ಬಿಲ್ಲವ ಪುರೋಹಿತ 'ಶಾಂತಿ' ಮಾರ್ಗದರ್ಶನದ ಪಟ್ಲಕೆರೆ ನಾರಾಯಣ ಶಾಂತಿಯ ಮಗನ ಮುಂಬಯಿ ಮನೆಗೆ ನಳಿನ್ ಭೇಟಿ

ಜಾಹೀರಾತು/Advertisment
ಜಾಹೀರಾತು/Advertisment

 ಬಿಲ್ಲವ ಪುರೋಹಿತ 'ಶಾಂತಿ' ಮಾರ್ಗದರ್ಶನದ ಪಟ್ಲಕೆರೆ ನಾರಾಯಣ ಶಾಂತಿಯ ಮಗನ ಮುಂಬಯಿ ಮನೆಗೆ ನಳಿನ್ ಭೇಟಿ

ಲೋಕಸಭಾ ಚುನಾವಣಾ ನಿಮಿತ್ತ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲುರವರು ಮುಂಬಯಿಯಲ್ಲಿ ನೆಲೆಸಿರುವ ಪಟ್ಲಕೆರೆ ದಿ. ನಾರಾಯಣ ಶಾಂತಿಯವರ ಪುತ್ರನ ಮನೆಗೆ ಭೇಟಿ ನೀಡಿದರು.


ಧಾರ್ಮಿಕ ಕ್ಷೇತ್ರದಲ್ಲಿ ವೈಧಿಕ ಸೇವೆಯ ಮುಖಾಂತರ ಬಿಲ್ಲವ ಸಮಾಜಕ್ಕೆ ಹಲವು ದಶಕಗಳ ಕಾಲ ಮಾರ್ಗದರ್ಶನ ಮತ್ತು ಸೇವೆಗೈದ ದಿ. ಪಟ್ಲಕೆರೆ ಶ್ರೀ ನಾರಾಯಣ ಶಾಂತಿಯವರು ಬಿಲ್ಲವ ಸಮಾಜದ ಶಾಂತಿ ಎಂಬ ಪುರೋಹಿತ ವರ್ಗಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ಅವರ ಪುತ್ರ ಮುಂಬೈ ಉದ್ಯಮಿ, ಸಮಾಜ ಸೇವಕ  ಶ್ರೀ ಶಶಿಧರ್ ಬಂಗೇರ ಪಟ್ಲಕೆರೆ ಯವರ ನಿವಾಸಕ್ಕೆ ಚುನಾವಣಾ ಪ್ರಚಾರದಲ್ಲಿ ಸಂದರ್ಭದಲ್ಲಿ ಭೇಟಿ ನೀಡಿ ಮಾತುಕತೆ ನಡೆಸಿದ್ದು ಕುಟುಂಬಸ್ಥರು ಸಂಸದರನ್ನು ಅಭಿನಂದಿಸಿದರು.


ಮಹಾರಾಷ್ಟ್ರ ಭಾರತೀಯ ಜನತಾ ಪಾರ್ಟಿಯ ಮುಖಂಡರು, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಸಚ್ಚಿದಾನಂದ್ ಶೆಟ್ಟಿ ಮತ್ತು ಮೋಹನ್ ಗೌಡ ಉಪಸ್ಥಿತರಿದ್ದರು.

Post a Comment

0 Comments