ಅದ್ದೂರಿ ಶಿವಪಾಡಿ ವೈಭವಕ್ಕೆ ಚಪ್ಪರ ಮುಹೂರ್ತ:ಫೆ.14 ಮತ್ತು 15 ರಂದು ನಡೆಯಲಿದೆ ಐತಿಹಾಸಿಕ ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment
ಅದ್ದೂರಿ ಶಿವಪಾಡಿ ವೈಭವಕ್ಕೆ ಚಪ್ಪರ ಮುಹೂರ್ತ:ಫೆ.14 ಮತ್ತು 15 ರಂದು ನಡೆಯಲಿದೆ ಐತಿಹಾಸಿಕ ಕಾರ್ಯಕ್ರಮ
ಉಡುಪಿ:ಫೆಬ್ರವರಿ 14 ಮತ್ತು 15ರಂದು ಉಡುಪಿ ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಐತಿಹಾಸಿಕ ಶಿವಪಾಡಿ ವೈಭವ ಕಾರ್ಯಕ್ರಮದ ಚಪ್ಪರ ಮಹೂರ್ತವನ್ನು ದೇವಸ್ಥಾನದ ವಠಾರದಲ್ಲಿ ನೆರವೇರಿಸಲಾಯಿತು.
ಮಾಹೆಯ ಎಸ್ಟೇಟ್ ಅಫೀಸರ್ ಶ್ರೀ ಬಾಲಕೃಷ್ಣ ಪ್ರಭು ರವರು ವಿಶಾಲವಾದ ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿದ್ದು‌ ಧಾರ್ಮಿಕ ಕಾರ್ಯಕ್ರಮಗಳು, ಸಾಹಿತ್ಯಕ ಕಾರ್ಯಕ್ರಮಗಳು, ಯಕ್ಷಗಾನ ಮೇಳಗಳು, ಆಹಾರ ಮೇಳಗಳು ನೃತ್ಯ ಮತ್ತು ಚಿತ್ರಕಲಾ ಸ್ಪರ್ಧೆಗಳು ಸೇರಿದಂತೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳು ಇಲ್ಲಿ ನಡೆಯಲಿದೆ. ಸುಮಾರು 2000ಕ್ಕೂ ಅಧಿಕ ಜನರು ಕುಳಿತುಕೊಳ್ಳಬಹುದಾದ ಬೃಹತ್ ಸಭಾಂಗಣ, ಬೃಹತ್ ವೇದಿಕೆ, ಕೃಷಿ, ಆಹಾರ, ವಸ್ತು ಪ್ರದರ್ಶನ, ಪುಸ್ತಕ ಭಂಡಾರ ಸೇರಿದಂತೆ 250 ಅಧಿಕ ಮಳಿಗೆಗಳು, ಅನ್ನ ಪ್ರಸಾದ ನೆರವೇರುವ ಸ್ಥಳ ಸಹಿತ ವಿಶಾಲ ಜಾಗಕ್ಕೆ ಚಪ್ಪರ ಮುಹೂರ್ತ ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ದಿನೇಶ್ ಪ್ರಭು, ಆಡಳಿತದ ಮೊಕ್ತೇಸರರಾದ ಮಹೇಶ್ ಠಾಕೂರ್, ಪ್ರಮುಖರಾದ ಶ್ರೀಕಾಂತ್ ಪ್ರಭು, ಸತೀಶ್ ಪಾಟೀಲ್, ಪ್ರಕಾಶ್ ಪ್ರಭು, ಪ್ರಕಾಶ್ ಕುಕ್ಕೆಹಳ್ಳಿ, ಮಂಜು ಶಾಮಿಯಾನ, ಸಂದೇಶ ಪ್ರಭು ಸೇರಿದಂತೆ ಇತರರು ಉಪಸ್ಥಿತರಿದ್ದರು.

Post a Comment

0 Comments