ಬಾರ್ ಮಾಲಕನಿಂದ ವ್ಯಕ್ತಿಗೆ ಹಲ್ಲೆ

ಜಾಹೀರಾತು/Advertisment
ಜಾಹೀರಾತು/Advertisment

 ಬಾರ್  ಮಾಲಕನಿಂದ ವ್ಯಕ್ತಿಗೆ ಹಲ್ಲೆ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಶಾಲಾ- ಕಾಲೇಜು ಬಳಿ ವ್ಯವಹಾರ ನಡೆಸುತ್ತಿರುವ ಬಾರ್ ನ ಮಾಲಕನೋರ್ವ  ಅಲ್ಲೇ ಸಮೀಪದಲ್ಲಿ ವಾಸ ಇರುವ ಮನೆಯ ಯಜಮಾನನಿಗೆ ಮಾರಾಕಾಯುಧದಿಂದ ತಲೆಗೆ ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

  ಹಲ್ಲೆಗೊಳಗಾಗಿರುವ ನಾರಾಯಣ ಪೂಜಾರಿ ಅವರು ಮೂಡುಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಹಲ್ಲೆ ಮಾಡಿರುವ ಡಿನ್ನೆರ್ಸ್ ಡೆನ್ ಬಾರ್ ನ ಮಾಲಕ ಮನೋಜ್ ಹೆಗ್ಡೆ ತಲೆ ಮರೆಸಿಕೊಂಡಿದ್ದಾನೆ.


  

  ಪ್ರಕರಣದ ಹಿನ್ನೆಲೆ: ಕಳೆದ ಒಂದು ವರ್ಷದ ಈಚೆಗೆ ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜು ಬಳಿ ಆರಂಭಗೊಂಡಿರುವ ಡಿನ್ನೆರ್ಸ್ ಡೆನ್ ಬಾರ್ ನಿಂದ ಹೊರ ಬಿಡುತ್ತಿರುವ ಡ್ರೈನೇಜ್  ಪಕ್ಕದಲ್ಲಿರುವ ನಾರಾಯಣ ಪೂಜಾರಿ ಅವರ ಮನೆಯ ಬಳಿ ಹೋಗುತ್ತಿದ್ದು ಸುತ್ತ ಮುತ್ತ ವಾಸನೆ ಬೀರುತ್ತಿದೆ ಈ ಬಗ್ಗೆ ಪುರಸಭೆ ದೂರು ನೀಡಲಾಗಿತ್ತು. ಪುರಸಭಾ ಅಧಿಕಾರಿಗಳು ಬಂದು ಡ್ರೈನೇಜ್ ಸಮರ್ಪಕ ನಿರ್ವಹಣೆ ಮಾಡಲು ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಈ ಹಿಂದೆ  ಸೂಚಿಸಿದ್ದರು.

 


ಆದರೆ ಇದೀಗ ಮತ್ತೆ ಡ್ರೈನೇಜನ್ನು ಹೊರಗೆ ಬಿಡುತ್ತಿರುವುದರಿನಿಂದ ವಾಸನೆ ಬೀರುತ್ತಿದ್ದು ಸಮೀಪದ ನಿವಾಸಿಗಳು ತೊಂದರೆಯನ್ನು ಅನುಭವಿಸುತ್ತಿದ್ದರು. ಅಲ್ಲದೆ ಲಾಡ್ಜ್ ನಲ್ಲಿ ಬಳಸುತ್ತಿದ್ದ ಸಿರಿಂಜ್ ಗಳು ಮತ್ತು ಅನೈತಿಕ ಚಟುವಟಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಲಾಡ್ಜ್ ನಿಂದ ಹೊರಗಡೆ ಬಿಸಾಡುತ್ತಿರುವುದರ ಬಗ್ಗೆ ಬಾರ್ ನ್ನು ನಡೆಸುತ್ತಿರುವ ಹರಿ ಹೆಗ್ಡೆಗೆ ಕಾಲ್ ಮೂಲಕ ನಿನ್ನೆ ರಾತ್ರಿ ತಿಳಿಸಿದ್ದರು. ಈ ಸಂದರ್ಭ ಬಾರ್ ಮಾಲಕ ಮನೋಜ್ ಹೆಗ್ಡೆ ಅವರು ಮೊಬೈಲ್ ನ್ನು ಹರಿ ಹೆಗ್ಡೆಯಿಂದ ತೆಗೆದುಕೊಂಡು ನಿನ್ನನ್ನು ಬಿಡುವುದಿಲ್ಲ ಸಾಯಿಸುತ್ತೇನೆಂದು ಬೆದರಿಕೆಯನ್ನು ಹಾಕುತ್ತಾ ನಾರಾಯಣ ಅವರ ಅಂಗಡಿಗೆ ಬಂದಿದ್ದಾರೆ.

  ಮನೋಜ್ ಅವರ ಕೈಯಲ್ಲಿ ಮಾರಾಕಾಯುಧ ಇರುವುದನ್ನು ಗಮನಿಸಿರುವ ನಾರಾಯಣ ಅವರು ಅಂಗಡಿಯ ಹಿಂದಿನ ಬಾಗಿಲಿಗೆ ಓಡಿ ಹೆಂಡತಿಯನ್ನು ಕರೆದಿದ್ದಾರೆ. ಹೆಂಡತಿ ತಡೆಯಲು ಬಂದಾಗ ಅವರನ್ನು ದೂಡಿ ನಾರಾಯಣ ಅವರಿಗೆ ಹಲ್ಲೆ ನಡೆಸಿದ್ದು ಪೆಟ್ಟು ಕುತ್ತಿಗೆಗೆ ಬೀಳುವುದು ತಪ್ಪಿ ಕಿವಿಯ ಭಾಗಕ್ಕೆ ಬಿದ್ದಿರುವುದರಿಂದ ಕಿವಿಯ ಸೈಡಿನ ಒಂದು ಭಾಗ ತುಂಡಾಗಿದೆ. 

 ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ಮನೋಜ್ ಹೆಗ್ಡೆಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

Post a Comment

0 Comments