ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡುಬಿದಿರೆ : ಎನ್.ಎಸ್. ಎಸ್ ಘಟಕದ 3 ವಿದ್ಯಾರ್ಥಿಗಳಿಗೆ ರಾಜ್ಯ ಪ್ರಶಸ್ತಿ

ಜಾಹೀರಾತು/Advertisment
ಜಾಹೀರಾತು/Advertisment

 ಎಸ್.ಎನ್.ಎಂ  ಪಾಲಿಟೆಕ್ನಿಕ್ ಮೂಡುಬಿದಿರೆ : ಎನ್.ಎಸ್. ಎಸ್  ಘಟಕದ 3 ವಿದ್ಯಾರ್ಥಿಗಳಿಗೆ  ರಾಜ್ಯ ಪ್ರಶಸ್ತಿ

 ಮೂಡಬಿದರೆಯ  ಎಸ್.ಎನ್.ಎಂ ಪಾಲಿಟೆಕ್ನಿಕ್ ನ ಮೂವರು ವಿದ್ಯಾರ್ಥಿಗಳು 2022-23ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಸ್ವಯಂಸೇವಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಾಲೇಜಿನ ಎನ್.ಎಸ್.ಎಸ್ ಘಟಕ ನಡೆಸಿದ ಎಲ್ಲಾ  ಚಟುವಟಿಕೆ , ಶಿಬಿರಗಳ  ವರದಿಗಳನ್ನು ಆಧರಿಸಿ, 2023-24 ರ ಸಾಲಿನ ಘಟಕ ನಾಯಕರಾದ ಪ್ರಖ್ಯಾತ್, ಧನುಶ್ರೀ ಮತ್ತು ಪ್ರೀತಿ ಇವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.


 ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ  ಕೆ. ಅಭಯಚಂದ್ರ ಜೈನ್, ಉಪಾಧ್ಯಕ್ಷರಾದ  ಎಸ್.ಡಿ  ಸಂಪತ್ ಸಾಮ್ರಾಜ್ಯ  ಮತ್ತು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಹಾಗೆಯೆ ಎಲ್ಲಾ ಎನ್.ಎಸ್.ಎಸ್  ಚಟುವಟಿಕೆಗಳಿಗೆ ಬೆನ್ನುಲುಬಾಗಿ ಪ್ರೋತ್ಸಾಹ ನೀಡುತ್ತಿರುವ ಪ್ರಾಂಶುಪಾಲರಾದ  ಜೆ.ಜೆ. ಪಿಂಟೋ,  ಎನ್.ಎಸ್.ಎಸ್  ಕಾರ್ಯಕ್ರಮ ಅಧಿಕಾರಿಗಳು,  ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ವರ್ಗ  ಈ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. 

 ಇದೇ ಸಂಸ್ಥೆಯ ಪೂರ್ವ  ವಿದ್ಯಾರ್ಥಿಗಳಾದ ಪ್ರಮೋದ್ ಹಾಗು ಶುಭಶ್ರೀ ಇವರಿಗೆ 6 ವರ್ಷಗಳ ಹಿಂದೆ ರಾಜ್ಯ ಪ್ರಶಸ್ತಿ ಲಭಿಸಿತ್ತು.


ಈ ಪ್ರಶಸ್ತಿಗಳನ್ನು ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯುವ 2024-25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯಮಟ್ಟದ ಘಟಕಾಧಿಕಾರಿಗಳ ಕಾರ್ಯಾಗಾರದಲ್ಲಿ  ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು, ಅಧಿಕಾರಿಗಳು  ವಿತರಿಸಲಿದ್ದಾರೆ.

Post a Comment

0 Comments