವ ವೇದಿಕೆ.  ದೇಶದ ಹಣೆಬರಹ ರೂಪುಗೊಳ್ಳುವುದು ಶಾಲಾ ಕೊಠಡಿಗಳಲ್ಲಿ. ಇದರ ಉದ್ಧೇಶ ಈಡೇರಿಸಿಕೊಳ್ಳಲು ನಿರಂತರ ಪ್ರಯತ್ನ ಬೇಕು. ಮನುಷ್ಯತ್ವ ಬೆಳೆಸಿಕೊಳ್ಳಬೇಕು. ಮಾದರಿ ಜೀವನ ರೂಪಿಸಿಕೊಳ್ಳಬೇಕು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದರು.


ಮುಖ್ಯ ಅತಿಥಿಗಳಾಗಿ  ಸುಧಾರತ್ನಾಕರ್ ಭಾಗವಹಿಸಿದ್ದರು. ವಿದ್ಯಾರ್ಥಿ ಆಕಾಶ್ ಸ್ವಾಗತಿಸಿದರು. ಗಾನವಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಉಪನಾಯಕ ಕುಮಾರ್ ಶಶಾಂಕ ವಂದಿಸಿದರು. ಶ್ರೀಮತಿ ಸುಧಾರತ್ನಾಕರ ಹೇಳಿದರು

Post a Comment

0 Comments