ಬ್ಯಾಡ್ಮಿಂಟನ್: ಸತತ ೧೮ನೇ ಬಾರಿ ಆಳ್ವಾಸ್ ಚಾಂಪಿಯನ್
ಮೂಡುಬಿದಿರೆ: ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಫ್‌ನಲ್ಲಿ ಆಳ್ವಾಸ್ ಕಾಲೇಜು ಪ್ರಶಸ್ತಿ ಜಯಭೇರಿಯಾಗಿದೆ. ಸತತ ೧೮ನೇ ಬಾರಿ ದಿ. ಫ್ಯಾಬಿಯನ್ ಕುಲಾಸೊ ಸ್ಮಾರಕ ಪರ್ಯಾಯ ಫಲಕವನ್ನು ಮುಡಿಗೇರಿಸಿಕೊಂಡಿದೆ.
ಫೈನಲ್‌ನಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ತಂಡವನ್ನು ೩೫-೦೫, ೩೫-೧೧ ನೇರ ಸೆಟ್‌ಗಳಿಂದ ಸೋಲಿಸಿದ ಆಳ್ವಾಸ್ ಕಾಲೇಜು ತಂಡವು ಚಾಂಪಿಯನ್ ಆಯಿತು.
ಸೆಮಿಫೈನಲ್‌ನಲ್ಲಿ ಕಾರ್ಕಳದ ಎಸ್‌ವಿಟಿ ಕಾಲೇಜು ತಂಡವನ್ನು ೩೫-೭, ೩೫-೧೧ ನೇರ ಸೆಟ್‌ಗಳಿಂದ ಸೋಲಿಸಿತ್ತು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
0 Comments