ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ - ವಿವಿಧ ಸ್ಪರ್ಧೆಗಳು
ಮೂಡುಬಿದಿರೆ : ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಸೆ. ೭ರಿಂದ ೧೧ರವರೆಗೆ ಸಮಾಜ ಮಂದಿರದಲ್ಲಿ ಪೂಜಿಸಲ್ಪಡುವ ‘ಮೂಡುಬಿದಿರೆ ಗಣೇಶೋತ್ಸವ’ ಅಂಗವಾಗಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವಿಭಾಗಗಳಲ್ಲಿ ಆ.೧೮ರಂದು ವಾಲಿಬಾಲ್ ಪಂದ್ಯ, ೨೫ರಂದು ಕಬಡ್ಡಿ ಪಂದ್ಯಾಟ ನಡೆಯಲಿದೆ.
ಸೆ.೧ರಂದು ಪ್ರಾಥಮಿಕ, ಪ್ರೌಢ, ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ಚಿತ್ರಕಲೆ ಮತ್ತು ಗಾಯನ ಸ್ಪರ್ಧೆ, ಸೆ.೪ರಂದು ಏಕವ್ಯಕ್ತಿ ಭರತನಾಟ್ಯ, ಸೆ.೫ರಂದು ರಸಪ್ರಶ್ನೆ, ಸೆ.೭ರಂದು ಸಮೂಹ ಭರತನಾಟ್ಯ ಸ್ಪರ್ಧೆ ಮತ್ತು ಹೂ ಕಟ್ಟುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಸೆ.೧೦ರಂದು ರಾಷ್ಟ್ರೀಯ ಸಮಗ್ರ ನೃತ್ಯ ಸ್ಪರ್ಧೆ ನಡೆಯಲಿದೆ ಎಂದರು.
ಸಾಮಾಜಿಕ ಜಾಗೃತಿಗಾಗಿ ರೀಲ್ಸ್ ಮತ್ತು ಪೋಸ್ಟರ್‍ಸ್‌ಗಳು
ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮತ್ತು ಪೋಸ್ಟರ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳು, ಕುಟುಂಬ ಮತ್ತು ಸಾರ್ವಜನಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಭಾಗವಹಿಸಬಹುದು. ಆಸಕ್ತರು ರೀಲ್ಸ್ ಮತ್ತು ಪೋಸ್ಟರ್ ರಚಿಸಿ ಸೆ.೫ರೊಳಗೆ ೯೪೪೮೬೨೫೮೮೮, ೬೩೬೬೨೯೯೯೬೯ ಇಲ್ಲಿಗೆ ರವಾನಿಸಬಹುದು.
ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ.ಎಂ, ಉಪಾಧ್ಯಕ್ಷ ಕೃಷ್ಣರಾಜ ಹೆಗ್ಡೆ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
0 Comments